ದಂತವೈದ್ಯೆ ಡಾ.ರಮಾ ಅವರ ಕೈಯಲ್ಲಿ ನವಜಾತ ಶಿಶು 
ರಾಜ್ಯ

ಲಾಕ್ ಡೌನ್ ಎಫೆಕ್ಟ್:7 ಕಿ.ಮೀ ನಡೆದುಕೊಂಡು ಬೆಂಗಳೂರಿಗೆ ಬಂದು ದಂತ ವೈದ್ಯೆ ಕ್ಲಿನಿಕ್ ನಲ್ಲಿ ಮಗು ಹೆತ್ತ ತಾಯಿ!

ಕೊರೋನಾ ಲಾಕ್ ಡೌನ್ ಹಲವರಿಗೆ ಹಲವು ರೀತಿಯಲ್ಲಿ ಸಂಕಷ್ಟ ತಂದೊಡ್ಡಿದೆ. ಅದರಲ್ಲಿ ಬಹಳ ತೊಂದರೆಯಾಗುವುದು ಅನಾರೋಗ್ಯವಿಲ್ಲದಿರುವವರಿಗೆ ಆಸ್ಪತ್ರೆಗೆ ಹೋಗಲು.

ಬೆಂಗಳೂರು:ಕೊರೋನಾ ಲಾಕ್ ಡೌನ್ ಹಲವರಿಗೆ ಹಲವು ರೀತಿಯಲ್ಲಿ ಸಂಕಷ್ಟ ತಂದೊಡ್ಡಿದೆ. ಅದರಲ್ಲಿ ಬಹಳ ತೊಂದರೆಯಾಗುವುದು ಅನಾರೋಗ್ಯವಿಲ್ಲದಿರುವವರಿಗೆ ಆಸ್ಪತ್ರೆಗೆ ಹೋಗಲು. ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳಲು ಸಾಧ್ಯವಾಗದೆ ಪ್ರಾಣ ಕಳೆದುಕೊಂಡ ಪ್ರಸಂಗಗಳಿವೆ.

ಹಲವು ಜನರಿಗೆ ಈ ಸಂದರ್ಭದಲ್ಲಿ ವೈದ್ಯರು ನಿಜವಾದ ದೇವರಂತೆ ಕಂಡಿದ್ದು ಸುಳ್ಳಲ್ಲ. ಇಂದು ಒಬ್ಬ ಗರ್ಭಿಣಿಗೆ ಇದೇ ರೀತಿ ಆಗಿದೆ. ಹೆರಿಗೆ ಬೇನೆ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗರ್ಭಿಣಿ ಮತ್ತು ಆಕೆಯ ಪತಿ ಯಾವುದಾದರೂ ಆಸ್ಪತ್ರೆಯೊ, ಕ್ಲಿನಿಕ್ ಸಿಗಬಹುದು ಎಂದು 5ರಿಂದ 7 ಕಿಲೋ ಮೀಟರ್ ನಡೆದುಕೊಂಡು ಬೆಂಗಳೂರಿಗೆ ಬಂದಿದ್ದಾರೆ. ಕೊನೆಗೆ ಒಂದು ಡೆಂಟಲ್ ಕ್ಲಿನಿಕ್ ತೆರೆದಿರುವುದು ಅವರ ಕಣ್ಣಿಗೆ ಕಾಣಿಸಿತು.

ಅಲ್ಲಿಗೆ ಬಂದು ದಂತ ವೈದ್ಯೆ ಡಾ.ರಮ್ಯ ಅವರ ಬಳಿ ಸಹಾಯ ಕೋರಿದ್ದಾರೆ. ಅವರನ್ನು ಕರೆಸಿಕೊಂಡ ವೈದ್ಯೆ ಮಹಿಳೆಯ ಹೆರಿಗೆಗೆ ನೆರವಾದರು.

ಶಿಶು ಜನನವಾದ ಕೂಡಲೇ ಅಳುವುದಾಗಲಿ, ಬೇರೆ ಚಲನವಲನದ ಮೂಲಕ ಪ್ರತಿಕ್ರಿಯೆ ನೀಡಲಿಲ್ಲವಂತೆ. ಹೀಗಾಗಿ ತೀರಿಹೋಗಿದೆ ಎಂದು ಭಾವಿಸಿದ್ದಾರೆ. ಆದರೆ ಸ್ವಲ್ಪ ಹೊತ್ತಿನ ಬಳಿಕ ಮಗು ಜೀವಂತವಿದೆ ಎಂದು ಗೊತ್ತಾಯಿತು. ಕೂಡಲೇ ವೈದ್ಯೆ ಬೇರೊಂದು ಆಸ್ಪತ್ರೆಗೆ ತಾಯಿ-ಮಗುವನ್ನು ಕಳುಹಿಸುವ ವ್ಯವಸ್ಥೆ ಮಾಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!

5th T20I: ಬಟ್ಲರ್, ಬ್ರೂಕ್ ಅರ್ಭಟ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು, ಸರಣಿ ವೈಟ್‌ವಾಶ್

ಖಿನ್ನತೆಗೆ ಜಾರಿದ್ದೆ, ಗುಣಪಡಿಸಲು ಮಗು ಮಾಡಿಕೊಳ್ಳಿ ಎಂದು ವೈದ್ಯರು ಹೇಳಿದ್ರು; ಹುಡುಗನ ಎಲ್ಲಿ ಹುಡುಕಲಿ?: Endometriosis ಭಯಾನಕತೆ ಬಿಚ್ಚಿಟ್ಟ ಶಮಿತಾ ಶೆಟ್ಟಿ

17 ಭಾಷೆಗಳಲ್ಲಿ 48 ಸಾವಿರ ಹಾಡುಗಳಿಗೆ ಧ್ವನಿ: 2013ರಲ್ಲಿ ಪದ್ಮಭೂಷಣ ತಿರಸ್ಕರಿಸಿದ್ದ ದಿಟ್ಟ ಗಾಯಕಿ ಎಸ್ ಜಾನಕಿ!

ಪುಣೆಯಲ್ಲಿ ತ್ಯಾಜ್ಯದ ಗುಡ್ಡ ಬಿದ್ದು ಕಟ್ಟಡ ಕುಸಿತ: 8 ಮಂದಿ ಸಾವು; 14 ಜನರ ರಕ್ಷಣೆ, ಒಬ್ಬರು ಇನ್ನೂ ನಾಪತ್ತೆ!