ರಾಜ್ಯ

ಬೆಂಗಳೂರು ಹಿಂಸಾಚಾರ: ಫೇಸ್ ಬುಕ್ ಪೋಸ್ಟ್ ದೊಡ್ಡ ವಿಚಾರವಲ್ಲ, ಆರೋಪಿ ನವೀನ್ ತಂದೆ ಪವನ್ ಕುಮಾರ್

Srinivasamurthy VN

ಬೆಂಗಳೂರು: ಡಿಜಿ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಿಂಸಾಚಾರ ನಡೆಯಲು ರಾಜಕೀಯ ಕಾರಣವಿದೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವುದು ದೊಡ್ಡ ವಿಚಾರವೇನು ಅಲ್ಲ ಎಂದು ಆರೋಪಿ ನವೀನ್ ತಂದೆ ಪವನ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. 

ಪೊಲೀಸರ ಎದುರು ನವೀನ್, ತಾನೇ ವಿವಾದಾತ್ಮಕ ಪೋಸ್ಟ್ ಹರಿಬಿಟ್ಟಿರುವುದಾಗಿ ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ನವೀನ್ ತಂದೆ ಪವನ್ ಕುಮಾರ್, ನವೀನ್ ತಪ್ಪು ಮಾಡಿದ್ದರೇ, ಕಾನೂನು ಮೂಲಕ ಶಿಕ್ಷೆ ಆಗಲಿ. ಕಾನೂನಿಗಿಂತ ಮಿಗಿಲು ಯಾರೂ ಇಲ್ಲ ಎಂದರು.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡಿದ್ದು, ದೊಡ್ಡ ವಿಚಾರವೇನು ಅಲ್ಲ. ಈ ವಿಷಯಕ್ಕೆ ಇಷ್ಟು ದೊಡ್ಡ ಮಟ್ಟದ ಅವಾಂತರ ಸೃಷ್ಟಿಸುವ ಅಗತ್ಯ ಇರಲಿಲ್ಲ. ಇದು ರಾಜಕೀಯ ದುರುದ್ದೇಶದಿಂದ ಬೇಕಂತಲೇ ದೊಂಬಿ ಗಲಾಟೆ ಮಾಡಲಾಗಿದೆ ಎಂದು ಅವರು ಆರೋಪಿಸಿದರು.

ಆ.5ರಂದು ನಡೆದ ರಾಮಮಂದಿರ ಶಿಲಾನ್ಯಾಸದ ದಿವಸ ಮಗ ನವೀನ್ ಪಟಾಕಿ ಸಿಡಿಸಿ ಸಂಭ್ರಮಿಸಿದ್ದ. ಈ ಸಂಭ್ರಮಾಚಾರಣೆಯೇ ಗಲಭೆಗೆ ಕಾರಣವಾಗಿದೆ ಎಂದು ಅವರು ಗಂಭೀರವಾಗಿ ಆರೋಪಿಸಿದರು. ನಗರದ ಡಿಜೆ ಹಳ್ಳಿ, ಕೆಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿವರೆಗೆ ಒಟ್ಟು 22 ಎಫ್ ಐ ಆರ್ ದಾಖಲಾಗಿವೆ. ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ತಲಾ 11 ಎಫ್ ಐ ಆರ್ ಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

SCROLL FOR NEXT