ಸುಮಲತಾ ಅಂಬರೀಶ್ 
ರಾಜ್ಯ

ಕ್ವಾರಂಟೈನ್ ಬಗ್ಗೆ ಶಾಸಕ ರವೀಂದ್ರರಿಗೆ ಅರಿವು ಮೂಡಿಸಿದ ಸಂಸದೆ ಸುಮಲತಾ ಅಂಬರೀಶ್..!

ಕೋವಿಡ್-19 ಕುರಿತಂತೆ ಕ್ವಾರಂಟೈನ್ ಬಗ್ಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರಿಗೆ ಸಂಸದೆ ಸುಮಲತಾ ಅಂಬರಿಷ್ ಅರಿವು ಮೂಡಿಸಿದ ಪ್ರಸಂಗ ನಡೆಯಿತು.

ಮಂಡ್ಯ: ಕೋವಿಡ್-19 ಕುರಿತಂತೆ ಕ್ವಾರಂಟೈನ್ ಬಗ್ಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರಿಗೆ ಸಂಸದೆ ಸುಮಲತಾ ಅಂಬರಿಷ್ ಅರಿವು ಮೂಡಿಸಿದ ಪ್ರಸಂಗ ನಡೆಯಿತು.

ಇಂದು ಮಂಡ್ಯದ ಜಿ.ಪಂ.ಸಭಾಂಗಣದಲ್ಲಿ ಸಚಿವರಾದ ಡಾ.ಕೆ. ಸುಧಾಕರ್ ಹಾಗೂ ನಾರಾಯಣಗೌಡ ಅವರ ನೇತೃತ್ವದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ ಶ್ರೀರಂಗಪಟ್ಟಣ ತಾಲೂಕಿನ ಉರಳಿಕ್ಯಾತನಹಳ್ಳಿ ಗ್ರಾಮದ ಆಶಾ ಕಾರ್ಯಕರ್ತೆ  ಕ್ವಾರಂಟೈನ್ ಮಾಡುವ ಸಂದರ್ಭದಲ್ಲಿ ಅಲ್ಲಿನ ಗ್ರಾ.ಪಂ.ಸಿಬ್ಬಂದಿ ನಿಂದಿಸಿದರೆಂದು ನೊಂದು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದಂತೆ ಅವರನ್ನು ಹಾಗು ಅವರ ಕುಟುಂಬದವರನ್ನು ಕ್ವಾರಟೈನ್ ಮಾಡಲಾಗಿದೆ. ಯಾವ ಕಾರಣಕ್ಕೆ  ಇವರನ್ನು ಕ್ವಾರಟೈನ್ ಮಾಡಲಾಗಿದೆ ಎಂಬುದು ಅರ್ಥವಾಗುತ್ತಿಲ್ಲ. ಇದರಿಂದ ಅವರಿಗೆ ಅವಮಾನವಾಗಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಂಸದೆ ಸುಮಲತಾ ಅಂಬರೀಶ್ರವರು ಅವರಿಗೆ ಕ್ವಾರಂಟೈನ್ ಮಾಡಿರುವುದರಲ್ಲಿ ಯಾವುದೇ ತಪ್ಪಿಲ್ಲ, ವೈದ್ಯರ ಸೂಚನೆ ಮೇರೆಗೆ ಆವರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ. ಇದರಲ್ಲಿ ತಪ್ಪೆನಿದೆ ಎಂದರು. ಕ್ವಾರಂಟೈನ್ ಮಾಡುವುದು ಅವಮಾನ ಅಲ್ಲ ಒಬ್ಬ  ಜನಪ್ರತಿನಧಿಯಾಗಿ ನೀವೆ ಈ ರೀತಿ ಹೇಳಿದರೆ ಜನ ತಪ್ಪು ಅಭಿಪ್ರಾಯ ತೀಳಿದುಕೊಳ್ಳುತ್ತಾರೆ. ಆಶಾ ಕಾರ್ಯಕರ್ತೆ ವಾರಿರ್ಸ್ ಆಗಿಯು ಸಹ ಕಾರ್ಯ ನೀರ್ವಹೀಸುತ್ತಿದ್ದು ಅವರಿಗೆ ಕ್ವಾರಂಟೈನ್ ಮಾಡಿಸುವುದು ಸಹ ನಿಮ್ಮ ಕರ್ತವ್ಯ ಎಂದು ತಿಳಿ ಹೇಳಿದರು.

-ನಾಗಯ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel