ಬೆಂಗಳೂರು: ಕೊರೋನಾ ವೈರಸ್ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಲಾಕ್'ಡೌನ್ ಆದೇಶಿಸಿದ್ದರೂ, ನಿಯಮ ಉಲ್ಲಂಘಿಸುತ್ತಿರುವ ಘಟನೆಗಳು ದಿನದಿಂದ ದಿನಕ್ಕೆ ಏರುತ್ತಲೇ ಇವೆ. ಲಾಕ್'ಡೌನ್ ನಡುವಲ್ಲೇ ನಗರದಲ್ಲಿ ವಿವಾಹ ಕಾರ್ಯಕ್ರಮ ಆಯೋಜನೆ ಮಾಡಿದ್ದ ಟಿವಿ ಆ್ಯಂಕರ್ ವಿರುದ್ದ ಪೊಲೀಸರು ಎಫ್ಐಆರ್ ದಾಖಲಿಸಿರುವ ಘಟನೆ ನಡೆದಿದೆ.
ವಿವಾಹ ಕಾರ್ಯಕ್ರಮದಲ್ಲಿ ಖ್ಯಾತ ವ್ಯಕ್ತಿಗಳು ಸೇರಿದಂತೆ ಬಹುತೇಕ ಜನರಿಗೆ ಆಹ್ವಾನ ನೀಡಲಾಗಿದ್ದು, ಏಪ್ರಿಲ್ 18ರಂದು ಈ ಕಾರ್ಯಕ್ರಮ ನಡೆಯಬೇಕಿತ್ತು. ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ವಿವಾಹ ಆಯೋಜನೆಗೊಳಿಸಿದ್ದ ರೆಸಾರ್ಟ್ ಬಳಿ ತೆರಳಿದ್ದಾರೆ. ಬಳಿಕ ಕಾರ್ಯಕ್ರಮ ಆಯೋಜನೆಗೊಳಿಸಿದ್ದ ಟಿವಿ ಆ್ಯಂಕರ್ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.
ಎನ್'ಡಿಎಂಎ ಅಡಿಯಲ್ಲಿ ಮತ್ತು ಭಾರತೀಯ ಸಂವಿಧಾನದ ಸೆಕ್ಷನ್ 188 ಮತ್ತು 269ರ ಅಡಿಯಲ್ಲಿ ಆ್ಯಂಕರ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ವರದಿಗಳು ತಿಳಿಸಿವೆ.