ರಾಜ್ಯ

ಬೆಂಗಳೂರು: ಪೀಣ್ಯ ಬಸವೇಶ್ವರ ಬಸ್ ನಿಲ್ದಾಣ ಈಗ ಕೋವಿಡ್ ಆಸ್ಪತ್ರೆ

Vishwanath S

ಬೆಂಗಳೂರು: ರಾಜ್ಯದಲ್ಲಿ ವಿಶೇಷವಾಗಿ ಬೆಂಗಲೂರಿನಲ್ಲಿ ಹೆಚ್ಚುತ್ತಿರುವ ಕರೋನ ಪ್ರಕರಣ ನಿಯಂತ್ರಿಸಲು ಪೀಣ್ಯದಲ್ಲಿರುವ ಬಸವೇಶ್ವರ ಬಸ್ ನಿಲ್ದಾಣವನ್ನೇ ಕೋವಿಡ್ ಆರೈಕೆ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ. 

ಇದು ನಾಳೆಯಿಂದಲೇ ಕಾರ್ಯರಂಭ ಮಾಡಲಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ತನ್ನ ಸೋಂಕಿತ ನೌಕರರದ್ದೇ ಚಿಂತೆಯಾಗಿತ್ತು. ಹಾಗಾಗಿ ಪೀಣ್ಯದಲ್ಲಿರುವ ಬಸವೇಶ್ವರ ಬಸ್ ನಿಲ್ದಾಣವನ್ನೇ ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಿದೆ. 

ಇಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ 200 ಬೆಡ್ಗಳ ಕೋವಿಡ್ ಕೇರ್ ಸೆಂಟರ್ ಉದ್ಘಾಟಿಸಿದರು ಇಲ್ಲಿರುವ ಶೇ 50 ರಷ್ಟು ಬೆಡ್ಗಳನ್ನು ಸಾರಿಗೆ ನೌಕರರಿಗೆ ಮೀಸಲಾಗಿಟ್ಟಿದ್ದು, ಇನ್ನುಳಿದ ಶೇ. 50ರಷ್ಟು ಬೆಡ್ಗಳನ್ನು ಇತರೆ ರೋಗಿಗಳ ಬಳಕೆಗೆ ನೀಡಲಾಗುವುದು.

ರೋಗಿಗಳನ್ನು ಕರೆತರಲು ನೌಕಕರಿಗಾಗಿ ಪ್ರತ್ಯೇಕ ಸಂಜಿವಿನಿ ಅಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಈ ಕೇಂದ್ರದಲ್ಲಿ ಎಸ್ ಆರ್ಟಿಇಸಿ , ಬಿಎಂಟಿಸಿ ಈಶಾನ್ಯ ಮತ್ತು ವಾಯುವ್ಯ ಸಾರಿಗೆ ನೌಕರರರಿಗೆ ಶೇಕಡ 50 ರಷ್ಟು ಹಾಸಿಗೆ ಮೀಸಲಿಡಲಾಗಿದೆ. ನೆಲ ಮಹಡಿಯಲ್ಲಿ ಮತ್ತು ಮೊದಲ ಮಹಡಿಯಲ್ಲಿ 200 ಹಾಸಿಗೆಗಳ ಸೌಲಭ್ಯ ಕಲ್ಲಿಸಲಾಗಿದೆ ಎಂದು ನಿಗಮ ಪ್ರಕಟಣೆ ಹೇಳಿದೆ.
 

SCROLL FOR NEXT