ರಾಜ್ಯ

ಕೆ.ಆರ್.ಪೇಟೆ: ಫೇಸ್ ಬುಕ್‌ನಲ್ಲಿ ಪ್ರೀತಿಸಿ ಮದುವೆಯಾಗಿದ್ದ ಮಡದಿಗೆ ವರದಕ್ಷಿಣಿ ಕಿರುಕುಳ, ಗೃಹಿಣಿ ಆತ್ಮಹತ್ಯೆ.

ವರದಕ್ಷಿಣಿ ಕಿರುಕುಳದಿಂದ ಬೇಸತ್ತ ಗೃಹಿಣಿ ನೇಣುಬಿಗಿದುಕೊಂಡು ಆತ್ಮಹತ್ಯೆಮಾಡಿಕೊಂಡಿರುವ ಘಟನೆ ಕೆ.ಆರ್.ಪೇಟೆ ಪಟ್ಟಣದಲ್ಲಿ ಮಂಗಳವಾರ ನಡೆದಿದೆ.  

ಮಂಡ್ಯ: ವರದಕ್ಷಿಣಿ ಕಿರುಕುಳದಿಂದ ಬೇಸತ್ತ ಗೃಹಿಣಿ ನೇಣುಬಿಗಿದುಕೊಂಡು ಆತ್ಮಹತ್ಯೆಮಾಡಿಕೊಂಡಿರುವ ಘಟನೆ ಕೆ.ಆರ್.ಪೇಟೆ ಪಟ್ಟಣದಲ್ಲಿ ಮಂಗಳವಾರ ನಡೆದಿದೆ.  

ಕೆ.ಆರ್.ನಗರ ತಾಲ್ಲೂಕಿನ ಮರ್ಲೆಂ ಗ್ರಾಮದ ಅಂಜು(೨೦) ಎಂಬುವವರೇ ನೇಣಿಗೆ ಶರಣಾದ ಗೃಹಿಣಿಯಾಗಿದ್ದಾರೆ.

ಘಟನೆ ವಿವರ: ಕೆ.ಆರ್.ನಗರ ತಾಲ್ಲೂಕಿನ ಮರ್ಲೆ  ಗ್ರಾಮದ ಅಂಜು ಕಳೆದ ಎರಡು ವರ್ಷಗಳ ಹಿಂದೆ ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದ ಕೆ.ಆರ್.ಪೇಟೆ ಪಟ್ಟಣದ ಟೌನ್ ಕ್ಲಬ್ ಬಡಾವಣೆಯ ನಿವಾಸಿ ಕುಪ್ಪಹಳ್ಳಿ  ಆದಿತ್ಯ (೨೨) ಎಂಬಾತನನ್ನು ಪ್ರೀತಿಸಿ  ತಂದೆ-ತಾಯಿಗಳು ಹಾಗೂ ಬಂಧುಗಳ ವಿರೋಧದ ನಡುವೆಯೂ ವಿವಾಹವಾಗಿದ್ದರು.  

ಮಂಗಳವಾರ ಮಧ್ಯಾಹ್ನ  ಪತಿ ಆದಿತ್ಯ ಆಕೆಗೆ  ತವರು ಮನೆಯಿಂದ ಹಣ ತರುವಂತೆ ಪೀಡಿಸಿ ಜಗಳವಾಡಿದ್ದನು. ಇದರಿಂದ ಬೇಸತ್ತ ಅಂಜು ಪತಿ ಆದಿತ್ಯ ಮಗುವಿಗೆ ಹಾಲು ಹಾಗೂ ಮನೆಗೆ ಅಗತ್ಯ ವಸ್ತುಗಳನ್ನು ತರಲು ಹೊರ ಹೋಗಿದ್ದಾಗ ತನ್ನ ಮನೆಯಲ್ಲಿಯೇ ನೇಣು  ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾಳೆ.

ಸ್ಥಳಕ್ಕೆ  ನಾಗಮಂಗಲ ಡಿವೈಎಸ್ ಪಿ ಕೆ.ಬಿ.ವಿಶ್ವನಾಥ್, ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್ ಮತ್ತು ಸಬ್ ಇನ್ಸ್ ಪೆಕ್ಟರ್ ಬಿ.ಪಿ.ಬ್ಯಾಟರಾಯಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಅಂಜುವಿನ ಪೋಷಕರು ನೀಡಿದ ದೂರಿನ ಮೇರೆಗೆ ಮೃತಳ ಗಂಡ  ಆದಿತ್ಯನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಅಲ್ಲದೆ   ಅಂಜುವಿನ  ಮೃತದೇಹವನ್ನು ವೈಧ್ಯಕೀಯ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರ ಮಾಡಿದ್ದಾರೆ. 

ಫೇಸ್ ಬುಕ್ ನಲ್ಲಿ ಪರಿಚಯವಾಗಿ ವಿವಾಹವಾಗಿದ್ದ  ಎಲ್ಲರೂ ಮೆಚ್ಚುವಂತೆ ಬದುಕಿ ತೋರಿಸುವುದಾಗಿ ಚಾಲೆಂಜ್ ಮಾಡಿದ್ದ ಗೃಹಿಣಿ ಅಂಜುವಿನ ಜೀವನವು  ದುರಂತದಲ್ಲಿ ಅಂತ್ಯಗೊAಡಿದ್ದು ವಿಪರ್ಯಾಸವೇ ಸರಿ.  ಘಟನೆ ಕುರಿತು ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

-ನಾಗಯ್ಯ 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

SCROLL FOR NEXT