ರಾಜ್ಯ

ಲಾಕ್ ಡೌನ್ ಮಧ್ಯೆ ಹತಾಶೆಯಿಂದ ಲಿಕ್ಕರ್, ಬೀರ್ ಸಿಗದೆ ಸ್ಯಾನಿಟೈಸರ್ ಕುಡಿಯುತ್ತಿರುವ ಮದ್ಯಪ್ರಿಯರು!

Sumana Upadhyaya

ಬೆಂಗಳೂರು: ಕೊರೋನಾ ವೈರಸ್ ಸೋಂಕು ವಿರುದ್ಧ ಮುನ್ನೆಚ್ಚರಿಕೆ ಕೈಗೊಳ್ಳಲು ಎಲ್ಲಾ ಕಡೆಗಳಲ್ಲಿ ಸ್ಯಾನಿಟೈಸರ್, ಮಾಸ್ಕ್, ಗ್ಲೌಸ್ ಬಳಸಲಾಗುತ್ತದೆ. ಆಲ್ಕೊಹಾಲ್ ಆಧಾರಿತ ಕೈ ಸ್ವಚ್ಛಗೊಳಿಸುವ ಸ್ಯಾನಿಟೈಸರ್ ಗಳನ್ನು ಬಳಸಲಾಗುತ್ತದೆ. ಆದರೆ ಕೆಲವು ಮದ್ಯವ್ಯಸನಿಗಳು ಹತಾಶೆಯಿಂದ ಮದ್ಯ ಸಿಗದಿರುವಾಗ ಸ್ಯಾನಿಟೈಸರ್ ಕುಡಿಯುತ್ತಿರುವುದು ಬೆಳಕಿಗೆ ಬಂದಿದೆ.

ಲಿಕ್ಕರ್ ಸಿಗದಿರುವಾಗ ಆಲ್ಕೊಹಾಲ್ ಆಧಾರಿತ ಸ್ಯಾನಿಟೈಸರ್ ಬಳಸುವುದು ಕಂಡುಬರುತ್ತಿದೆ. ಧಾರವಾಡ ಜಿಲ್ಲೆಯಲ್ಲಿ ಕೆಲ ಪ್ರಕರಣಗಳು ವರದಿಯಾಗಿವೆ. ನೀರಿನಲ್ಲಿ ಬೆರೆಸಿ ಸ್ಯಾನಿಟೈಸರ್ ಗಳನ್ನು ಕುಡಿಯುವುದು ಆರೋಗ್ಯಕ್ಕೆ ಮಾರಕ. ಸ್ಯಾನಿಟೈಸರ್ ನಲ್ಲಿ ಶೇಕಡಾ 70ರಷ್ಟು ಆಲ್ಕೊಹಾಲ್, ಗ್ಲಿಸರಿನ್ ಮತ್ತು ಹೈಡ್ರೊಜನ್ ಪೆರಾಕ್ಸೈಡ್ ಗಳಿದೆ.

ವಿಸ್ಕಿಯಲ್ಲಿ ಶೇಕಡಾ 40ರಷ್ಟು ಆಲ್ಕೊಹಾಲ್ ಇರುತ್ತದೆ. ಹೈಡ್ರೊಜನ್ ಪೆರೊಕ್ಸೈಡ್ ಮೂತ್ರಪಿಂಡ ಮತ್ತು ಯಕೃತ್ತಿಗೆ ಅಪಾಯಕಾರಿಯಾಗಿದೆ ಎಂದು ಮೂಲಗಳು ಹೇಳುತ್ತವೆ.

ಸ್ಯಾನಿಟೈಸರ್ ಮಾರಾಟ ಮಾಡುವ ಮೊದಲು ಸಂಬಂಧಪಟ್ಟವರಿಂದ ಅನುಮತಿ ಪಡೆದಿರಬೇಕು. ಈ ಮಧ್ಯೆ ಅಕ್ರಮವಾಗಿ ಲಿಕ್ಕರ್, ಬೀರ್ ಮಾರಾಟ ಕರ್ನಾಟಕದಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯ ಅಬಕಾರಿ ಇಲಾಖೆಯ ಪ್ರಕಾರ ಕಳೆದ ತಿಂಗಳು ಮಾರ್ಚ್ 24ರಿಂದ ಏಪ್ರಿಲ್ 15ರವರೆಗೆ ರಾಜ್ಯದಲ್ಲಿ 32 ಸಾವಿರದ 508.305 ಲೀಟರ್ ಅಕ್ರಮ ಲಿಕ್ಕರ್, 22 ಸಾವಿರದ 208.275 ಲೀಟರ್ ಬೀರ್ ಗಳನ್ನು ವಶಪಡಿಸಿಕೊಂಡು 417 ಮಂದಿಯನ್ನು ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜನರು ಅಕ್ರಮ ಮಾರುಕಟ್ಟೆಯಲ್ಲಿ ಇಂಡಿಯನ್ ಮೇಡ್ ಲಿಕ್ಕರ್ (ಐಎಂಎಲ್) ಮತ್ತು ಬಿಯರ್ ಅನ್ನು ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

SCROLL FOR NEXT