ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಬೆಂಗಳೂರು: ಲಾಕ್ ಡೌನ್ ಉಲ್ಲಂಘನೆ, ವಾಹನ ಬಿಡುವಂತೆ ಕಾಲಿಗೆ ಬಿದ್ದು ಅಂಗಲಾಚಿದ ಮಹಿಳೆ

ಲಾಕ್ ಡೌನ್ ಉಲ್ಲಂಘಿಸಿ ಜಾಲಿ ರೈಡ್ ಹೋಗುತ್ತಿದ್ದ ಸ್ಕೂಟಿಯನ್ನು ತಡೆದ ಪೊಲೀಸರಿಗೆ ಮಹಿಳೆಯೊಬ್ಬರು ಕಾಲಿಗೆ ಬಿದ್ದು ವಾಹನ ಬಿಡುವಂತೆ ಅಂಗಲಾಚಿದ ಪ್ರಸಂಗ ಬೆಳಕಿಗೆ ಬಂದಿದೆ.

ಪ್ರತ್ಯಕ್ಷ ದೃಶ್ಯ
Vishwanath S
Updated On : 30 Apr 2020, 7:08 pm

ಬೆಂಗಳೂರು: ಲಾಕ್ ಡೌನ್ ಉಲ್ಲಂಘಿಸಿ ಜಾಲಿ ರೈಡ್ ಹೋಗುತ್ತಿದ್ದ ಸ್ಕೂಟಿಯನ್ನು ತಡೆದ ಪೊಲೀಸರಿಗೆ ಮಹಿಳೆಯೊಬ್ಬರು ಕಾಲಿಗೆ ಬಿದ್ದು ವಾಹನ ಬಿಡುವಂತೆ ಅಂಗಲಾಚಿದ ಪ್ರಸಂಗ ಬೆಳಕಿಗೆ ಬಂದಿದೆ. 

ನಗರದ ಸಿರ್ಸಿ ಸರ್ಕಲ್ ಬಳಿ ಈ ಘಟನೆ ವರದಿಯಾಗಿದೆ. ಪೊಲೀಸರ ಮೇಲೆ ಕೆಲವು ಮಹಿಳೆಯರು ಇತ್ತೀಚೆಗೆ ದರ್ಪ, ದೌರ್ಜನ್ಯ ತೋರುತ್ತಿರುವ ಬೆನ್ನಲ್ಲೇ ತಮ್ಮ ವಾಹನ ಬಿಡುವಂತೆ ಈ ಮಹಿಳೆ ಕಾಲಿಗೆ ಬಿದ್ದು ಬೇಡಿ ಕೊಂಡಿರುವುದು ಪೊಲೀಸ್ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
 
ಶಿರ್ಸಿ ಸರ್ಕಲ್ ಬಳಿ ಅನಗತ್ಯವಾಗಿ ಸ್ಕೂಟರ್ ನಲ್ಲಿ ಹೋಗುತ್ತಿದ್ದ ಮಹಿಳೆಯನ್ನು ತಡೆದು ಸ್ಕೂಟರ್ ನ್ನು ವಶಪಡಿಸಿಕೊಳ್ಳಲು ಹೋದಾಗ ಈ ಹೈ ಡ್ರಾಮ ನಡೆದಿದೆ. ವಾಹನ ತಡೆದ ಪೊಲೀಸರು, ಗೊತ್ತಾಗುತ್ತಿಲ್ಲವೇ ಕೊರೊನಾ ಸೋಂಕಿನಿಂದ ರಾಜ್ಯ ಗಂಭೀರ ಪರಿಸ್ಥಿತಿಯಲ್ಲಿದೆ. ಆದರೂ ಏಕೆ ರಸ್ತೆ ಗೆ ಬರುತ್ತೀರಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಮಹಿಳೆ, ಸಾರ್ ತಪ್ಪಾಗಿದೆ. ನಮ್ಮ ಸ್ಕೂಟಿ ವಾಹನ ಬಿಡಿ ಎಂದು ಮಂಡಿಯೂರಿ, ಕೈ ಮುಗಿದು ಕಾಲಿಗೆ ಬೀಳಲು ಮುಂದಾದರು. ಕೊನೆಗೆ ಮಹಿಳೆಗೆ ಬುದ್ಧಿವಾದ ಹೇಳಿ ಪೊಲೀಸರು ಅವರನ್ನು ಅಲ್ಲಿಂದ ಕಳುಹಿಸಿದ್ದಾರೆ.

ಶಿರ್ಸಿ ಸರ್ಕಲ್ ಬಳಿ ಸಂಚಾರ ಪೊಲೀಸರಿಂದ ಕಟ್ಟು ನಿಟ್ಟಿನ ತಪಾಸಣೆ ನಡೆಯುತ್ತಿದೆ. ಪೊಲೀಸರು ಪ್ರತಿಯೊಂದು ವಾಹನಗಳನ್ನ ತಡೆದು ತಪಾಸಣೆ ನಡೆಸುತ್ತಿದ್ದಾರೆ. ಅನಗತ್ಯವಾಗಿ ರಸ್ತೆ ಗಿಳಿದವರಿಗೆ ಬೆವರಿಳಿಸಿದ್ದಾರೆ. ಈ ಮಧ್ಯೆ ಬಿಬಿಎಂಪಿ ಪಾಸ್ ಇಟ್ಟುಕೊಂಡು ಪ್ರಯಾಣಿಕರನ್ನ ಕರೆದುಕೊಂಡು ಹೋಗುತ್ತಿದ್ದ ಆಟೋ ರಿಕ್ಷಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅನಗತ್ಯವಾಗಿ ಸಂಚರಿಸುವವರಿಗೆ ಪೊಲೀಸರೇ ಕೈ ಮುಗಿದು ಮನೆಯಲ್ಲಿರುವಂತೆ ಬೇಡಿಕೊಳ್ಳುತ್ತಿದ್ದಾರೆ. ರಸ್ತೆಗೆ ಬರಬೇಡಿ ಮನಗೆ ಹೋಗಿ ಎಂದು ಕೈ ಮುಗಿದು ಕೇಳಿಕೊಳ್ಳುತ್ತಿದ್ದಾರೆ.ಒಮ್ಮೆ ನಿಮ್ಮ ಕುಟುಂಬ, ಮಕ್ಕಳ ಬಗ್ಗೆ ಯೋಚಿಸಿ. ಯಾವ ಕೆಲಸ ಇದೆ ಎಂದು ರಸ್ತೆಗೆ ಬರುತ್ತೀರಿ ಎಂದು ಪ್ರಶ್ನಿಸಿದ್ದಾರೆ. 

Advertisement

Advertisement

ಮಾಸ್ಕ್ ಇಲ್ಲದೆ ಓಡಾಡುವವರನ್ನು ಸಹ ಪೊಲೀಸರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಯುವಕರಿಬ್ಬರು ಮಾಸ್ಕ್ ಇಲ್ಲದೆ ಆಟೋದಲ್ಲಿ ಓಡಾಡುತ್ತಿದ್ದರು. ಇದನ್ನು ಗಮನಿಸಿದ ಪೊಲೀಸರು ಅವರನ್ನು ಆಟೋದಿಂದ ಇಳಿಸಿ ಯುವಕರು ಧರಿಸಿದ್ದ ಸ್ವೆಟರ್ ತೆಗಿಸಿ ಮಾಸ್ಕ್ ಕಟ್ಟಿಸುವ ಮೂಲಕ ಬುದ್ಧಿವಾದ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement