ತಂದೆ ತಾಯಿಯೊಂದಿಗೆ ಸಾಧಕ ಸಾರ್ಥಕ್ 
ರಾಜ್ಯ

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕನ್ನಡ, ಹಿಂದಿ ಮತ್ತು ಇಂಗ್ಲೀಷ್ ನಲ್ಲಿ ಪೂರ್ಣ ಅಂಕ ಪಡೆದ ಗುಜರಾತಿ ಬಾಲಕ!

ಗುಜರಾತ್ ನಲ್ಲಿ ಹುಟ್ಟಿದ ಬಾಲಕನೊಬ್ಬ ಕನ್ನಡ ಭಾಷೆಯನ್ನು ಪ್ರಥಮ ಭಾಷೆಯನ್ನಾಗಿ ತೆಗೆದುಕೊಂಡು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪೂರ್ಣ ಅಂಕ ಪಡೆದು ಸಾಧನೆ ಮೆರಿದಿದ್ದಾನೆ.

ತುಮಕೂರು: ಗುಜರಾತ್ ನಲ್ಲಿ ಹುಟ್ಟಿದ ಬಾಲಕನೊಬ್ಬ ಕನ್ನಡ ಭಾಷೆಯನ್ನು ಪ್ರಥಮ ಭಾಷೆಯನ್ನಾಗಿ ತೆಗೆದುಕೊಂಡು
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪೂರ್ಣ ಅಂಕ ಪಡೆದು ಸಾಧನೆ ಮೆರಿದಿದ್ದಾನೆ.

ಕೊರಟಗೆರೆಯ ರವೀಂಧ್ರ ಭಾರತಿ ಪ್ರೌಢಶಾಲೆಯ ವಿದ್ಯಾರ್ಥಿ ಸಾರ್ಥಕ್  ಕನ್ನಡದಲ್ಲಿ 125ಕ್ಕೆ 125 ಅಂಕ ಪಡೆದಿದ್ದು, ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಕ್ರಮವಾಗಿ 100ಕ್ಕೆ ನೂರು ಅಂಕಗಳನ್ನು ಪಡೆದುಕೊಂಡಿದ್ದಾನೆ. ಸಮಾಜ ವಿಜ್ಞಾನದಲ್ಲಿ 97, ವಿಜ್ಞಾನದಲ್ಲಿ 89 ಹಾಗೂ ಗಣಿತದಲ್ಲಿ 84 ಪಡೆಯುವ ಮೂಲಕ ಗರಿಷ್ಠ 597 ಅಂಕಗಳನ್ನು ಗಳಿಸಿದ್ದಾನೆ.

ಸಾರ್ಥಕ್ ಅವರ ತಂದೆ ಸಣ್ಣ ವ್ಯಾಪಾರ ನಡೆಸುತ್ತಿದ್ದು, ಹಿಂದಿ ಅಥವಾ ಸಂಸ್ಕೃತ ಭಾಷೆಯ ಬದಲಿಗೆ ಕನ್ನಡವನ್ನು ಪ್ರಥಮ
ಭಾಷೆಯನ್ನಾಗಿ ತೆಗೆದುಕೊಂಡಿದ್ದಾಗಿ ಸಾರ್ಥಕ್ ತಿಳಿಸಿದ್ದಾನೆ.

ಕಳೆದ ವರ್ಷ ಶಾಲಾ ಪ್ರವಾಸದ ವೇಳೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮಸ್ಥಳ ಕುಪ್ಪಳ್ಳಿಗೆ ತೆರಳಿ, ಕವಿಶೈಲದಲ್ಲಿ ಕೆಲ ಕಾಲ
ಕಳೆದಿದ್ದು, ಕುವೆಂಪು ಅವರಿಂದ ಸ್ಪೂರ್ತಿ ಗೊಂಡಿರುವುದಾಗಿ ಸಾರ್ಥಕ್ ಮಾಹಿತಿ ನೀಡಿದ್ದಾನೆ.

ಸಾರ್ಥಕ್ ಅವರ ತಂದೆ ನರಸಿಂಹ ಎಂ ನಕ್ರಾನಿ ಮತ್ತು ಮೀರಾ ಬೆನ್ ಹತ್ತನೆ ತರಗತಿವರಗೂ ಗುಜರಾತ್ ನಲ್ಲಿ ವ್ಯಾಸಂಗ
ಮಾಡಿದ್ದು, ಕೊರಟಗೆರೆಯಲ್ಲಿ ಬಾಡಿಗೆ ಮನೆಯೊಂದರಲ್ಲಿ ಇದ್ದು, ಫ್ಲೇವುಡ್ ಮತ್ತು ಗಾಜಿನ ಅಂಗಡಿ ಇಟ್ಟುಕೊಂಡಿದ್ದಾರೆ. ಕೋವಿಡ್-19 ಕಾರಣದಿಂದ ವ್ಯವಹಾರದಲ್ಲಿ ನಷ್ಟವಾಗಿದ್ದು, ಮೂರು ತಿಂಗಳಿನಿಂದ ಅಂಗಡಿ ಬಾಡಿಗೆ ಕಟ್ಟಿಲ್ಲ. ಆದಾಗ್ಯೂ, ತನ್ನ  ಮಗನನ್ನು ಸರ್ಕಾರಿ ಕಾಲೇಜೊಂದರಲ್ಲಿ ವಿಜ್ಞಾನ ವಿಷಯಕ್ಕೆ ಸೇರಿಸುವುದಾಗಿ ಅವರು ಹೇಳಿದ್ದಾರೆ.

ನರಸಿಂಹ ಎಂ ನಕ್ರಾನಿ ಪುತ್ರಿ ಪ್ರಾರ್ಥನಾ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ 8ನೇ ತರಗತಿಯಲ್ಲಿ ಕನ್ನಡ ಮಾಧ್ಯಮದಲ್ಲಿ 
ವ್ಯಾಸಂಗ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

'China isn't afraid': ಅಮೆರಿಕದ ಶೇ.100 ರಷ್ಟು ಸುಂಕದ ಬಗ್ಗೆ ಚೀನಿಯರ ಪ್ರತಿಕ್ರಿಯೆ!

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

SCROLL FOR NEXT