ಮೈಸೂರು: ಸೋಂಕಿತ 72 ವರ್ಷದ ವೃದ್ಧನಿಗೆ ಜುಬಿಲಿಯಂಟ್ ನಂಟು
ನಂಜನಗೂಡಿನಲ್ಲಿ 72 ವರ್ಷದ ವೃದ್ಧನಲ್ಲಿ ಕೊರೋನಾ ವೈರಸ್ ಸೋಂಕು ತಗುಲಿದ್ದು, ಯಾವುದೇ ರೀತಿಯ ಟ್ರಾವೆಲ್ ಹಿಸ್ಟರಿ ಇರದಿದ್ದರೂ ಜುಲಿಯಂಟ್ ನಂಟಿನಿಂದ ಸೋಂಕು ತಗುಲಿದೆ ಎಂದು ಹೇಳಲಾಗುತ್ತಿದೆ.
ಮೈಸೂರು: ನಂಜನಗೂಡಿನಲ್ಲಿ 72 ವರ್ಷದ ವೃದ್ಧನಲ್ಲಿ ಕೊರೋನಾ ವೈರಸ್ ಸೋಂಕು ತಗುಲಿದ್ದು, ಯಾವುದೇ ರೀತಿಯ ಟ್ರಾವೆಲ್ ಹಿಸ್ಟರಿ ಇರದಿದ್ದರೂ ಜುಲಿಯಂಟ್ ನಂಟಿನಿಂದ ಸೋಂಕು ತಗುಲಿದೆ ಎಂದು ಹೇಳಲಾಗುತ್ತಿದೆ.
ಮೈಸೂರಿನ ಜುಬಿಲಿಯಂಟ್ ಔಷಧಿ ಕಂಪನಿಯಲ್ಲಿರುವ ಕೆಲ ನೌಕರರಿಗೆ ವ್ಯಕ್ತಿ ಸಾಲ ನೀಡಿದ್ದು, ಇದರಂತೆ ಆಗಾಗ ಹಣವನ್ನು ವಾಪಸ್ ಪಡೆಯುವ ಸಲುವಾಗಿ ಔಷಧ ಕಂಪನಿ ಬಳ ತೆರಳುತ್ತಿತ್ತ. ಈ ವೇಳೆ ನೌಕರರೊಬ್ಬರಲ್ಲಿದ್ದ ವೈರಸ್ ನಿಂದಾಗಿ ಈತನಲ್ಲೂ ಸೋಂಕು ತಗುಲಿದೆ ಎಂದು ಹೇಳಲಾಗುತ್ತಿದೆ. ಇದೀಗ ವೃದ್ಧ ವ್ಯಕ್ತಿಯನ್ನು ಹೋಂ ಕ್ವಾರಂಟೈನ್ ನಲ್ಲಿರಿಸಲಾಗಿದೆ.
ಇದರಂತೆ ಮತ್ತೊಬ್ಬ 68 ವರ್ಷಜದ ವ್ಯಕ್ತಿ ಕೂಡ ಜುಬಿಲಿಯಂಟ್ ಔಷಧಿ ಕಂಪನಿಯಲ್ಲಿ ನೌಕರನಾಗಿ ಕಾರ್ಯನಿರ್ವಹಿಸುತ್ತಿರುವ ಮಗನೊಂದಿಗೆ ಸಂಪರ್ಕ ಹೊಂದಿದ ಪರಿಣಾಮ ಈತನನ್ನೂ ಹೇಂ ಕ್ವಾರಂಟೈನ್ ನಲ್ಲಿರಿಸಲಾಗಿದೆ. ಮನೆಯಲ್ಲಿಯೇ ಇರುವಂತೆ ತಿಳಿಸಿದರೂ ವೃದ್ಧ ವ್ಯಕ್ತಿ ಯಾರ ಮಾತನ್ನೂ ಕೇಳದೆಯೇ ನೆರೆಯ ಗ್ರಾಮಕ್ಕೆ ತೆರಳಿ, ಗೆಳೆಯರೊಂದಿಗೆ ಸೇರಿಕೊಂಡೂ ಜೂಜಾಟ ಆಡಿದ್ದಾರೆ.
ಇದೀಗ ವ್ಯಕ್ತಿಯೊಂದಿಗೆ ಜೂಜಾಟ ಆಡಿದ ಎಲ್ಲರನ್ನೂ ಕ್ವಾರಂಟೈನ್ ನಲ್ಲಿರಿಸಲಾಗಿದೆ. ಜುಬಿಲಿಯಂಟ್ ಔಷಧ ಕಂಪನಿ ಇದೀಗ ರಾಜ್ಯದ ದೊಡ್ಡ ಹಾಟ್'ಸ್ಪಾಟ್ ಆಗಿ ಪರಿವರ್ತನೆ ಗೊಂಡಿದೆ.