ರಾಜ್ಯ

ತಲಕಾವೇರಿ ಭೂಕುಸಿತ: ಪತ್ತೆಯಾಗದ 2 ಮೃತದೇಹ, 12ನೇ ದಿನವೂ ಮುಂದುವರಿದ ಶೋಧಕಾರ್ಯ

Raghavendra Adiga

ಮಡಿಕೇರಿ: ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ತಲಕಾವೇರಿಯ ಸಮೀಪದ  ಬ್ರಹ್ಮಗಿರಿ ಬೆಟ್ಟದಲ್ಲಿನ  ಭೂಕುಸಿತ ಕಾರಣ ತಲಕಾವೇರಿ ಪ್ರಧಾನ ಅರ್ಚಕ ನಾರಾಯಣ ಆಚಾರ್ ಅವರ ಮನೆ ನೆಲಸಮವಾದ ಪ್ರಕರಣದಲ್ಲಿ ಘಟನೆ ನಡೆದು 12 ದಿನಗಳು ಕಳೆದರೂ, ಈವರೆಗೆ ಇಬ್ಬರ ಶವಗಳನ್ನು ಪತ್ತೆ ಮಾಡಲಾಗಿಲ್ಲ.

ತಲಕಾವೇರಿಯ ಮುಖ್ಯ ಅರ್ಚಕ, ನಾರಾಯಣ ಆಚಾರ್ ಅವರ  ಪತ್ನಿ, ಶಾಂತಾ, ಸಹೋದರ ಆನಂದ ತೀರ್ಥ  ಮತ್ತು ಇಬ್ಬರು ಸಹಾಯಕ ಪುರೋಹಿತರಾದ ರವಿಕೀರನ್ ಮತ್ತು ಶ್ರೀನಿವಾಸ್ ದುರಂತದ ನಂತರ ನಾಪತ್ತೆಯಾಗಿದ್ದರು. ಈವರೆಗೆ ಮೂರು ಶವಗಳು ಪತ್ತೆಯಾಗುದ್ದು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ(ಎನ್.ಡಿ.ಆರ್.ಎಫ್), ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿಯಂತ್ರಗಳ ಸಹಾಯದಿಂದ ಪ್ರದೇಶವನ್ನು ಪಟ್ಟುಬಿಡದೆ ಶೋಧಿಸಿದ್ದಾರೆ

ಆದರೆ ಸಹಾಯಕ ಅರ್ಚಕ  ಶ್ರೀನಿವಾಸ್ ಮತ್ತು ನಾರಾಯಣ ಆಚಾರ್ ಪತ್ನಿ ಶಾಂತಾ ಅವರ ಶವಗಳು ಇದುವರೆಗೆ ಪತ್ತಾಯಾಗಿಲ್ಲ.  ಶನಿವಾರ ಸಹಾಯಕ ರವಿಕೀರಣ್ ಅವರ ಶವ ಪತ್ತೆಯಾಗಿತ್ತು. ನಂತರ, ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ಅವರು ರಕ್ಷಣಾ ತಂಡಗಳಿಗೆ ಶೋಧ ಕಾರ್ಯಾಚರಣೆಯನ್ನು ಮುಂದುವರಿಸಲು ಸೂಚಿಸಿದ್ದರು. ಆದರೆ ಅದರ ನಂತರ ಇದುವರೆಗೆ ಯಾರೊಬ್ಬರ ಶವವೂ ಪತ್ತೆಯಾಗಿಲ್ಲ. 

ರಕ್ಷಣಾ ತಂಡಗಳು ಮಂಗಳವಾರವೂ ತಮ್ಮ ಕಾರ್ಯಾಚರಣೆಯನ್ನು ಪುನರಾರಂಭಿಸಿವೆ. ಆದರೆ ಭಾರೀ ಮಳೆ ಮತ್ತು ದಟ್ಟವಾದ ಮಂಜಿನಿಂದಾಗಿ ರಕ್ಷಣಾ ಕಾರ್ಯವು ನಿಧಾನವಾಗಿದೆ. ಭಾರಿ ಮಳೆ ಮತ್ತು ಮತ್ತಷ್ಟು ಭೂಕುಸಿತದ ಸಾಧ್ಯತೆಗಳ ಕಾರಣ,  ಅಗೆಯುವ ಯಂತ್ರಗಳ ಕಾರ್ಯಾಚರಣೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಇತರ ತಂಡಗಳುರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ಶೀಘ್ರದಲ್ಲೇ ಇತರ ಎರಡು ಶವಗಳನ್ನು ಪತ್ತೆ ಮಾಡುವ ನಿರೀಕ್ಷೆಯಿದೆ.

SCROLL FOR NEXT