ರಾಜ್ಯ

ತರಕಾರಿ, ಹಣ್ಣು ಖರೀದಿಸಿ ಮಂಡ್ಯ ರೈತರಿಗೆ ನೆರವಾದ ಸಂಸದ ಡಿ.ಕೆ.ಸುರೇಶ್

Raghavendra Adiga

ಮಂಡ್ಯ:  ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಠಕ್ಕೆ ಸಿಲುಕಿರುವ ಮಂಡ್ಯದ ರೈತರ ನೆರವಿಗೆ ಸಂಸದ ಡಿ.ಕೆ.ಸುರೇಶ್ ಸ್ಪಂದಿಸಿದ್ದುಅವರು  ಬೆಳೆದ ಸುಮಾರು 240 ಟನ್ನಷ್ಟು ತರಕಾರಿ, ಹಣ್ಣುಗಳನ್ನು ಖರೀದಿ ಮಾಡಿದ್ದಾರೆ.

ಕಳೆದ ಒಂದು ವಾರದಿಂದ ಮಂಡ್ಯಜಿಲ್ಲೆಯಲ್ಲಿ ಯಾರಿಗೂ ತಿಳಿಯದಂತೆ ರೈತರ ತೋಟಗಳಿಗೆ ಭೇಟಿ ನೀಡುತ್ತಿರುವ ಸಂಸದ ಡಿ.ಕೆ ಸುರೇಶ್ ರೈತರಿಗೆ ಆಗುತ್ತಿದ್ದ ನಷ್ಟವನ್ನು ತಪ್ಪಿಸುತ್ತಿದ್ದಾರೆ. ತಮ್ಮ ಕ್ಷೇತ್ರದ ಜನರಿಗಾಗಿ ಸುಮಾರು 240 ಟನ್ನಷ್ಟು ತರಕಾರಿ ಹಾಗೂ ಹಣ್ಣುಗಳನ್ನು ಜಿಲ್ಲೆಯ ರೈತರಿಂದ ಖರೀದಿ ಮಾಡಿ ತೆಗೆದುಕೊಂಡು ಹೋಗಿದ್ದಾರೆ.

ಮದ್ದೂರು, ಪಾಂಡವಪುರ, ಕೆ.ಆರ್.ಪೇಟೆ, ಮಂಡ್ಯ ತಾಲ್ಲೂಕಿನ ವಿವಿಧ ರೈತರ ತೋಟಗಳಿಗೆ ಭೇಟಿ ನೀಡಿ ಕಲ್ಲಂಗಡಿ, ಕೋಸು, ಟೊಮ್ಯಾಟೋ, ಕುಂಬಳಕಾಯಿ ಸೇರಿದಂತೆ ವಿವಿಧ ಬಗೆಯ ಸುಮಾರು 248 ಟನ್ ತರಕಾರಿಗಳನ್ನು ಜಿಲ್ಲಾ ತೋಟಗಾರಿಕೆ ಇಲಾಖೆ ಮೂಲಕ ಖರೀದಿ ಮಾಡಿ ರೈತರಿಗೆ ಸಮಯಕ್ಕೆ ಸರಿಯಾಗಿ ಹಣ ನೀಡಿದ್ದಾರೆ.

ಸಂಸದರ ಖರೀದಿಯಿಂದ ಸುಮಾರು 6 ಕೋಟಿ ರೂಪಾಯಿಗಳ ವ್ಯವಹಾರ ನಡೆದಿದ್ದು, ರೈತರಿಗೆ ಆಗುತ್ತಿದ್ದ ನಷ್ಟ ತಪ್ಪಿಸಿದ್ದಾರೆ. ಡಿ.ಕೆ.ಸುರೇಶ್ ರವರ ಈ ಕಾರ್ಯಕ್ಕೆ ಜಿಲ್ಲೆಯ ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಜಿಲ್ಲೆಯ ಜನ ಪ್ರತಿನಿಧಿಗಳು ಈ ರೀತಿ ಕೆಲಸ ಮಾಡದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

-ನಾಗಯ್ಯ

SCROLL FOR NEXT