ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಕೊರೋನಾ ವೈರಸ್: ಕರ್ನಾಟಕದಲ್ಲಿ 8 ಕೋವಿಡ್-19 ಸೋಂಕಿತರು ಗುಣಮುಖ, ಡಿಸ್ಚಾರ್ಜ್

ಮಾರಕ ಕೊರೋನಾ ವೈರಸ್ ಅಬ್ಬರ ಕರ್ನಾಟಕದಲ್ಲಿ ಮುಂದುವರೆದಿರುವಂತೆಯೇ ಇತ್ತ ವೈರಸ್ ವಿರುದ್ಧ ಸತತ ಹೋರಾಟ ಮಾಡುತ್ತಿರುವ ವೈದ್ಯರು ಶುಭ ಸುದ್ದಿ ನೀಡಿದ್ದು ಕರ್ನಾಟಕದಲ್ಲಿ 8 ಮಂದಿ ಕೊರೋನಾ ಸೋಂಕಿತರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಆಸ್ಪತ್ರೆಯಿಂದ ಗುಣಮುಖರಾದ ಸೋಂಕಿತರ ಡಿಸ್ಚಾರ್ಜ್
Srinivasa Murthy VN
Updated On : 25 Apr 2020, 11:50 pm

ಬೆಂಗಳೂರು: ಮಾರಕ ಕೊರೋನಾ ವೈರಸ್ ಅಬ್ಬರ ಕರ್ನಾಟಕದಲ್ಲಿ ಮುಂದುವರೆದಿರುವಂತೆಯೇ ಇತ್ತ ವೈರಸ್ ವಿರುದ್ಧ ಸತತ ಹೋರಾಟ ಮಾಡುತ್ತಿರುವ ವೈದ್ಯರು ಶುಭ ಸುದ್ದಿ ನೀಡಿದ್ದು ಕರ್ನಾಟಕದಲ್ಲಿ 8 ಮಂದಿ ಕೊರೋನಾ ಸೋಂಕಿತರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ  ಡಿಸ್ಚಾರ್ಜ್ ಆಗಿದ್ದಾರೆ.

ಹೌದು.. ಕರ್ನಾಟಕದಲ್ಲಿ ಇಂದು ಒಂದೇ ದಿನ 8 ಮಂದಿ ಕೊರೋನಾ ರೋಗಿಗಳು ಗುಣಮುಖರಾದ ಕುರಿತು ವೈದ್ಯರು ಮಾಹಿತಿ ನೀಡಿದ್ದಾರೆ. ನಂಜನಗೂಡು ನಂಜಿನಿಂದ ಬಳಲುತ್ತಿರುವ ಮೈಸೂರಿನಲ್ಲಿ 4 ಮತ್ತು ತಬ್ಲೀಘಿ ಸಭೆಯಿಂದ ಕೊರೋನಾ ಸೋಂಕು ಮೆತ್ತಿಕೊಂಡಿರುವ  ಬಾಗಲಕೋಟೆಯಲ್ಲಿ 4 ಸೋಂಕಿತರು ಗುಣಮುಖರಾಗಿದ್ದಾರೆ. ಈ ಪೈಕಿ ಮೈಸೂರಿನಲ್ಲಿ ಗುಣಮುಖರಾಗಿರುವ ನಾಲ್ಕೂ ಮಂದಿ ಸೋಂಕಿತರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಬಾಗಲಕೋಟೆಯಲ್ಲಿ ಗುಣಮುಖರಾಗಿರುವ 4 ಮಂದಿ ನಾಳೆ ಸಂಜೆ ವೇಳೆಗೆ ಡಿಸ್ಚಾರ್ಜ್ ಅಗುವ ಸಾಧ್ಯತೆ ಇದೆ  ಎಂದು ತಿಳಿದುಬಂದಿದೆ.

ಮೈಸೂರಿನಲ್ಲಿ ಇಂದು 4 ಮಂದಿ ಗುಣಮುಖರಾಗುವ ಮೂಲಕ ಜಿಲ್ಲೆಯಲ್ಲಿ ಡಿಸ್ಚಾರ್ಜ್ ಆದ ಕೊರೋನಾ ಸೋಂಕಿತರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ. ಇಂದೂ ಕೂಡ ಮೈಸೂರಿನಲ್ಲಿ ಒಂದು ಹೊಸ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಆ ಮೂಲಕ ಜಿಲ್ಲೆಯಲ್ಲಿ ಪತ್ತೆಯಾದ ಸೋಂಕಿತರ  ಸಂಖ್ಯೆ 89ಕ್ಕೆ ಏರಿಕೆಯಾಗಿದೆ. ಈ ಪೈಕಿ 55 ಆ್ಯಕ್ಟಿವ್ ಕೇಸ್ ಗಳಾಗಿವೆ. ನಂಜನಗೂಡು ಮೂಲದ 50 ವರ್ಷದ ಮಹಿಳೆಯಲ್ಲಿ ಇಂದು ಸೋಂಕು ಪತ್ತೆಯಾಗಿದ್ದು. ಇವರು ಪೇಷೆಂಟ್ ನಂಬರ್ 382 ಸಂಪರ್ಕ ಮಾಡಿದ್ದರು ಎಂದು ಹೇಳಲಾಗಿದೆ.

Advertisement

Advertisement

ಇತ್ತ ಬಾಗಲಕೋಟೆಯಲ್ಲಿ ಇಬ್ಬರು ಅಪ್ರಾಪ್ತರು ಸೇರಿದಂತೆ 4 ಮಂದಿ ಸೋಂಕಿತರು (P164, P165, P186 & P187) ಗುಣಮುಖರಾಗಿದ್ದು, ನಾಳೆ ಸಂಜೆ ವೇಳೆಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ. ಆ ಮೂಲಕ ಜಿಲ್ಲೆಯಲ್ಲಿ ಆ್ಯಕ್ಟಿವ್ ಕೇಸ್ ಗಳ ಸಂಖ್ಯೆ 17ಕ್ಕೆ  ಇಳಿಕೆಯಾದಂತಾಗಿದೆ.

ರಾಜ್ಯದಲ್ಲಿ ಮತ್ತೆ 11 ಮಂದಿಗೆ ಪಾಸಿಟಿವ್, ಸೋಂಕಿತರ ಸಂಖ್ಯೆ 500ಕ್ಕೆ ಏರಿಕೆ
ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಶನಿವಾರ ಒಂದೇ ದಿನ ಬರೋಬ್ಬರಿ 26 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 500ಕ್ಕೆ ಏರಿಕೆಯಾಗಿದೆ. ಇಂದು ಬೆಂಗಳೂರಿನಲ್ಲಿಯೇ 13 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇಂದು ಬೆಳಗ್ಗೆ 6 ಮತ್ತು ಸಂಜೆ ಬುಲೆಟಿನ್ ನಲ್ಲಿ 7 ಸೇರಿ ಒಟ್ಟು 13 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಬೆಂಗಳೂರಿನಲ್ಲಿ 13, ಬೆಳಗಾವಿಯಲ್ಲಿ 9, ಮಂಡ್ಯದಲ್ಲಿ 1, ಮೈಸೂರಿನಲ್ಲಿ 1 ದಕ್ಷಿಣ ಕನ್ನಡ ಮತ್ತು ಚಿಕ್ಕಬಳ್ಳಾಪುರದಲ್ಲಿ ತಲಾ ಒಬ್ಬರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement