ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಬ್ರಿಟನ್ ಕನ್ನಡಿಗರೊಂದಿಗೆ ಸಿಎಂ ಯಡಿಯೂರಪ್ಪ ವಿಡಿಯೋ ಸಂವಾದ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾನುವಾರ ಇಂಗ್ಲೆಂಡ್ ನಲ್ಲಿರುವ ಕನ್ನಡ ಬಳಗದವರೊಂದಿಗೆ ವಿಡಿಯೋ ಸಂವಾದ ನಡೆಸಿ ಯೋಗಕ್ಷೇಮ ವಿಚಾರಿಸಿದರು,

ಸಿಎಂ ಯಡಿಯೂರಪ್ಪ ವಿಡಿಯೋ ಸಂವಾದ
Srinivasa Murthy VN
Updated On : 26 Apr 2020, 8:58 pm

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾನುವಾರ ಇಂಗ್ಲೆಂಡ್ ನಲ್ಲಿರುವ ಕನ್ನಡ ಬಳಗದವರೊಂದಿಗೆ ವಿಡಿಯೋ ಸಂವಾದ ನಡೆಸಿ ಯೋಗಕ್ಷೇಮ ವಿಚಾರಿಸಿದರು,

ಯುಕೆ ಕಾನೂನು ಸಚಿವ ರಾಬರ್ಟ್ ಬಕ್ಲಂಡ್, ಬ್ರಿಟನ್ ನಲ್ಲಿ ಕೊರೋನ ಹರಡುತ್ತಿರುವ ಹಾಗೂ ನಿಯಂತ್ರಣ ಕ್ರಮಗಳ ಕುರಿತು ಮಾಹಿತಿ ನೀಡಿದರು. ಅಷ್ಟೇ ಅಲ್ಲದೆ ಕರ್ನಾಟಕದಲ್ಲಿ ಕೊರೊನ ನಿಗ್ರಹ ಮಾಡುವಲ್ಲಿ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕನ್ನಡಿಗ ಶರವಣ ಗುರುಮೂರ್ತಿ ಮಾತನಾಡಿ, ಇಲ್ಲಿ ಅಧ್ಯಯನ ಮಾಡುತ್ತಿರುವ ಹಲವು ಕನ್ನಡಿಗ ವಿದ್ಯಾರ್ಥಿಗಳು ಸಾಲ ಮಾಡಿ ಇಲ್ಲಿಗೆ ಬಂದಿದ್ದಾರೆ. ಇದೀಗ ಇವರೆಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಬ್ಯಾಂಕ್ ನವರ ಜೊತೆ  ಮಾತನಾಡಿ ಇಎಂಐ ಕಟ್ಟಲು ಸಮಯವಕಾಶ ಒದಗಿಸಿಕೊಡುವುದಾಗಿ ಭರವಸೆ ನೀಡಿದರು.

Advertisement

Advertisement

ಈ ಸಂದರ್ಭದಲ್ಲಿ ಲಾರ್ಡ್ ಚಾನ್ಸಲರ್ ಮತ್ತು ಸೆಕ್ರೆಟರಿ ಆಫ್ ಫಾರ್ ಜಸ್ಟೀಸ್, ಮೆಂಬರ್ ಆಫ್ ಪಾರ್ಲಿಮೆಂಟ್  ರಾಬರ್ಟ್‌ ಬಕ್ಲಂಡ್. ಹಾಗು ಸುರೇಶ್ ಗತ್ತಾಪುರ, ಕೌನ್ಸಿಲರ್ ವೆಸ್ಟ್ ಸ್ವಿಂಡನ್ ಟ್ರಸ್ಟಿ ಆಫ್ ಹಿಂದೂ ಟೆಂಪಲ್ ಹಾಗೂ ಶರವಣ ಗುರುಮೂರ್ತಿ ಸೇರಿದಂತೆ ಹಲವು ಯುಕೆ ಕನ್ನಡ  ಬಳಗದ ಸದಸ್ಯರು ಭಾಗವಹಿಸಿದ್ದರು. ಕನ್ನಡ ಬಳಗದ ಸದಸ್ಯರ ಜೊತೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಲಂಡನ್ ಕಾನೂನು ಮಂತ್ರಿ ರಾಬರ್ಟ್ ಬಕ್ಲಂಡ್, ಕೊರೊನ ಹರಡುತ್ತಿರುವ ಬಗ್ಗೆ ಹಾಗೂ ಯಾವ ರೀತಿ ಅದನ್ನು ನಿಭಾಯಿಸುತ್ತಿದ್ದೇವೆ ಎನ್ನುವುದನ್ನು  ವಿವರಿಸಿದರು. ಅಷ್ಟೇ ಅಲ್ಲದೆ ಕರ್ನಾಟಕದಲ್ಲಿ ಕೊರೊನ‌ ನಿಗ್ರಹ ಮಾಡುವಲ್ಲಿ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶರವಣ ಗುರುಮೂರ್ತಿ, ಲಂಡನ್‌‌ನಲ್ಲಿ ಓದುತ್ತಿರುವ ಹಲವು ಕನ್ನಡಿಗ ವಿದ್ಯಾರ್ಥಿಗಳು ಸಾಲ ತೆಗೆದುಕೊಂಡು ‌ಇಲ್ಲಿಗೆ ಬಂದಿದ್ದು ಇದೀಗ ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬ್ಯಾಂಕ್ ಅಧಿಕಾರಿಗಳ ಜೊತೆ‌ ಮಾತನಾಡಿ ಇಎಂಐ ಕಟ್ಟಲು ಸಮಯಾವಕಾಶ ಕೊಡಿಸುವುದಾಗಿ ಭರವಸೆ ‌ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments