ರಾಜ್ಯ

ಕರ್ನಾಟಕದ ಮೊದಲ ವೇಳಾಪಟ್ಟಿ ಸರಕು ರೈಲು ಆಗಸ್ಟ್ 15 ರಂದು ಪಶ್ಚಿಮ ಬಂಗಾಳಕ್ಕೆ ಸಂಚಾರ ಆರಂಭ

Sumana Upadhyaya

ಬೆಂಗಳೂರು: ನೈರುತ್ಯ ರೈಲ್ವೆಯ ಮೊದಲ ವೇಳಾಪಟ್ಟಿ ಸರಕು ರೈಲು ಬೆಂಗಳೂರಿನ ವೈಟ್ ಫೀಲ್ಡ್ ಸ್ಯಾಟಲೈಟ್ ಗೂಡ್ಸ್ ಟರ್ಮಿನಲ್ ನಿಂದ ಪಶ್ಚಿಮ ಬಂಗಾಳದ ಶಾಲಿಮರ್ ಸ್ಟೇಷನ್ ಗೆ ಪ್ರಯಾಣಿಸಲಿದೆ. 

ಈ ವಾರದ ರೈಲಿನ ವ್ಯವಸ್ಥೆಯಡಿ ಗ್ರಾಹಕರು ಪ್ರತ್ಯೇಕ ವಾಗನ್ ಬುಕ್ಕಿಂಗ್ ಮಾಡುವಂತೆ ಸೂಚಿಸಲಾಗಿದ್ದು ಗಂಟೆಗೆ 40 ಕಿಲೋ ಮೀಟರ್ ವೇಗದಲ್ಲಿ ಚಲಿಸಲಿದೆ. ಪ್ರತಿ ಶನಿವಾರ ಸಾಯಂಕಾಲ 5 ಗಂಟೆಗೆ ಸ್ಯಾಟಲೈಟ್ ಟರ್ಮಿನಲ್ ನಿಂದ ರೈಲು ಹೊರಟು ಪಶ್ಚಿಮ ಬಂಗಾಳದ ಶಾಲಿಮರ್ ಗೆ 48 ಗಂಟೆಗಳಲ್ಲಿ ತಲುಪಲಿದೆ. ಮತ್ತೆ ಹಿಂತಿರುಗಿ ಬರಲು ಮಂಗಳವಾರ ಅಪರಾಹ್ನ 4 ಗಂಟೆಗೆ ಹೊರಡಲಿದೆ. ಪಾರ್ಸೆಲ್ ವಿಲೇವಾರಿ ಮಾಡುವವರು 42 ವಾಗನ್ ಗಳನ್ನು ಹೊಂದಿರುವ ಗೂಡ್ಸ್ ರೈಲಿನಲ್ಲಿ ಪ್ರತ್ಯೇಕ ವಾಗನ್ ಬುಕ್ಕಿಂಗ್ ಮಾಡಲು ಅವಕಾಶವಿದೆ ಎಂದು ಬೆಂಗಳೂರಿನ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಎ ಎನ್ ಕೃಷ್ಣ ರೆಡ್ಡಿ ತಿಳಿಸಿದ್ದಾರೆ.

ಒಂದು ವಾಗ್ 60 ಸಾವಿರ ಕೆಜಿ ಸಾಮರ್ಥ್ಯವನ್ನು ಹೊತ್ತೊಯ್ಯಲಿದ್ದು ರಸ್ತೆಗಳ ಮೂಲಕ ಸರಕುಗಳನ್ನು ಸಾಗಿಸುವವರಿಗೆ ರೈಲಿನ ಮೂಲಕ ಸಾಗಿಸಿದರೆ ಶೇಕಡಾ 40ರಷ್ಟು ವೆಚ್ಚ ಕಡಿತವಾಗುತ್ತದೆ. ಸರಾಸರಿ ಪ್ರತಿ ಟನ್ ಗೆ 2,500 ಆಗುತ್ತದೆ ಎಂದು ಅವರು ವಿವರಿಸಿದರು. 

ಲಾಕ್ ಡೌನ್ ನಂತರ ಪ್ರಾಯೋಗಿಕ ಮಾದರಿಯಲ್ಲಿ ಕಳೆದ ಜುಲೈ 25ರಿಂದ ಭಾರತೀಯ ರೈಲ್ವೆ ಸರಕು ಸಾಗಣೆ ರೈಲು ಸಂಚಾರವನ್ನು ಪುನರಾರಂಭಿಸಿತು.

SCROLL FOR NEXT