ರಾಜ್ಯ

ತಲಕಾವೇರಿ ಭೂಕುಸಿತ:ಶೋಧ ಕಾರ್ಯಾಚರಣೆ ಪುನರಾರಂಭ, ಒಂದು ಮೃತದೇಹ ಪತ್ತೆ

Raghavendra Adiga

ಮಡಿಕೇರಿ:  ಕೊಡಗಿನ ತಲಕಾವೇರಿ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಿಲುಕಿರುವ ಐವರ ಶೋಧ ಕಾರ್ಯಾಚರಣೆ ಶನಿವಾರ ಮಧ್ಯಾಹ್ನ ಪುನರಾರಂಭಗೊಂಡಿದ್ದು, ಒಂದು ಮೃತದೇಹವನ್ನು ಮಣ್ಣಿನ ಅವಶೇಷಗಳಿಂದ ಹೊರತೆಗೆಯಲಾಗಿದೆ.

ಭೂಕುಸಿತದಿಂದ ಹಾನಿಗೊಳಗಾದ ಪ್ರದೇಶಕ್ಕೆ ಅಗೆಯುವ ಯಂತ್ರವನ್ನು ಸ್ಥಳಾಂತರಿಸುವಲ್ಲಿ ರಕ್ಷಣಾ ಸಿಬ್ಬಂದಿ ತೊಂದರೆ ಅನುಭವಿಸಿದ ನಂತರ, ನಾಪತ್ತೆಯಾದವರ ಶೋಧ ಕಾರ್ಯಗಳು ಸ್ಥಗಿತಗೊಂಡಿದ್ದವು ಎಂದು ಜಿಲ್ಲೆಯ ಅಧಿಕಾರಿಗಳು ತಿಳಿಸಿದ್ದಾರೆ. ಶನಿವಾರ ಮಧ್ಯಾಹ್ನ ಕಾರ್ಯಾಚರಣೆಯನ್ನು ಪುನರಾರಂಭಿಸಲಾಗಿದ್ದು, ಎನ್‌ಡಿಆರ್‌ಎಫ್ ಸಿಬ್ಬಂದಿ ಒಂದು ಮೃತದೇಹವನ್ನು ವಶಪಡಿಸಿಕೊಂಡಿದ್ದಾರೆ.

ಮೃತರನ್ನು ತಲಕಾವೇರಿ ದೇವಾಲಯದ ಪ್ರಧಾನ ಅರ್ಚಕ ನಾರಾಯಣ ಆಚಾರ್ ಅವರ ಅಣ್ಣಆನಂದ ತೀರ್ಥ(86)  ಎಂದು ಗುರುತಿಸಲಾಗಿದೆ.

ಇದೀಗ  ನಾರಾಯಣ ಆಚಾರ್ ಕುಟುಂಬದ ಇನ್ನೂ ನಾಲ್ವರ ಶೋಧಕಾರ್ಯಾಚರಣೆ ಮುಂದುವರಿದಿದೆ. ಆದರೆ ಭಾರೀ ಮಳೆ ಕಾರಣಕ್ಕಾಗಿ ಆಗಾಗ ಶೋಧ ಕಾರ್ಯಾಚರಣೆಗೆ ಅಡ್ಡಿ ಉಂಟಾಗುತ್ತಿದೆ,

SCROLL FOR NEXT