ರಾಜ್ಯ

ಒಂದು ತಿಂಗಳ ನಂತರ ಸರಿಯಾದ ಆರ್ ಟಿಐ ವೆಬ್ ಸೈಟ್ 

Nagaraja AB

ಬೆಂಗಳೂರು: ಕಳೆದೊಂದು ತಿಂಗಳಿನಿಂದ ಕಾರ್ಯನಿರ್ವಹಿಸದ ರಾಜ್ಯ ಆರ್ ಟಿಐ ಆನ್ ಲೈನ್  (RTIonline.karnataka.gov.in) ಇದೀಗ ಸರಿಯಾಗಿದ್ದು, ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದೆ.

ಈ ಸಂಬಂಧ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ವರದಿ ಪ್ರಕಟಗೊಂಡಿತ್ತು. ವರದಿ ಪ್ರಕಟಗೊಂಡ ನಾಲ್ಕು ದಿನಗಳ ನಂತರ ಆನ್ ಲೈನ್ ಇದೀಗ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಜೂನ್ ತಿಂಗಳ ಮಧ್ಯದಿಂದಲೂ ಕಾರ್ಯನಿರ್ವಹಿಸದ ವೆಬ್ ಸೈಟ್ ಬಗ್ಗೆ ಜೂನ್ 27 ರಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ವರದಿ ಪ್ರಕಟವಾಗಿತ್ತು. ಸರ್ಕಾರ ಕೋವಿಡ್ -19 ಸಾಂಕ್ರಾಮಿ ರೋಗವನ್ನು ನಿರ್ವಹಣೆ ಮಾಡುತ್ತಿರುವ ಬಗ್ಗೆ ಮಾಹಿತಿಯನ್ನು ತಿಳಿಯಲು ಬಯಸುತ್ತಿದ್ದ ನಾಗರಿಕರ ಸಮಯ ವ್ಯರ್ಥವಾಗುತಿತ್ತು.

ಆರ್ ಟಿಐ ಅರ್ಜಿ ಸಲ್ಲಿಕೆ, ಅರ್ಜಿಗಳ ಸ್ಥಿತಿಗತಿ ಪರಿಶೀಲನೆ ಮತ್ತಿತರ ಕಾರಣಗಳಿಂದ ಆರ್ ಟಿಐ ವೆಬ್ ಸೈಟ್ ಬಳಕೆಯಾಗುತ್ತಿದೆ. ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಕೊರತೆಯಿಂದಾಗಿ ವೆಬ್ ಸೈಟ್  ಕಾರ್ಯನಿರ್ವಹಿಸುತ್ತಿಲ್ಲ.ಇದರಿಂದಾಗಿ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡಲಾಗುತ್ತಿದೆ ಎಂದು ಆರ್ ಟಿಐ ಕಾರ್ಯಕರ್ತರು ಹೇಳುತ್ತಿದ್ದರು.

ಇ- ಆಡಳಿತ  ಇಲಾಖೆ ನಿರ್ವಹಣೆ ಮಾಡುತ್ತಿರುವ ಈ ವೆಬ್ ಸೈಟ್ ಕೆಲವೊಂದು ತಾಂತ್ರಿಕ ತೊಂದರೆಯಿಂದಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಇದನ್ನು ರಾಜ್ಯ ಮಾಹಿತಿ ಆಯೋಗ ಇಲಾಖೆಗೆ ತಿಳಿಸಿತ್ತು. ಆದರೆ, ಪತ್ರಿಕೆಯಲ್ಲಿ ವರದಿ ಪ್ರಕಟವಾಗುವವರೆಗೂ ಈ ಸಮಸ್ಯೆ ಬಗೆಹರಿದಿರಲಿಲ್ಲ. ಇದೀಗ ಬಗೆಹರಿದಿದ್ದು, ವೆಬ್ ಸೈಟ್ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ.

SCROLL FOR NEXT