ಸಾಂದರ್ಭಿಕ ಚಿತ್ರ 
ರಾಜ್ಯ

ಹಾವೇರಿ: ನಿಯಮ ಉಲ್ಲಂಘನೆ; ಬೀಜ ಮಾರಾಟ ಪರವಾನಿಗೆ ಅಮಾನತು

ಬೀಜ‌ ಅಧಿನಿಯಮ ಉಲ್ಲಂಘನೆ ಮಾಡಿದ್ದ ಕಾರಣಕ್ಕಾಗಿ ಬೀಜ ಮಾರಾಟ ಮಾಡುತ್ತಿದ್ದ ಖಾಸಗಿ ಕಂಪೆನಿಯ ಪರವಾನಿಗೆಯನ್ನು ಅಮಾನತು ಮಾಡಿ‌ ಆದೇಶಿಸಲಾಗಿದೆ

ಹಾವೇರಿ: ಬೀಜ‌ ಅಧಿನಿಯಮ ಉಲ್ಲಂಘನೆ ಮಾಡಿದ್ದ ಕಾರಣಕ್ಕಾಗಿ ಬೀಜ ಮಾರಾಟ ಮಾಡುತ್ತಿದ್ದ ಖಾಸಗಿ ಕಂಪೆನಿಯ ಪರವಾನಿಗೆಯನ್ನು ಅಮಾನತು ಮಾಡಿ‌ ಆದೇಶಿಸಲಾಗಿದೆ

ರಾಣೆಬೆನ್ನೂರಿನ‌ "ವೆಂಕಟೇಶ್ವರ ಆಗ್ರೋ ಟ್ರೇಡರ್ಸ್" ಖಾಸಗಿ ಕಂಪೆನಿಯಾಗಿದ್ದು ಈ ಖಾಸಗಿ ಟ್ರೇಡರ್ಸ್ ಸುಮಾರು 12 ವರ್ಷ‌ಗಳಿಂದ ರೈತರ ಬೀಜ ಮಾರಾಟ ಮಾಡಿಕೊಂಡು ಬಂದಿದೆ

ಇತ್ತೀಚೆಗೆ ರಾಣೆಬೆನ್ನೂರಿನಲ್ಲಿ ಕಳಪೆ‌ ಬೀಜ ಮಾರಾಟ ಮಾಡಲಾಗುತ್ತಿದೆ ಎಂಬ ದೂರಿನ ಆಧಾರದ ಮೇಲೆ ಏಪ್ರಿಲ್ 20 ರಂದು ಈ ಟ್ರೆಡರ್ಸ್ ಮಳಿಗೆಗೆ ವಿಚಕ್ಷಣಾ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು

ಹಾವೇರಿ ಜಿಲ್ಲಾ ಜಂಟಿ ಕೃಷಿ‌ ನಿರ್ದೇಶಕ ಬಿ.ಮಂಜುನಾಥ್ ಇವರ ನೇತೃತ್ವದ ವಿಚಕ್ಷಣಾ‌ ತಂಡ ಮಾರಾಟ ಕೇಂದ್ರಕ್ಕೆ ಭೇಟಿ ನೀಡಿದಾಗ ಸಂಶಯಾಸ್ಪದ ಬಿತ್ತನೆ‌ ಬೀಜ ಪ್ಯಾಕಿಂಗ್ ಮಾಡುವ ಉಪಕರಣಗಳು ಲಭ್ಯವಾಗಿದ್ದವು. ಬಿಡಿ ಬಿತ್ತನೆ‌ ಬೀಜಗಳನ್ನು ಮಾರಾಟ ಮಾಡುವ ದುರುದ್ದೇಶದ ಅನುಮಾನ ಕಂಡುಬಂದಿದ್ದು ಇದು ಬೀಜ ಅಧಿನಿಯಮಗಳ ಉಲ್ಲಂಘನೆಯಾಗಿದೆ.
 
ಆದ್ದರಿಂದ ರಾಣೆಬೆನ್ನೂರಿನ "ವೆಂಕಟೇಶ್ವರ ಆಗ್ರೋ‌ ಟ್ರೇಡರ್ಸ್" ಪರವಾನಿಗೆಯನ್ನು ಅಮಾನತು ಮಾಡಿ,‌ಸಮರ್ಪಕ ಉತ್ತರ ಸ್ಪಷ್ಟ ಕಾರಣ ನೀಡುವಂತೆ‌ ಷೋಕಾಸ್ ನೀಡಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೋವಿಡ್‌ ಗೆದ್ದಂತೇ, ಪಶ್ಚಿಮ ಏಷ್ಯಾ ಸಂಘರ್ಷದ ಬಿಕ್ಕಟ್ಟು ಜಯಿಸುತ್ತೇವೆ: ಮತ್ತೆ 'ವೋಕಲ್ ಫಾರ್ ಲೋಕಲ್' ಮಂತ್ರ ಜಪಿಸಿದ ಮೋದಿ

IPL 2026: ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್; RCB ಅಗ್ರಸ್ಥಾನ ಭದ್ರ!

ತಮಿಳುನಾಡು ಸಿಎಂ ವಿಜಯ್‌ಗೆ Z+ ಭದ್ರತೆ: ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ

ಲಂಕಾದಿಂದ ಭಾರತಕ್ಕೆ 11 ಗಂಟೆಗಳ ಕಾಲ ಈಜಿದ ಬೆಂಗಳೂರು ದಂಪತಿ!

ದೇಶದಲ್ಲಿ ಇಂಧನ ಕೊರತೆ ಇಲ್ಲ, ಆದ್ರೆ...: ಪ್ರಧಾನಿ ಮೋದಿ ಹೇಳಿಕೆಗೆ ಕಾರಣ ನೀಡಿದ IGoM

SCROLL FOR NEXT