ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ತುಮಕೂರಿನಲ್ಲಿ ಕೊರೋನಾ ಸೋಂಕಿಗೆ ಮತ್ತೊಂದು ಸಾವು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 535ಕ್ಕೇರಿಕೆ

ಕೋವಿಡ್ -19ಗೆ ತುಮಕೂರಿನ 73 ವರ್ಷದ ವೃದ್ಧರೊಬ್ಬರು ಬಲಿಯಾಗಿದ್ದು, ಇವರು ತೀವ್ರ ಉಸಿರಾಟದ ತೊಂದರೆ ಮತ್ತು ಅಸ್ತಮಾ, ಮಧುಮೇಹ ರೋಗಗಳಿಂದ ಬಳಲುತ್ತಿದ್ದರು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಸಂಗ್ರಹ ಚಿತ್ರ
Srinivasa Murthy VN
Updated On : 29 Apr 2020, 8:45 pm

ಬೆಂಗಳೂರು: ಕೋವಿಡ್ -19ಗೆ ತುಮಕೂರಿನ 73 ವರ್ಷದ ವೃದ್ಧರೊಬ್ಬರು ಬಲಿಯಾಗಿದ್ದು, ಇವರು ತೀವ್ರ ಉಸಿರಾಟದ ತೊಂದರೆ ಮತ್ತು ಅಸ್ತಮಾ, ಮಧುಮೇಹ ರೋಗಗಳಿಂದ ಬಳಲುತ್ತಿದ್ದರು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇದರಿಂದ ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 21ಕ್ಕೇರಿಕೆಯಾಗಿದೆ. ಜೊತೆಗೆ, ಕಲಬುರಗಿಯಲ್ಲಿ 4.6 ವರ್ಷದ ಹೆಣ್ಣು ಮಗು ಸೇರಿ ಮತ್ತೆ 8 ಕೊರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 535 ಕ್ಕೇರಿಕೆಯಾಗಿದೆ. ಇಲ್ಲಿಯವರೆಗೆ 21 ಜನರು ಮೃತಪಟ್ಟಿದ್ದು, 216 ಮಂದಿ ಗುಣಮುಖರಾಗಿದ್ದಾರೆ.

395 ರೋಗಿಯ ಸಂಪರ್ಕ ಹೊಂದಿದ್ದ 4.6 ವರ್ಷದ ಬಾಲಕಿ, 515ನೇ ರೋಗಿಯ ಸಂಪರ್ಕದಲ್ಲಿದ್ದು 28 ವರ್ಷದ ಯುವಕ, 425ನೇ ರೋಗಿಯ ಸಂಪರ್ಕದಲ್ಲಿದ್ದ 14 ವರ್ಷದ ಬಾಲಕಿ, 40 ವರ್ಷದ ಮಹಿಳೆ, 205ನೇ ರೋಗಿಯ ಸಂಪರ್ಕದಲ್ಲಿದ್ದ 22 ವರ್ಷದ ಯುವತಿ 20 ವರ್ಷದ ಯುವಕ, 17  ವರ್ಷದ ಯುವತಿ ಮತ್ತು 12 ವರ್ಷದ ಬಾಲಕಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. 

Advertisement

Advertisement

ಜೊತೆಗೆ, ಬೆಳಗಾವಿಯ ಹುಕ್ಕೇರಿಯಲ್ಲಿ ಕೂಡ 12 ವರ್ಷದ ಬಾಲಕ, ದಾವಣಗೆರೆಯ 35 ವರ್ಷದ ಮಹಿಳೆ, ಮೈಸೂರು ನಂಜನಗೂಡಿನ 26 ಹಾಗೂ 73 ವರ್ಷದ ವೃದ್ಧನಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement