ಪಾತ್ರೆಗಳನ್ನು ಹಿಡಿದ ಚಾಲಕ 
ರಾಜ್ಯ

ಆದಾಯವಿಲ್ಲ, ಸರ್ಕಾರದಿಂದ ನೆರವು ಸಿಗದೆ ಖಾಲಿ ಪಾತ್ರೆ ಹಿಡಿದು ಕ್ಯಾಬ್ ಚಾಲಕರ ಪ್ರತಿಭಟನೆ! 

ಲಾಕ್ ಡೌನ್ ನಿಂದಾಗಿ ದಿನನಿತ್ಯದ ಅಗತ್ಯಗಳನ್ನು ಪೂರೈಸಿಕೊಳ್ಳಲು ಪರದಾಡುತ್ತಿರುವ ಕ್ಯಾಬ್ ಚಾಲಕರು ಸರ್ಕಾರದ ವಿರುದ್ಧ ಮೌನ ಪ್ರತಿಭಟನೆಗೆ ಇಳಿದಿದ್ದಾರೆ. ಖಾಲಿ ಪಾತ್ರೆಗಳನ್ನು ಹಿಡಿದು ಸೆಲ್ಫಿ ತೆಗೆದುಕೊಳ್ಳುವ ಮೂಲಕ ಚಾಲಕರು ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ.

ಬೆಂಗಳೂರು:ಲಾಕ್ ಡೌನ್ ನಿಂದಾಗಿ ದಿನನಿತ್ಯದ ಅಗತ್ಯಗಳನ್ನು ಪೂರೈಸಿಕೊಳ್ಳಲು ಪರದಾಡುತ್ತಿರುವ ಕ್ಯಾಬ್ ಚಾಲಕರು ಸರ್ಕಾರದ ವಿರುದ್ಧ ಮೌನ ಪ್ರತಿಭಟನೆಗೆ ಇಳಿದಿದ್ದಾರೆ. ಖಾಲಿ ಪಾತ್ರೆಗಳನ್ನು ಹಿಡಿದು ಸೆಲ್ಫಿ ತೆಗೆದುಕೊಳ್ಳುವ ಮೂಲಕ ಚಾಲಕರು ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ.

ಮಾರ್ಚ್ 24ರಂದು ಲಾಕ್ ಡೌನ್ ಜಾರಿಯಾದ ಬಳಿಕ ಆದಾಯ ಶೂನ್ಯವಾಗಿದೆ. ಚಾಲಕರು ರಸ್ತೆ,  ವಾಹನ ಮತ್ತಿತರ ಅನೇಕ ಶುಲ್ಕಗಳನ್ನು ಕಟ್ಟಬೇಕಾಗಿದೆ.ತಮ್ಮ ಕುಟುಂಬಗಳಿಗೆ ದಿನನಿತ್ಯದ ಅಗತ್ಯಗಳು ಹಾಗೂ ಔಷಧಿಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಒಲಾ ಉಬರ್ ಡ್ರೈವರ್ ಮತ್ತು ಮಾಲೀಕರ ಸಂಘದ ಅಧ್ಯಕ್ಷ ತನ್ವೀರ್ ಪಾಶ ಹೇಳಿದ್ದಾರೆ.

ಇಎಂಐ ಪಾವತಿಸುವಂತೆ ಪೈನಾನ್ಶಿಯರ್ ಒತ್ತಡ ಹಾಕುತ್ತಿದ್ದರೆ ಬಾಡಿಗೆ ನೀಡುವಂತೆ ಮನೆ ಮಾಲೀಕರು ಒತ್ತಡ ಮುಂದುವರೆಸಿದ್ದಾರೆ. ಪ್ರಸ್ತುತ 5 ಲಕ್ಷ ಆಟೋ ಮತ್ತು ಕ್ಯಾಬ್ ಚಾಲಕರು ನಗರದಲ್ಲಿದ್ದು, ಹೇಗೆ ಬದುಕಬೇಕೆಂದು ಆದರ್ಶ ಆಟೋ ಯೂನಿಯನ್ ಅಧ್ಯಕ್ಷ ಎನ್. ಮಂಜುನಾಥ್ ಕೇಳುತ್ತಾರೆ. 

ಕ್ಯಾಬ್ ಚಾಲಕರ ಸಮಸ್ಯೆ ಬಗೆಹರಿಸುವಂತೆ ಯೂನಿಯನ್ ಇತ್ತೀಚಿಗೆ ಸರ್ಕಾರಕ್ಕೆ ಪತ್ರ ಬರೆದಿದೆ. ಲಾಕ್ ಡೌನ್ ಸಂದರ್ಭದಲ್ಲಿಯೂ ಸಂಚಾರ ದಂಡಕ್ಕಾಗಿ ಪೀಕುವ ಪೊಲೀಸರಿಂದ ಕಿರುಕುಳ ಮುಂದುವರೆದಿದೆ ಎಂದು ಅವರು ತಿಳಿಸಿದ್ದಾರೆ. 

ಇಎಂಐ ಅವಧಿಯನ್ನು ಮೂರು ತಿಂಗಳವರೆಗೂ ವಿಸ್ತರಿಸಿದ್ದರೂ ಪೈನಾನ್ಶಿಯರ್  ತಮ್ಮ ವಾಹನಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ. ನಮ್ಮ ಕುಟುಂಬಗಳಿಗೆ ಹೇಗೆ ಆಹಾರ ಪೂರೈಸಲಿ, ಇದೇ ನಮ್ಮ ಬದುಕಿಗೆ ಇರುವ ಆಧಾರ, ಸಣ್ಣ ಉಳಿತಾಯದಿಂದ ಬದುಕುತ್ತಿದ್ದೇನೆ. ಆದರೆ, ಲಾಕ್ ಡೌನ್ ವಿಸ್ತರಣೆಯಾದ ನಂತರ ಪರಿಸ್ಥಿತಿ ಕೈ ಮೀರುತ್ತಿದೆ ಎಂದು ಶಿವಾಜಿನಗರದ ಆಟೋ ಡ್ರೈವರ್ ಅಹ್ಮದ್ ಮಜೀದ್ ಅಳಲು ತೋಡಿಕೊಂಡರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮಂಗಳೂರು: ಆಟೋಗೆ KSRTC ಬಸ್ ಡಿಕ್ಕಿ; ಭೀಕರ ಅಪಘಾತದಲ್ಲಿ ಮಗು ಸೇರಿ ಆರು ಸಾವು - Video

$34.2 Trillion GDP: 2038ರ ವೇಳೆಗೆ ಅಮೆರಿಕ ಹಿಂದಿಕ್ಕಿ, ಭಾರತ 2ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ: EY ವರದಿ

ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ, ಹಠಾತ್ ಪ್ರವಾಹ: ಭೂಕುಸಿತದಿಂದ ನಾಲ್ವರು ಸಾವು

ನಗರ ನಕ್ಸಲರ ಟಾರ್ಗೆಟ್‌ ಚಾಮುಂಡಿ ಬೆಟ್ಟ- ಬಿಎಲ್ ಸಂತೋಷ್: ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ಮಾತನಾಡದಿರುವುದೇ ಲೇಸು-dks

ಉಳಿಕೆ ಮತ್ತು ಹೂಡಿಕೆ ನಡುವೆ ಸಮತೋಲನವಿರಲಿ! (ಹಣಕ್ಲಾಸು)

SCROLL FOR NEXT