ಗೋವಿಂದ ಕಾರಜೋಳ 
ರಾಜ್ಯ

ಬೆಂಗಳೂರು: ನಿರಾಶ್ರಿತರಿಗೆ ಊಟ ಬಡಿಸಿದ ಡಿಸಿಎಂ ಗೋವಿಂದ ಕಾರಜೋಳ

ಲಾಕ್ ಡೌನ್ ನಿಂದ ಬಾಧಿತರಾದವರಿಗೆ ಆಶ್ರಯತಾಣವಾಗಿರುವ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಿಗೆ ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಅವರು ಶುಕ್ರವಾರ ಭೇಟಿ ನೀಡಿ, ಸಮಾಲೋಚನೆ ನಡೆಸಿ, ಸ್ವತಃ ತಮ್ಮ ಕೈಯಾರೆ ಊಟ ಬಡಿಸಿ ಧೈರ್ಯ ತುಂಬಿದರು. 

ಬೆಂಗಳೂರು: ಲಾಕ್ ಡೌನ್ ನಿಂದ ಬಾಧಿತರಾದವರಿಗೆ ಆಶ್ರಯತಾಣವಾಗಿರುವ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಿಗೆ ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಅವರು ಶುಕ್ರವಾರ ಭೇಟಿ ನೀಡಿ, ಸಮಾಲೋಚನೆ ನಡೆಸಿ, ಸ್ವತಃ ತಮ್ಮ ಕೈಯಾರೆ ಊಟ ಬಡಿಸಿ ಧೈರ್ಯ ತುಂಬಿದರು. 

ಸರ್ಕಾರ ನಿಮ್ಮೊಂದಿಗಿದೆ ಯಾವುದೇ ಆತಂಕಕ್ಕೊಳಗಾಗಬಾರದು ಎಂದು ಆತ್ಮ ವಿಶ್ವಾಸ ಮೂಡಿಸಿದರು. ಮಿಜೋರಾಂ, ಈಶಾನ್ಯ ರಾಜ್ಯಗಳು, ಅಂತಾರಾಜ್ಯಗಳಿಂದ ಆಗಮಿಸಿ ಲಾಕ್ ಡೌನ್ ನಿಂದ ತೊಂದರೆಗೊಳಗಾದವರಿಗೆ ಆಶ್ರಯ ನೀಡಲಾಗಿರುವ ಜಯನಗರದ ಮಾರೇನಹಳ್ಳಿಯಲ್ಲಿರುವ ವಿದ್ಯಾರ್ಥಿನಿಲಯ ಹಾಗೂ ಬಾಧಿತರಾಗಿರುವವರಿಗೆ ಆಶ್ರಯವಾಗಿರುವ ಎಂ.ಜಿ. ರಸ್ತೆಯಲ್ಲಿರುವ ವಸತಿ ನಿಯಯಕ್ಕೆ ಭೇಟಿ ನೀಡಿ, ಅವರೊಂದಿಗೆ ಸಮಾಲೋಚನೆ ನಡೆಸಿ, ಇಲಾಖೆಯಿಂದ ನೀಡುತ್ತಿರುವ ಸೌಲಭ್ಯಗಳು, ಊಟೋಪಚಾರ, ಆರೈಕೆ, ಆರೋಗ್ಯ ತಪಾಸಣೆ, ಸ್ವಚ್ಚತೆ, ಸಿಬ್ಬಂದಿವರ್ಗದ ನಡವಳಿಕೆಯ ಬಗ್ಗೆ ವಿಚಾಸಿದರು. 

ಮಾಸ್ಕ್, ಪೇಸ್ಟ್, ಸಾಬೂನು, ಕರವಸ್ತ್ರ, ಟವೆಲ್, ಉಡುಪು, ಔಷಧೋಪಚಾರಗಳ ಗುಣಮಟ್ಟ, ಬಳಿಕ ನಿರಾಶ್ರಿತರಿಗೆ ನೀಡಿರುವ ವಸತಿ ಕೊಠಡಿಗೆ ಭೇಟಿ ನೀಡಿ, ಬೆಡ್, ಬೆಡ್ ಶೀಟ್, ಉಡುಪು, ಸ್ವಚ್ಚತೆಯನ್ನು ಪರಿಶೀಲಿಸಿದರು. ನಂತರ ಅಡುಗೆ ಮನೆಗೆ ಭೇಟಿ ನೀಡಿ, ಸಾಮಗ್ರಿಗಳನ್ನು ಪರಿಶೀಲಿಸಿದರು. ಅಡುಗೆ ತಯಾರಕರೊಂದಿಗೂ ಚರ್ಚಿಸಿ, ಶುದ್ದ ಮತ್ತು ಗುಣಮಟ್ಟದ ಊಟ ವಿತರಿಸುವಂತೆ ಸೂಚಿಸಿದರು. 

ಈ ನಿರಾಶ್ರಿತರಿಗೆ ಆರೋಗ್ಯ ತಪಾಸಣೆ ಮಾಡಿಸಿ, ಔಷಧೋಪಚಾರ ಮಾಡಿಸಿದರು. ಬೋಜನಾಲಯದಲ್ಲಿ ತಾವೇ ತಮ್ಮ ಕೈಯಿಂದಲೇ ಊಟ ಬಡಿಸಿ, ಯಾರೂ ಆತಂಕಕ್ಕೊಳಗಾಗಬಾರದು. ಸರ್ಕಾರದ ನಿರ್ದೇಶನಗಳನ್ನು ಪಾಲಿಸಬೇಕು. ಲಾಕ್ ಡೌನ್ ಅವಧಿ ಮುಗಿಯುವವರೆಗೂ ವಿದ್ಯಾರ್ಥಿ ನಿಲಯಗಳಲ್ಲೇ ವಾಸವಿರಬೇಕು. ಸಾಮಾಜಿಕ ಅಂತರ ಪಾಲಿಸಬೇಕು ಎಂದು ತಿಳಿಸಿದರು.

ಇಲಾಖೆಯು ನೀಡುತ್ತಿರುವ ಸೌಲಭ್ಯಗಳನ್ನು ಉತ್ತಮ ಹಾಗೂ ಗುಣಮಟ್ಟದಿಂದ ಕೂಡಿವೆ. ಇದರಿಂದ ತಮಗೆ ಸಾಕಷ್ಟು ಅನುಕೂಲವಾಗಿದೆ. ಯಾವುದೇ ತೊಂದರೆ ಇಲ್ಲ. ಸಕಾಲದಲ್ಲಿ ಆಹಾರ, ಆರೈಕೆ ದೊರಕುತ್ತಿದೆ. ಇಲಾಖೆಯ ಸಿಬ್ಬಂದಿ ವರ್ಗದ ಸಹಕಾರ ಉತ್ತಮವಾಗಿ ದೊರಕುತ್ತಿದೆ ಎಂದು ಉಪಮುಖ್ಯಮಂತ್ರಿಯವರಿಗೆ ನಿರಾಶ್ರಿತರು ತಿಳಿಸಿದರು.

ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಕುಮಾರ್ ನಾಯಕ್, ಎಸ್‍ಸಿಪಿ ಟಿಎಸ್‍ಪಿ ಯೋಜನೆಯ ಸಲಹೆಗಾರರಾದ ಇ. ವೆಂಕಟಯ್ಯ, ಆಯುಕ್ತ ಪೆದ್ದಪ್ಪಯ್ಯ, ಡಿಸಿಎಂ ಅವರ ಆಪ್ತಕಾರ್ಯದರ್ಶಿ ವಿ. ಶ್ರೀನಿವಾಸ ಉಪಸ್ಥಿತರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

SCROLL FOR NEXT