ರಾಜ್ಯ

ಐಐಎಸ್ ಸಿ ಮತ್ತು ಬಯೋಕಾನ್ ಲ್ಯಾಬ್ ಗಳಲ್ಲಿ ಕೊರೋನಾ ಪರೀಕ್ಷೆಗೆ ಅನುಮತಿ

Shilpa D

ಬೆಂಗಳೂರು: ಐಐಎಸ್ ಸಿ ಮತ್ತು ಬಯೋಕಾನ್ ಪ್ರಯೋಗಾಲಯಗಳಲ್ಲಿ ಕೊರೋನಾ ಸಂಬಂಧಿತ ಪರೀಕ್ಷೆಗಳನ್ನು ನಡೆಸಲು ಐಸಿಎಂಆರ್ ಅನುಮತಿ ನೀಡಿದೆ. ಎರಡು ಖಾಸಗಿ ಮತ್ತು ಎರಡು ಸರ್ಕಾರಿ ಪ್ರಯೋಗಾಲಯಗಳಿಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಒಟ್ಟು 20 ಪ್ರಯೋಗಾಲಯಗಳಲ್ಲಿ ಪರೀಕ್ಷೆ ಮಾಡಲಾಗುತ್ತದೆ.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಜೀವರಾಸಾಯನಿಕ ವಿಭಾಗ, ಮೈಸೂರಿನಲ್ಲಿರುವ ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ, ಅಪೊಲೊ ಆಸ್ಪತ್ರೆಗಳು, ಬನ್ನೇರುಘಟ್ಟ ರಸ್ತೆ, ಬೆಂಗಳೂರಿನ ಬೊಮ್ಮನಹಳ್ಳಿಯ ಬಯೋಕಾನ್ ಪಾರ್ಕ್‌ನಲ್ಲಿರುವ ಸಿಂಗೆನ್ ಇಂಟರ್ನ್ಯಾಷನಲ್ ಲಿಮಿಟೆಡ್. ಹಾಸನದ ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆ,  ಮೈಸೂರಿನ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಶಿವಮೊಗ್ಗದಲ್ಲಿನ ಶಿವಮೊಗ್ಗ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್,

ಬೆಂಗಳೂರಿನ ಕಮಾಂಡ್ ಹಾಸ್ಪಿಟಲ್ (ವಾಯುಪಡೆ),  ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ, ಬೆಂಗಳೂರು ಫೀಲ್ಡ್ ಯುನಿಟ್, ಕಲಬುರಗಿಯ ಗುಲ್ಬರ್ಗಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ಬಳ್ಳಾರಿಯಲ್ಲಿನ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ, ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ಬೆಂಗಳೂರು, ಮಂಗಳೂರಿನ ವೆನ್ಲಾಕ್ ಡಿಸ್ಟ್ರಿಕ್ಟ್ ಹಾಸ್ಪಿಟಲ್, ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬೆಳಗಾವಿಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟ್ರೆಡಿಶನಲ್ ಮೆಡಿಸಿನ್ ಇಲ್ಲಿ ಕೊರೋನಾ ಪರೀಕ್ಷೆ ಮಾಡಲು ಅನುಮತಿ ದೊರೆತಿದೆ.

SCROLL FOR NEXT