ರಾಜ್ಯ

ಗೋಕರ್ಣ ಮಹಾಬಲೇಶ್ವರ ದೇವಾಲಯ ವಿವಾದ: ರಾಮಚಂದ್ರಾಪುರ ಮಠಕ್ಕೆ ಮತ್ತೊಂದು ಜಯ

Raghavendra Adiga

ಬೆಂಗಳೂರು: ಗೋಕರ್ಣದ ಮಹಾಬಲೇಶ್ವರ ದೇವಸ್ಥಾನವನ್ನು ನಿರ್ವಹಿಸುವ ರಾಮಚಂದ್ರಾಪುರ ಮಠವು ಕಾನೂನು ಹೋರಾಟದಲ್ಲಿ ಮತ್ತೊಂದು ಜಯ ಸಾಧಿಸಿದೆ.

ಈ ಪ್ರಕರಣದಲ್ಲಿ ಗೋಕರ್ಣ ದೇವಸ್ಥಾನದಲ್ಲಿ ಪೂಜಾ ವಿಧಾನಗಳನ್ನು ನಿರ್ವಹಿಸಲು ಮತ್ತು ಭಕ್ತರಿಂದ ದಕ್ಷಿಣೆ ಸ್ವೀಕರಿಸಲು ಅನುಮತಿ ಕೋರಿ ಅನಂತ ದತ್ತಾತ್ರೇಯ ಆದಿ ಸೇರಿ ರ 24 ಮಂದಿ ಮಾಡಿದ್ದ ಮನವಿಗೆ ಕೋರ್ಟ್ ಅಸಮ್ಮತಿಸಿದೆ

ಕಾರವಾರ ರ್ ಜಿಲ್ಲಾ ನ್ಯಾಯಾಲಯವು ಅನಂತ ದತ್ತಾತ್ರೇಯ ಆದಿ ಹಾಗೂ  ಇತರರ ಪರವಾಗಿ ತನ್ನ ತೀರ್ಪನ್ನು ನೀಡಿತ್ತು ಈ ಸಂಬಂಧ ರಾಮಚಂದ್ರಾಪುರ ಮಠ ದೇವಾಲಯದ ಅರ್ಚಕರ ಗುಂಪಿನೊಂದಿಗೆ ಜಿಲ್ಲಾ ಕೋರ್ಟ್ ತೀರ್ಪಿನ ವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಮಠ ಮತ್ತು ಈ ಅರ್ಚಕರ ಗುಂಪು ಈಗ ಜಯಗಳಿಸಿದೆ. 

ಆದಿ ಹಾಗೂ ಇತರರು ಮೊದಲಿಗೆ ಕುಮಟಾ ಸೀನಿಯರ್ ಸಿವಿಲ್ ನ್ಯಾಯಾಲಯದಲ್ಲಿ ಗೋಕರ್ಣ ದೇವಸ್ಥಾನದಲ್ಲಿ ಸಾಂಪ್ರದಾಯಿಕ ಪೂಜೆಯನ್ನು ನಡೆಸಲು ಅನುಮತಿ ನೀಡುವಂತೆ ಮತ್ತು ಭಕ್ತರಿಂದ ದಕ್ಷಿಣೆ ಸ್ವೀಕರಿಸುವುದಕ್ಕೆ ಸಮ್ಮತಿ ಕೋರಿ ಮೊಕದ್ದಮೆ ಹೂಡಿದ್ದರು. ಪೂಜೆಯನ್ನು ಮಾಡುವುದನ್ನು ತಡೆಯುವ ಮತ್ತು ದಕ್ಷಿಣೆ ಸ್ವೀಕಾರ  ಮಾಡುವ  ಟ್ರಸ್ಟಿಗಳ ಮಂಡಳಿಯ ವಿರುದ್ಧ ಅವರು ಶಾಶ್ವತ ತಡೆಯಾಜ್ಞೆಯನ್ನು ಕೋರಿದ್ದರು.
 

SCROLL FOR NEXT