ರಾಜ್ಯ

ರಾಜ್ಯಾದ್ಯಂತ ಭಾರೀ ಮಳೆ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿಗಳು

Shilpa D

ಬೆಳಗಾವಿ: ಕಳೆದ ಎರಡು ದಿನಗಳಿಂದ ರಾಜ್ಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮಾರ್ಕಂಡೇಯ, ಮಲಪ್ರಭಾ, ಘಟಪ್ರಭಾ ಮತ್ತು ದೂದ್ ಗಂಗಾ ಹಾಗೂ ಕೃಷ್ಣಾ ನದಿಗಳು ತುಂಬಿ ಹರಿಯುತ್ತಿವೆ.

ಮಾರ್ಕಂಡೇಯ ಮತ್ತು ಮಲಪ್ರಭಾ ನದಿಗಳ ಉದ್ದಕ್ಕೂ ಸಾವಿರಾರು ಎಕರೆ ಭೂಮಿ ನೀರಿನಲ್ಲಿ ಮುಳುಗಿದೆ. ಈಗಾಗಲೇ ಜಿಲ್ಲೆಯಲ್ಲಿ ಅಧಿಕ ಮಳೆಯಾಗಿದ್ದು, ಕಳೆದ ಐದು ದಿನಗಳಲ್ಲಿ  989 ಮಿಮಿ ಮಳೆಯಾಗಿದೆ, ಆಗಸ್ಟ್ ತಿಂಗಳಿನಲ್ಲಿ 1,699 ಮಿಮೀ ಮಳೆ ನಿರೀಕ್ಷೆ ಮಾಡಲಾಗಿದೆ.

ರಾಕಸ್ಕೋಪ್ಪ ಗ್ರಾಮದಲ್ಲಿ ಮಾರ್ಕಂಡೇಯ ನದಿಗೆ ಅಡ್ಡಲಾಗಿ ನಿರ್ಮಿಸಲಾದ ರಾಕಾಸ್ಕೋಪ್ ಜಲಾಶಯವು ಗರಿಷ್ಠ ಮಟ್ಟವನ್ನು ತಲುಪಿದೆ.

ಮಳೆ ಹೀಗೆಯೇ ಮುಂದುವರಿದರೇ ಅಣೆಕಟ್ಟಿನಿಂದ ನೀರು ಬಿಡುಗಡೆಯಾಗಲಿದ್ದು, ಪ್ರದೇಶದ ಜನ ಪ್ರವಾಹ ಎದುರಿಸುವ ಸಾಧ್ಯತೆಯಿದೆ.

SCROLL FOR NEXT