ತಂದೆಯಾದ ಖುಷಿ ಹೆಚ್ಚಿದೆ, ಆದರೆ ಕೊರೋನಾ ಸೋಂಕಿತರಿಗೆ ನನ್ನ ಅಗತ್ಯ ಅದಕ್ಕಿಂತ ಹೆಚ್ಚಿದೆ!
ತಂದೆಯಾದ ಖುಷಿ ಒಂದೆಡೆಯಾದರೆ ಮಗು ಜನಿಸಿ 17 ದಿನಗಳಾದ ಅದನ್ನು ಸ್ಪರ್ಶಿಸುವ ಭಾಗ್ಯವಿಲ್ಲ ಎಂದು ನರ್ಸ್ ಕೊರಗುತ್ತಿದ್ದಾರೆ.
ಬೆಂಗಳೂರು: ತಂದೆಯಾದ ಖುಷಿ ಒಂದೆಡೆಯಾದರೆ ಮಗು ಜನಿಸಿ 17 ದಿನಗಳಾದ ಅದನ್ನು ಸ್ಪರ್ಶಿಸುವ ಭಾಗ್ಯವಿಲ್ಲ ಎಂದು ನರ್ಸ್ ಕೊರಗುತ್ತಿದ್ದಾರೆ.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನರ್ಸ್ ಆಗಿ ಬೆಳಗಾವಿ ಮೂಲದ ವಿದ್ಯಾನಂದ ಮಂಗವತಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಆಸ್ಪತ್ರೆಯಲ್ಲಿ ಕೊರೋನಾಗೆ ವಿಶೇಷ ಚಿಕಿತ್ಸಾ ಕೇಂದ್ರ ಆರಂಭಗೊಂಡಾಗಿನಿಂದಲೂ ವಿದ್ಯಾನಂದ ಕೆಲಸದಲ್ಲಿ ಸಕ್ರಿಯರಾಗಿದ್ದಾರೆ.
ಕರ್ತವ್ಯದ ನಡುವೆ ಮಾರ್ಚ್ 27ರಂದು ತಾವು ತಂದೆಯಾದ ಸುದ್ದಿ ಬಂದರೂ ಕೆಲಸವನ್ನು ಬಿಟ್ಟು ಹೋಗುವಂತಿಲ್ಲ. ಇನ್ನು ಈ ಬಗ್ಗೆ ಮಾತನಾಡಿರುವ ವಿದ್ಯಾನಂದ್ ಅವರು ಮಗು ಹುಟ್ಟಿದ ಖುಷಿ ಹೆಚ್ಚಿದೆ. ಆದರೆ ಕರ್ತವ್ಯದ ದೃಷ್ಠಿಯಿಂದಾಗಿ ನನಗೆ ರಜೆ ಸಿಗುತ್ತಿಲ್ಲ ಎಂದರು.
ತಂದೆಯಾದ ಖುಷಿ ಮನಸ್ಸಿನಲ್ಲಿಯೇ ಸವಿಯುತ್ತಿದ್ದೆನೆ. ಅದೂ ಯಾವಾಗ ನನ್ನ ಮಗುವನ್ನು ಸ್ಪರ್ಶಿಸುತ್ತೇನೋ ಎಂಬ ಕಾತುರತೆ ಇದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕೊರೋನಾ ಸೋಂಕಿತರಿಗೆ ನನ್ನ ಅವಶ್ಯಕತೆ ಹೆಚ್ಚಿದೆ ಎಂದು ಹೇಳಿದ್ದಾರೆ.