ಸಾಂದರ್ಭಿಕ ಚಿತ್ರ 
ರಾಜ್ಯ

'ಸಾರಿ' ಆರೋಗ್ಯ ಸಮೀಕ್ಷೆಗೆ ನಿಯೋಜನೆ: ಶಿಕ್ಷಕರ ಆತಂಕ

ನಿರ್ದಿಷ್ಟವಾದಂತಹ  ಆರೋಗ್ಯ ಸಮೀಕ್ಷೆಯನ್ನು ನಡೆಸಲು ಶಿಕ್ಷಕರನ್ನು ನಿಯೋಜಿಸಲಾಗುತ್ತಿದೆ. ಇದಕ್ಕೆ ಶಿಕ್ಷಕರು ಆತಂಕ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ನಿರ್ದಿಷ್ಟವಾದಂತಹ  ಆರೋಗ್ಯ ಸಮೀಕ್ಷೆಯನ್ನು ನಡೆಸಲು ಶಿಕ್ಷಕರನ್ನು ನಿಯೋಜಿಸಲಾಗುತ್ತಿದೆ.ಇದಕ್ಕಾಗಿ ಬುಧವಾರ ಅರ್ಜಿ ಕರೆಯಲಾಗಿದೆ.ಕೋವಿಡ್ -19 ನಿಂದ ಉಂಟಾಗುವ ಮತ್ತಷ್ಟು ಆರೋಗ್ಯ ಸಮಸ್ಯೆಗಳನ್ನು ತಡೆಯಲು ವಿಎಲ್ ಐ ( ಶೀತಜ್ವರ) ಸಾರಿ (ತೀವ್ರವಾದ ಉಸಿರಾಟದ ಸೋಂಕು) ಮತ್ತಿತರ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರನ್ನು ಮುಂಚಿತವಾಗಿ ಗುರುತಿಸಲು ಕುಟುಂಬಗಳ ಸಮೀಕ್ಷೆಯನ್ನು ರಾಜ್ಯಾದ್ಯಂತ ನಡೆಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ. 

ಆದರೆ, ಶಿಕ್ಷಕರು ತಮ್ಮ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಮಾಸ್ಕ್ ಗಳು, ಗ್ಲೌಸುಗಳನ್ನು ನೀಡಿದ್ದರೂ ನಮ್ಮಲಿ ಸರ್ವೆ ಮಾಡಲು ಭಯವಿದೆ, ಸೋಂಕನ್ನು ತಡೆಯುವ ತಾಂತ್ರಿಕ ಜ್ಞಾನವನ್ನು ಹೊಂದಿರದ ಕಾರಣ ಶಿಕ್ಷಕರಿಗೆ ಕೆಂಪು ವಲಯಗಳಲ್ಲಿ  ಸರ್ವೆಗಳಿಗೆ ನಿಯೋಜಿಸಬಾರದು ಎಂದು  ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಯೊಬ್ಬರು ಹೇಳುತ್ತಾರೆ. 

ಆರೋಗ್ಯ ಕಾರ್ಯಕರ್ತರಿಗೆ ಒದಗಿಸುವಂತೆ ಶಿಕ್ಷಕರಿಗೂ ಸರ್ಕಾರ ವಿಮೆ ಸೌಲಭ್ಯ ಒದಗಿಸಬೇಕೆಂದು  ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಚಂದ್ರಶೇಖರ್ ನುಗ್ಲಿ ಒತ್ತಾಯಿಸಿದ್ದಾರೆ.

ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿದ ಶಿಕ್ಷಣ ತಜ್ಞ ನಿರಂಜನಾರಾಧ್ಯ,  ಶಿಕ್ಷಕರನ್ನು ಪರೀಕ್ಷಿಸದ ಕಾರಣ, ಮನೆಗಳಿಗೆ ಭೇಟಿ ನೀಡುವಂತೆ ಕೇಳಿಕೊಳ್ಳುವುದು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ  ಸುತ್ತೋಲೆಯ ಪ್ರಕಾರ, ಮತದಾನ ಅಧಿಕಾರಿಗಳಾಗಿ ಕೆಲಸ ಮಾಡಿದ ಶಿಕ್ಷಕರು ಇದರಲ್ಲಿ ಮತ್ತೆ ಕೆಲಸ ಮಾಡುತ್ತಾರೆ. ಮೇ 3 ರ ಗಡುವು ನಿಗದಿಪಡಿಸಲಾಗಿದೆ. ಉಪ ನಿರ್ದೇಶಕರು (ಆಡಳಿತ) ಮತ್ತು ಬಿಇಒಗಳನ್ನು ಡಿಸಿಗಳ ಮಾರ್ಗದರ್ಶನದಲ್ಲಿ ಕೆಲಸ ಮಾಡಲು ನಿರ್ದೇಶಿಸಲಾಗಿದೆ. ಮೊಬೈಲ್ ಅಪ್ಲಿಕೇಶನ್ ‘ಹೆಲ್ತ್ ವಾಚ್’ ಸ್ಥಳದಲ್ಲೇ ಮಾಹಿತಿಯನ್ನು ಅಪ್‌ಲೋಡ್ ಮಾಡಲು ಅವಕಾಶ ಮಾಡಿಕೊಡಲಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT