ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಂಡುಬಂದ ಹುಲಿಯ ಚಿತ್ರ 
ರಾಜ್ಯ

ಅರಣ್ಯ ಸಂರಕ್ಷರ ಮೇಲೂ ಕೋವಿಡ್-19 ಪರಿಣಾಮ: ವೀಕ್ಷಕರಿಗೆ ಹಣ ಬಿಡುಗಡೆಯಲ್ಲಿ ವಿಳಂಬ

ಕೋವಿಡ್-19 ಎಲ್ಲಾ ಕ್ಷೇತ್ರಗಳ ಉದ್ಯೋಗಗಳ ಮೇಲೆ ಪರಿಣಾಮ ಬೀರಿರುವಂತೆಯೇ, ಅರಣ್ಯ ಸಂರಕ್ಷಣೆ ಕೆಲಸ ಮಾಡುತ್ತಿರುವವರಿಗೂ ಬಿಸಿ ಮುಟ್ಟಿಸಿದೆ.

ಬೆಂಗಳೂರು: ಕೋವಿಡ್-19 ಎಲ್ಲಾ ಕ್ಷೇತ್ರಗಳ ಉದ್ಯೋಗಗಳ ಮೇಲೆ ಪರಿಣಾಮ ಬೀರಿರುವಂತೆಯೇ, ಅರಣ್ಯ ಸಂರಕ್ಷಣೆ ಕೆಲಸ ಮಾಡುತ್ತಿರುವ ವೀಕ್ಷಕರಿಗೂ  ಬಿಸಿ ಮುಟ್ಟಿಸಿದೆ.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ, ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆ ವಿಳಂಬವಾಗಿದ್ದು, ರಾಜ್ಯಾದ್ಯಂತ ವನ್ಯಜೀವಿ ಸಂರಕ್ಷಣೆ ಮೇಲೆ ಪರಿಣಾಮ ಬೀರಿದೆ. ಹುಲಿ ಸಂರಕ್ಷಿತ ಪ್ರದೇಶಗಳ ಮೇಲಿನ ಪ್ರಭಾವ ಹೆಚ್ಚಾಗಿದೆ.

ಬೇಟೆಗಾರರ ವಿರುದ್ಧ ಕೆಲಸ ಮಾಡುವ ಅರಣ್ಯ ವೀಕ್ಷಕರಿಗೆ ಎನ್ ಟಿಸಿಎ ಹಣ ಬಿಡುಗಡೆ ಮಾಡಿಲ್ಲ, ಇದರಿಂದಾಗಿ ಕೆಲಸಗಾರರನ್ನು
ಕಿತ್ತುಹಾಕುವಂತೆ ರಾಜ್ಯ ಅರಣ್ಯ ಇಲಾಖೆ ಮೇಲೆ ಒತ್ತಡವಿದೆ.

ನಾಗರಹೊಳೆ ಮತ್ತು ಬಂಡೀಪುರ ಸಂರಕ್ಷಿತ ಪ್ರದೇಶಗಳಿಗೆ ಸೂಕ್ತ ಹಣ ಹಂಚಿಕೆಯಾಗಿದ್ದರೆ ಬಿಆರ್ ಟಿ, ಕಾಳಿ ಮತ್ತು ಭದ್ರಾ ಸಂರಕ್ಷಿತ ಪ್ರದೇಶಗಳ ಹಣ ಹಂಚಿಕೆಯಲ್ಲಿ ಕಡಿತ ಮಾಡಲಾಗಿದೆ. ಅನುದಾನ ತೀವ್ರ ಇಳಿಕೆಯಾಗಿದ್ದು, ಇದನ್ನು ಪ್ರಾದೇಶಿಕ ಮತ್ತು ಎನ್ ಟಿಸಿಎ ಪ್ರಧಾನ ಕಚೇರಿಗೆ ಗಮನಕ್ಕೆ ತಂದಿದ್ದೇವೆ. ವೇತನವನ್ನು ಮೊದಲು ಬಿಡುಗಡೆ ಮಾಡಿ, ನಂತರ ಇತರ ಕೆಲಸಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿರುವುದಾಗಿ ಮುಖ್ಯ ಸಂರಕ್ಷಣಾಧಿಕಾರಿ ಅರಣ್ಯಗಳು, ವನ್ಯಜೀವಿಗಳು ವಿಭಾಗದ ಮುಖ್ಯ ಅಧಿಕಾರಿ ಅಜಯ್ ಮಿಶ್ರಾ ಹೇಳಿದ್ದಾರೆ.

ಆದಾಗ್ಯೂ, ಹುಲಿ ಯೋಜನೆಯಲ್ಲಿ ಲಭ್ಯವಿರುವ ಹಣವನ್ನು ತುರ್ತು ಕಾರಣಗಳಿಗಾಗಿ ಇಡಲಾಗಿದೆ. ಅದನ್ನು ಬಳಸಿಕೊಳ್ಳುವಂತೆ
ಒತ್ತಡವಿದೆ. ಬಿಆರ್ ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ 104 ಬೇಟೆಗಾರರನ್ನು ತಡೆಯುವ ಅರಣ್ಯ ವೀಕ್ಷಕರಿದ್ದಾರೆ. ಆದರೆ, ಎನ್ ಟಿಸಿಎ
ಕೇವಲ 48 ಮಂದಿಗೆ ಮಾತ್ರ ಹಣ ಬಿಡುಗಡೆ ಮಾಡಿದೆ. ಪ್ರತಿ ಬೇಟೆಗಾರ ವಿರೋಧಿ ಕ್ಯಾಂಪ್ ಗಳಿಗೆ ನಾಲ್ವರು ವೀಕ್ಷಕರು ಇರುತ್ತಾರೆ. ಆದರೆ, ಈ ಅನುದಾನದಿಂದ ಕೇವಲ ಒಂದು ಕ್ಯಾಂಪ್ ಗೆ ಹಣ ನೀಡಬಹುದಾಗಿದೆ ಎಂದು ಅವರು ಪರಿಸ್ಥಿತಿಯನ್ನು ವಿವರಿಸಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಕೇಂದ್ರ ಸರ್ಕಾರ ತಡವಾಗಿ ಹಣ ಬಿಡುಗಡೆ ಮಾಡುತ್ತಿದೆ. ಮಾರ್ಚ್ ನಲ್ಲಿ ಬಿಡುಗಡೆಯಾಗಬೇಕಿದ್ದ
ಹಣವನ್ನು ಆಗಸ್ಟ್ ನಲ್ಲಿ ಬಿಡುಗಡೆ ಮಾಡುತ್ತಿದೆ. ಅರಣ್ಯ ಸಂರಕ್ಷಣೆಯಲ್ಲಿ ಅರಣ್ಯ ವೀಕ್ಷಕರ ಪಾತ್ರ ಮಹತ್ವದ್ದು, ಆದರೆ, ಕೋವಿಡ್-19
ಪರಿಸ್ಥಿಯ ಹೊಡೆತಕ್ಕೆ ಸಿಲುಕಿದ್ದಾರೆ. ಅವರ ವೇತನವನ್ನು ಸರ್ಕಾರ ಕಡಿತ ಮಾಡಬಾರದು,ಇಲ್ಲಿನ ಪರಿಸ್ಥಿತಿ ತುಂಬಾ ವಿಭಿನ್ನವಾಗಿದೆ
ಎಂದು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

Ranji Trophy final: ಔಕಿಬ್ ನಬಿ ಬೌಲಿಂಗ್ ಮ್ಯಾಜಿಕ್‌ಗೆ ಬೆರಗಾದ ಕೆಎಲ್ ರಾಹುಲ್; ಆರಂಭದಲ್ಲೇ ಕರ್ನಾಟಕಕ್ಕೆ ಸಂಕಷ್ಟ!

T20 World cup 2026: 'ಆಕ್ರಮಣಕಾರಿ ಶೈಲಿ ಮುಂದುವರಿಸಿ': ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಅನಿಲ್ ಕುಂಬ್ಳೆ ಎಚ್ಚರಿಕೆ

ರಿಯಲ್ ಲೈಫ್‌ನಲ್ಲೂ ಒಂದಾದ ರೀಲ್ ಜೋಡಿ: ತೆಲುಗು ಸಂಪ್ರದಾಯದಂತೆ ರಶ್ಮಿಕಾ–ವಿಜಯ್ ವಿವಾಹ, ಸಂಜೆ ಕೊಡವ ಸಂಪ್ರದಾಯದಲ್ಲಿ ಮತ್ತೊಂದು ಸಮಾರಂಭ

SCROLL FOR NEXT