ಸಾಂದರ್ಭಿಕ ಚಿತ್ರ 
ರಾಜ್ಯ

ತಬ್ಲೀಘಿನದ್ದು ವೈರಸ್ ಜಿಹಾದಾ?: ಸಂಸದ ಅಭಿಪ್ರಾಯ!

ಕೊರೊನಾ ವೈರಸ್‌ ಸೋಂಕು ಮತ್ತು ಇಸ್ಲಾಂ ಭಯೋತ್ಪಾದನೆಯ ಬಗ್ಗೆ ಕೆಲ ದಿನಗಳ ಹಿಂದೆ ಫೇಸ್‌ಬುಕ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದ, ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ, ಇದರ ಮುಂದುವರಿದ ಭಾಗವನ್ನು ಸೋಮವಾರ ಬರೆದುಕೊಂಡಿದ್ದಾರೆ.

ಶಿರಸಿ: ಕೊರೊನಾ ವೈರಸ್‌ ಸೋಂಕು ಮತ್ತು ಇಸ್ಲಾಂ ಭಯೋತ್ಪಾದನೆಯ ಬಗ್ಗೆ ಕೆಲ ದಿನಗಳ ಹಿಂದೆ ಫೇಸ್‌ಬುಕ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದ, ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ, ಇದರ ಮುಂದುವರಿದ ಭಾಗವನ್ನು ಸೋಮವಾರ ಬರೆದುಕೊಂಡಿದ್ದಾರೆ.

ಇಸ್ಲಾಮ್ ರಾಜಕಾರಣ!!!
ಪ್ರಪಂಚದ ಅಷ್ಟೂ ದೇಶಗಳ ಅದೆಷ್ಟೋ ಮಂದಿ ಪ್ರಚಂಡ ವಿಜ್ಞಾನಿಗಳಿಗೂ ಸವಾಲಾಗಿರುವ, ಎಲ್ಲಾ ವೈದ್ಯರಿಗೂ ಕಗ್ಗಂಟಾಗಿರುವ, ಜಗತ್ತಿನ ಅಷ್ಟೂ ಬಲಾಢ್ಯ ದೇಶಗಳೇ ಬೆಚ್ಚಿಬಿದ್ದಿರುವ, ಅಬಾಲ ವೃದ್ಧರಾದಿಯಾಗಿ ಎಲ್ಲರೂ ಭಯಭೀತರಾಗಿರುವ ಕೊರೋನಾ ಎಂಬ ಮಹಾಮಾರಿಯಂಥ ವೈರಸ್ಸು ಎಲ್ಲ ಕಡೆ ಹಬ್ಬುತ್ತಿದೆ...! ಈ ಮಾರಣಾಂತಿಕ ಸೋಂಕುರೋಗ ವ್ಯಾಪಕವಾಗಿ ಯಾರೂ ಊಹಿಸದಷ್ಟು ವೇಗದಲ್ಲಿ ಹರಡುತ್ತಿದೆ...! ಅದು ಪ್ರಸರಣವಾದೆಡೆಯಲ್ಲೆಲ್ಲಾ ಮರಣ ತಾಂಡವವಾಡುತ್ತಿದೆ. ಬರಿಗಣ್ಣಿಗೆ ಕಾಣಿಸದ ಈ ಭೀಕರ ಹೆಮ್ಮಾರಿಯನ್ನು ಮಣಿಸುವುದು ಹೇಗೆಂಬ ಉಪಾಯಗಾಣದೆ ಆಧುನಿಕ ಮನುಷ್ಯ ತಲ್ಲಣಿಸಿ ಮನೆಯೊಳಗೇ ಅವಿತುಕುಳಿತಿದ್ದಾನೆ. ತೀರಾ ಅಸಹಾಯಕನಾಗಿದ್ದಾನೆ...

ನಾವು ಬುದ್ಧಿವಂತ ಮನುಷ್ಯರು ಕಟ್ಟಿಕೊಂಡಿರುವ ಆ ಅತ್ಯಾಧುನಿಕ ಜಗತ್ತಿಗೆ ಇಂಥದ್ದೊಂದು ಗಂಡಾಂತರ ಬರಬಹುದು, ಅದರಲ್ಲೂ ಕಣ್ಣಿಗೆ ಕಾಣಿಸದ ಒಂದು ಯಕಶ್ಚಿತ್ ವೈರಸ್ಸಿನ ಎದುರು ಹೀಗೆ ಮಾನವ ಜನಾಂಗವೇ ಮರಣಭಯದಿಂದ ಶರಣಾಗಬಹುದೆನ್ನುವ ಕಿಂಚಿತ್ ಊಹೆಯೂ ಯಾರಿಗೂ ಇರಲಿಲ್ಲ... !

ಅದೇ ರೀತಿ ಕೊರೋನಾ ಎಂಬ ಮಾಹಾಮಾರಿ ವೈರಾಣುವನ್ನು ಮಣಿಸಲು, ಅದು ಹರಡುವುದನ್ನು ತಡೆಗಟ್ಟಲು ಇಡೀ ದೇಶವೇ ಒಗ್ಗಟ್ಟಾಗಿ ಹೋರಾಡಿ, ಪ್ರಪಂಚದ ಬೇರೆಲ್ಲಾ ಮುಂದುವರಿದ ದೇಶಗಳಿಗೆ ಹೋಲಿಸಿದರೆ, ಬಹಳಷ್ಟು ಯಶಸ್ಸುಗಳಿಸಿ, ಅತ್ಯಂತ ಕಡಿಮೆ ಸಂಖ್ಯೆಯ ಸೋಂಕಿತರನ್ನು ಹೊಂದಿ ಇನ್ನೇನು ಈ ಯುದ್ಧದಲ್ಲಿ ನಾವು ನಿಶ್ಚಿತವಾಗಿಯೂ ಜಯಗಳಿಸುತ್ತೇವೆ ಎಂಬ ದೃಢನಂಬಿಕೆಯಲ್ಲಿರುವಾಗಲೇ ಇಂಥಾದ್ದೊಂದು ದೇಶ ದ್ರೋಹದ ಕೆಲಸ ನಡೆಯಬಹುದು, ಗಂಭೀರ ಮಾರಣಾಂತಿಕ ಖಾಯಿಲೆಯೊಂದನ್ನು ದೇವರ ಹೆಸರಿನಲ್ಲಿ, ನಂಬಿಕೆಯ ಹೆಸರಿನಲ್ಲಿ ದೇಶದ ಮೂಲೆ ಮೂಲೆಗೂ ಹರಡಬಹುದು... ಆ ಮೂಲಕ ಭಾರತದ ಕೋಟ್ಯಂತರ ಪ್ರಜೆಗಳಿಗೆ ಗಂಡಾಂತರ ಉಂಟುಮಾಡಬಹುದೆನ್ನುವ ಕಿಂಚಿತ್ ಊಹೆಯೂ ಯಾರಿಗೂ ಇರಲಿಲ್ಲ... !

ಕೊರೋನಾ ಎಂಬ ನಿಗೂಢ ವೈರಸ್ಸಿನಿಂದ ಉಂಟಾಗಬಹುದಾದ ಅಪಾಯದ ಅರಿವೇ ಇಲ್ಲದೆ, ಅದನ್ನು ಅರ್ಥ ಮಾಡಿಕೊಳ್ಳಲಾಗದೆ ಜಗತ್ತಿನ ಅತ್ಯಂತ ಮುಂದುವರಿದ ದೇಶಗಳ ವಿಜ್ಞಾನಿಗಳು, ವೈದ್ಯರು ಹೇಗೆ ಸೋತು ಹೋದರೋ... ಅದೇ ರೀತಿ ತಬ್ಲೀಘಿ ಜಮಾತ್ ಎಂಬ ರಹಸ್ಯ ಸಂಘಟನೆ ಮತ್ತು ಇಸ್ಲಾಮ್ ಎಂಬ ಅಪಾಯಕಾರೀ ಮತವನ್ನು, ಅದು ಇಡೀ
ಮಾನವಜನಾಂಗಕ್ಕೆ ತಂದೊಡ್ಡಲಿರುವ ಗಂಡಾಂತರವನ್ನು ಅಂದಾಜಿಸುವಲ್ಲಿ ಇಡೀ ಪ್ರಪಂಚದ ಅಷ್ಟೂ ರಾಜಕಾರಣಿಗಳು, ರಾಜತಂತ್ರಜ್ಞರು, ಮುತ್ಸದ್ದಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಅಂತ ಅನ್ನಿಸುತ್ತಿದೆ. ಒಂದರ್ಥದಲ್ಲಿ ವೇಗವಾಗಿ ವೃದ್ಧಿಗೊಳ್ಳುತ್ತಾ ಜಗತ್ತಿನಾದ್ಯಂತ ತನ್ನ ಕರಾಳ ಹಸ್ತವನ್ನು ಪಸರಿಸುತ್ತಾ ಮಾರಣಹೋಮ ಎಸಗುತ್ತಿರುವಕೊರೋನಾ ವೈರಸ್ಸು ಮತ್ತು ಅದೇ ರೀತಿ ವೇಗವಾಗಿ ವೃದ್ಧಿಗೊಳ್ಳುತ್ತಾ, ಜಗತ್ತಿನಾದ್ಯಂತ ಭಯೋತ್ಪಾದನೆ ಮತ್ತು ವಿಧ್ವಂಸಕ ಕೃತ್ಯಗಳ ಮೂಲಕ ಮನುಕುಲಕ್ಕೇ ಗಂಡಾಂತರ ತಂದೊಡ್ಡುತ್ತಿರುವ ಇಸ್ಲಾಮ್, ಈ ಎರಡಕ್ಕೂ ಒಂದು ರೀತಿಯ ಹೋಲಿಕೆ ಇದೆ. 

ಕೊರೊನಾ ವೈರಸ್‌ ಸೋಂಕು ಮತ್ತು ಇಸ್ಲಾಂ ಭಯೋತ್ಪಾದನೆಯ ಬಗ್ಗೆ ಕೆಲ ದಿನಗಳ ಹಿಂದೆ ಫೇಸ್‌ಬುಕ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದ, ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ, ಇದರ ಮುಂದುವರಿದ ಭಾಗವನ್ನು ಸೋಮವಾರ ಬರೆದುಕೊಂಡಿದ್ದಾರೆ.

.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

Punishment: 5 ವರ್ಷದ ಬಾಲಕನನ್ನು ಮರಕ್ಕೆ ನೇತು ಹಾಕಿದ ಶಿಕ್ಷಕಿ!

SCROLL FOR NEXT