ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಬೆಂಗಳೂರಿನ ಕಂಟೈನ್ ಮೆಂಟ್ ಝೋನ್ ಪಟ್ಟಿ ಮತ್ತೆ ಪರಿಷ್ಕರಿಸಿದ ಬಿಬಿಎಂಪಿ, 20 ರಿಂದ 23ಕ್ಕೆ ಏರಿಕೆ!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಾರಕ ಕೊರೋನಾ ವೈರಸ್ ಆರ್ಭಟ ಜೋರಾಗಿರುವಂತೆಯೇ ಇತ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೂಡ ತನ್ನ ಕಂಟೈನ್ ಮೆಂಟ್ ಝೋನ್ ಪಟ್ಟಿಯನ್ನು ಮತ್ತೆ ಪರಿಷ್ಕರಿಸಿದೆ.

ಸೀಲ್ ಡೌನ್
Srinivasa Murthy VN
Updated On : 26 Apr 2020, 12:15 am

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಾರಕ ಕೊರೋನಾ ವೈರಸ್ ಆರ್ಭಟ ಜೋರಾಗಿರುವಂತೆಯೇ ಇತ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೂಡ ತನ್ನ ಕಂಟೈನ್ ಮೆಂಟ್ ಝೋನ್ ಪಟ್ಟಿಯನ್ನು ಮತ್ತೆ ಪರಿಷ್ಕರಿಸಿದೆ.

ಹೌದು.. ಈ ಹಿಂದೆ 20ರಷ್ಟಿದ್ದ ಬೆಂಗಳೂರಿನ ಕಂಟೈನ್ ಮೆಂಟ್ ಝೋನ್ ಗಳ ಪಟ್ಟಿಗೆ ಇದೀಗ ಮತ್ತೆ ಮೂರು ವಾರ್ಡ್ ಗಳು ಸೇರ್ಪಡೆಯಾಗಿದ್ದು, ಆ ಮೂಲಕ ಕಂಟೈನ್ ಮೆಂಟ್ ಝೋನ್ ಗಳ ಸಂಖ್ಯೆ 23ಕ್ಕೆ ಏರಿಕೆಯಾಗಿದೆ. ಬಿಬಿಎಂಪಿ ಬಿಡುಗಡೆ ಮಾಡಿರುವ ಕಂಟೈನ್ ಮೆಂಟ್ ಝೋನ್  ಗಳ ಪರಿಷ್ಕೃತ ಪಟ್ಟಿಯಲ್ಲಿ ಬೊಮ್ಮನ ಹಳ್ಳಿಯ 2, ಮಹದೇವಪುರದ 2, ಬೆಂಗಳೂರು ಪೂರ್ವ ವಲಯ ನ 5, ಬೆಂಗಳೂರು ದಕ್ಷಿಣ ವಲಯದ 9, ಬೆಂಗಳೂರು ಪಶ್ಚಿಮ ವಲಯದ 4 ಮತ್ತು ರಾಜರಾಜೇಶ್ವರಿ ನಗರದ 1 ವಾರ್ಡ್ ಗಳನ್ನು ಕಂಟೈನ್ ಮೆಂಟ್ ಜೋನ್ ಗಳ ಪಟ್ಟಿಗೆ ಸೇರಿಸಲಾಗಿದೆ.

ಬಿಬಿಎಂಪಿ ಬಿಡುಗಡೆ ಮಾಡಿರುವ ಕಂಟೈನ್ ಮೆಂಟ್ ಝೋನ್ ಪಟ್ಟಿ ವಿವರ ಇಂತಿದೆ.

Advertisement

Advertisement


ಬೊಮ್ಮನ ಹಳ್ಳಿ
ವಾರ್ಡ್ ನಂಬರ್ 191 ಸಿಂಗಸಂದ್ರ ಮತ್ತು ವಾರ್ಡ್ ನಂಬರ್ 189 ಹೊಂಗಸಂದ್ರ

ಮಹದೇವಪುರ
ವಾರ್ಡ್ ನಂಬರ್ 25 ಹೊರಮಾವು ಮತ್ತು ವಾರ್ಡ್ ನಂಬರ್ 84 ಹಗದೂರು

ಬೆಂಗಳೂರು ಪೂರ್ವವಲಯ
ವಂಸತನಗರ (ವಾರ್ಡ್ ನಂಬರ್ 93), ರಾಧಾಕೃಷ್ಣ ದೇಗುಲ (ವಾರ್ಡ್ ನಂಬರ್ 18), ಸಿವಿರಾಮನ್ ನಗರ  (ವಾರ್ಡ್ ನಂಬರ್ 57), ರಾಮಸ್ವಾಮಿ ಪಾಳ್ಯ (ವಾರ್ಡ್ ನಂಬರ್ 62) ಮತ್ತು ಮಾರುತಿ ಸೇವಾನಗರ  (ವಾರ್ಡ್ ನಂಬರ್ 59)

ಬೆಂಗಳೂರು ದಕ್ಷಿಣ ವಲಯ
ಸುಧಾಮನಗರ (ವಾರ್ಡ್ ನಂಬರ್ 118), ಕರೆಸಂದ್ರ (ವಾರ್ಡ್ ನಂಬರ್ 166), ಗುರಪ್ಪನಪಾಳ್ಯ (ವಾರ್ಡ್ ನಂಬರ್ 171), ಶಾಕಾಂಬರಿನಗರ (ವಾರ್ಡ್ ನಂಬರ್ 179), ಜೆಪಿನಗರ (ವಾರ್ಡ್ ನಂಬರ್ 177), ಬಾಪೂಜಿನಗರ (ವಾರ್ಡ್ ನಂಬರ್ 134), ಹೊಸಹಳ್ಳಿ (ವಾರ್ಡ್ ನಂಬರ್ 124),  ಹಂಪಿನಗರ  (ವಾರ್ಡ್ ನಂಬರ್ 133), ಬೈರಸಂದ್ರ (ವಾರ್ಡ್ ನಂಬರ್ 169)

ಬೆಂಗಳೂರು ಪಶ್ಚಿಮ ವಲಯ
ಶಿವನಗರ (ವಾರ್ಡ್ ನಂಬರ್ 107), ಪಾದರಾಯನಪುರ (ವಾರ್ಡ್ ನಂಬರ್ 135), ಕೆಆರ್ ಮಾರುಕಟ್ಟೆ (ವಾರ್ಡ್ ನಂಬರ್ 139) ಮತ್ತು ಯಶವಂತಪುರ (ವಾರ್ಡ್ ನಂಬರ್ 37)

ರಾಜರಾಜೇಶ್ವರಿ ನಗರ
ರಾಜರಾಜೇಶ್ವರಿ ನಗರ ವಾರ್ಡ್ ನಂಬರ್ 160 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement