ರಾಜ್ಯ

ಯಡಿಯೂರಪ್ಪ ಸಂಪುಟದ ಮೂವರು ಸಚಿವರಿಗೆ ಕ್ವಾರಂಟೈನ್: ಇತರರಲ್ಲಿ ಆತಂಕ, ತಳಮಳ

Shilpa D

ಗಳೂರು: ಕನ್ನಡದ ಸುದ್ದಿವಾಹಿನಿಯೊಂದರ ಕ್ಯಾಮೆರಾಮೆನ್‌ಗೆ ಕೊರೊನಾ ಸೋಂಕು ತಗುಲಿದ ಪ್ರಕರಣ, ಈಗ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಂಪುಟದ ಅನೇಕ  ಸಚಿವರಲ್ಲಿ ಆತಂಕ ಮೂಡಿಸಿದೆ.

ಉಪ ಮುಖ್ಯಮಂತ್ರಿ ಡಾ. ಸಿ.ಎನ್‌.ಅಶ್ವತ್ಥನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ವೈದ್ಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್‌ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಕೊರೊನ್‌ ವೈರಸ್‌ ಟೆಸ್ಟ್‌ಗೆ ಒಳಗಾಗಿದ್ದರು. ಇದೀಗ ನಾಲ್ವರಿಗೂ ನೆಗೆಟಿವ್‌ ವರದಿ ಬಂದಿದೆ.

ಆದರೆ, ಅಶ್ವತ್ಥನಾರಾಯಣ, ಬಸವರಾಜ ಬೊಮ್ಮಾಯಿ, ಸುಧಾಕರ್‌ ಅವರು ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಟೆಸ್ಟ್ ನೆಗೆಟಿವ್ ಬಂದಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಕ್ವಾರಂಟೈನ್ ನಲ್ಲಿದ್ದು ಮನೆಯಿಂದಲೇ ಕೆಲಸ ಮಾಡುವುದಾಗಿ ಅಶ್ವತ್ತ ನಾರಾಯಣ. ಸುಧಾಕರ್ ಮತ್ತು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಇನ್ನೂ ಸಿಟಿ ರವಿ ಮತ್ತು ಸುರೇಶ್ ಕುಮಾರ್ ಅವರು ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದ್ದು, ಅವರು ಕ್ವಾರಂಟೈನ್ ಗೆ ಒಳಗಾಗಿಲ್ಲ,ಈ ಬೆಳವಣಿಗೆ ಇತರೆ ಸಚಿವರು, ಅಧಿಕಾರಿಗಳ ವಲಯದಲ್ಲಿ ತಳಮಳಕ್ಕೆ ಕಾರಣವಾಗಿದೆ. ಈ ನಡುವೆ ಸಿ.ಟಿ.ರವಿ ಕ್ವಾರಂಟೈನ್‌ಗೆ ಒಳಗಾಗದಿರುವುದು ಅಚ್ಚರಿ ತಂದಿದೆ.

ಇದಕ್ಕೆ ಮುನ್ನ ಟ್ವೀಟ್‌ ಮಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಕನ್ನಡ ಚಾನೆಲ್‌ ಕ್ಯಾಮೆರಾಮನ್‌ಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಆತನ ಸಂಪರ್ಕದಲ್ಲಿದ್ದ ಸಿಎಂ, ಡಿಸಿಎಂ ಹಾಗೂ ಸಚಿವರನ್ನು ಏಕೆ ಕ್ವಾರಂಟೈನ್‌ ಮಾಡಿಲ್ಲ ಎಂದು ಗಂಭೀರ ಪ್ರಶ್ನೆ ಎತ್ತಿದ್ದರು.  ಕ್ಯಾಮೆರಾಮನ್‌ ಏಪ್ರಿಲ್ 23ರಂದು ತಪಾಸಣೆಗೆ ಒಳಗಾಗಿದ್ದು, ಸೋಂಕು ದೃಢಪಟ್ಟಿದೆ.

ಅವರು ಸಿಎಂ, ಡಿಸಿಎಂ ಸೇರಿದಂತೆ ಹಲವರ ಮಾತುಗಳನ್ನು ಸಮೀಪದಿಂದ  ಚಿತ್ರೀಕರಿಸಿದ್ದಾರೆ. ಹೀಗಾಗಿ, ಕೊರೊನಾ ಸೋಂಕು ನಿರ್ವಹಣೆಯ ಶಿಷ್ಟಾಚಾರದಂತೆ ಇವರಿಗೆಲ್ಲಾ ಕ್ವಾರಂಟೈನ್‌ ಏಕಿಲ್ಲ ಎಂದು ಪ್ರಶ್ನಿಸಿ ಡಿಕೆಶಿ ಟ್ವೀಟ್‌ ಮಾಡಿದ್ದರು. ಕೊರೋನಾ ಸೋಂಕಿಗೆ ಒಳಗಾಗಿದ್ದ ಕ್ಯಾಮರಾಮನ್ ಸಿಎಂ ಕಚೇರಿಗೂ ಹೋಗಿದ್ದ ಆದರೆ ಸಿಎಂ ಭೇಟಿಯಾಗಿರಲಿಲ್ಲ.

SCROLL FOR NEXT