ರಾಜ್ಯ

ಮಂಗಳೂರು: 8 ತಿಂಗಳ ಮಗು ಬಿಟ್ಟು 'ಕೋವಿದ್ ವಾರಿಯರ್' ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಮುಖ್ಯಪೇದೆ ನಯನ

Shilpa D

ಮಂಗಳೂರು: ನಗರದ ವೆನ್ಲಾಕ್ ಆಸ್ಪತ್ರೆ ಸ್ಪೆಷಲ್ ಬ್ಲಾಕ್ ವೊಂದನ್ನು ಕೋವಿದ್ ರೋಗಿಗಳಿಗೆ ಮೀಸಲಿಡಲಾಗಿದೆ. ಎರಡು ಮಕ್ಕಳ ತಾಯಿಯಾದ ಮುಖ್ಯಪೇದೆ ನಯನ ಹಿಂದೂ ಮುಂದು ಯೋಚಿಸದೇ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಈ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ನಯನ ತಮ್ಮ ಸೇವೆಯ ಅಗತ್ಯತೆ ಅರಿತಿದ್ದಾರೆ. ಇಡೀ ದೇಶವೇ ಕೊರೋನಾ ವಿರುದ್ಧ  ಹೋರಾಡುತ್ತಿರುವಾಗ ನಯನ ರೀತಿಯ ಅನೇಕರು ನಿಸ್ವಾರ್ಥದಿಂದ ಸೇವೆ ಸಲ್ಲಿಸುತ್ತಿದ್ದಾರೆ.

ನಯನ ಅವರಿಗೆ ಎಂಟು ತಿಂಗಳ ಮಗು ಮತ್ತು ಮೂರೂವರೆ ವರ್ಷದ ಮಗಳಿದ್ದಾಳೆ. ಈ ಮಗು ರಕ್ತ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದೆ. ಅವರನ್ನು ವೆನ್ಲಾಕ್ ಆಸ್ಪತ್ರೆ ಆಯುಷ್ ಕಟ್ಟಡಕ್ಕೆ ನಿಯೋಜಿಲಾಗಿದೆ. ಪ್ರತಿದಿನ ಜೀವ ಅಪಾಯದಲ್ಲಿದ್ದರೂ ಅದನ್ನು ಲೆಕ್ಕಿಸದೇ ಇತರರಿಗೆ ಮಾದರಿಯಾಗಿದ್ದಾರೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಡಾಯ ಪಿಎಸ್ ಹರ್ಷ  ಅವರ ಕರ್ತವ್ಯ ನಿಷ್ಠೆಯನ್ನು ಗಮನಿಸಿ ಕೋವಿದ್ ವಾರಿಯರ್ ಎಂದು ಗೌರವ ನೀಡಿದ್ದಾರೆ.ಆಸ್ಪತ್ರೆಯಲ್ಲಿ ತನ್ನ ಮಗಳನ್ನು ದಾಖಲಿಸಿರುವುದರಿಂದ ಆಕೆಯನ್ನು ನೋಡಿಕೊಳ್ಳುವುದರ ಜೊತೆಗೆ ಮಗುವಿಗೆ ಹಾಲುಣಿಸಲು ಸಾಧ್ಯವಾಗುತ್ತಿದೆ ಎಂದು ಹೇಳಿದ್ದಾರೆ.

ಆಸ್ಪತ್ರೆಗೆ ಬರುವ ರೋಗಿಗಳ ಬಗ್ಗೆ ಮಾಹಿತಿ ಕಲೆ ಹಾಕುವುದು ನಯನ ಅವರ ಕೆಲಸವಾಗಿದೆ. ಒಂದು ವೇಳೆ ರೋಗಿ ಕೊರೋನಾ ಪಾಸಿಟಿವ್ ಆಗಿದ್ದರೇ ಅವರ ಟ್ರಾವೆಲ್ ಹಿಸ್ಟರಿ, ಪ್ರಾಥಮಿಕ ಸಂಪರ್ಕ ಮುಂತಾದವುದಗಳ ಬಗ್ಗೆ ಮಾಹಿತಿ ಸಂಗ್ರಹಿಸಬೇಕು ಎಂದು ನಯನ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ನಯನ ತಮ್ಮ ತಾಯಿ ಮತ್ತು ತಂಗಿಯ ಜೊತೆ ಮಂಗಳೂರಿನಲ್ಲಿದ್ದಾರೆ, ಆಕೆಯ ಪತಿ ಕಾಸರಗೋಡಿನಲ್ಲಿ ಕೆಲಸ ಮಾಡುತ್ತಿದ್ದಾರೆ.

SCROLL FOR NEXT