ರಾಜ್ಯ

ಬೆಂಗಳೂರು: ನಕಲಿ ವಾಟ್ಸಾಪ್ ಖಾತೆ ಸೃಷ್ಟಿಸಿ ವಂಚನೆ; ಆರೋಪಿ ಬಂಧನ

Shilpa D

ಬೆಂಗಳೂರು: ನಕಲಿ ವಾಟ್ಸಾಪ್ ಖಾತೆ ಸೃಷ್ಟಿ ವಂಚಿಸುತ್ತಿದ್ದ ವ್ಯಕ್ತಿ ಯೋರ್ವನನ್ನು ಪೂರ್ವ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಸಮೀರ್ ಕುಮಾರ್ (25) ಬಂಧಿತ ಆರೋಪಿ.

ಮಂಜುಳಾ ಎಂಬುವವರು, ತಮ್ಮ ಹೆಸರಿನಲ್ಲಿ ನಕಲಿ ವಾಟ್ಸಾಪ್ ಖಾತೆ ಸೃಷ್ಟಿಸಿ ಯಾರೋ ಒಬ್ಬರು ನಮ್ಮ ತಾಯಿಯ ಚಿಕಿತ್ಸೆ ಗೆ ಹಣ ಬೇಕಾಗಿದ್ದು, ಕೂಡಲೇ ನೀಡಿದ ಬ್ಯಾಂಕ್ಖಾತೆಗೆ ಹಣ ವರ್ಗಾವಣೆ ಮಾಡಿ ಎಂದು ತಮ್ಮ ಸಹೋದ್ಯೋಗಿಗೆ ಸಂದೇಶ ರವಾನಿಸಿದ್ದಾರೆ. ಹೀಗಾಗಿ ಅವರು ತಮ್ಮ ಪೆಟಿಎಂ ಖಾತೆಯಿಂದ 4,500ರೂ. ಹಣ ವರ್ಗಾವಣೆ ಮಾಡಿದ್ದರು. ಈ ಬಗ್ಗೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಆರೋಪಿ ಪ್ರಸ್ತುತ ಮಾರ್ಚ್ ತಿಂಗಳಲ್ಲಿ ಕೊರೊನಾದಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದನು. ಆ ಸಮಯದಲ್ಲಿ ಇಂದಿರಾನಗರದ ಖಾಸಗಿ ಕಂಪನಿಯಿಂದ ಸಂದರ್ಶನವೊಂದಕ್ಕೆ‌ಹಾಜರಾಗುವಂತೆ ಆತನಿಗೆ ಕರೆ ಬರುತ್ತದೆ. ಆ ಸಂದರ್ಭದಲ್ಲಿ ಆತ ಕಂಪನಿಯ ಉದ್ಯೋಗಿಗಳ ವಿವರಗಳನ್ನು ಗೂಗಲ್ ನಿಂದ ಸಂಗ್ರಹಿಸಿ ಪಿರ್ಯಾದುದಾರರ ಭಾವಚಿತ್ರ ವಿರುವ ನಕಲಿ ವಾಟ್ಸಾಪ್ ಪ್ರೊಪೈಲ್ ಸೃಷ್ಟಿಸಿ ಅವರ ಸಹದ್ಯೋಗಿಗಳಿಂದ ಹಣಕ್ಕೆ ಬೇಡಿಕೆ ಇಡುತ್ತಿದ್ದ.

ಜೀವನ ನಿರ್ವಹಣೆ ಗಾಗಿ ಆತ ಈ ಮಾರ್ಗ ಕಂಡುಕೊಂಡಿದ್ದ ಎಂದು ತನಿಖೆ ವೇಳೆ ಆರೋಪಿ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ಇನ್ಸ್ ಪೆಕ್ಟರ್ ಅನೀತಾ ಕುಮಾರಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

SCROLL FOR NEXT