ಚನ್ನರಾಯಪಟ್ಟಣ: 80 ಎಕರೆ ಜಮೀನು ಹೊಂದಿದ್ದ ಮಕ್ಕಳಿರದ ವೃದ್ದ ದಂಪತಿಯ ಬರ್ಬರ ಹತ್ಯೆ
ಹಾಸನದಲ್ಲಿ ಮುಂದುವರಿದ ಕೊಲೆ ಸರಣಿ ವೃದ್ದ ದಂಪತಿಯ ಬರ್ಬರ ಹತ್ಯೆ ಚನ್ನರಾಯಪಟ್ಟಣ ತಾಲ್ಲೂಕಿನ ಆಲಗೊಂಡನಹಳ್ಳಿಯಲ್ಲಿ ಘಟನೆ ನಡೆದಿದೆ.
ಹಾಸನ: ಹಾಸನದಲ್ಲಿ ಮುಂದುವರಿದ ಕೊಲೆ ಸರಣಿ ವೃದ್ದ ದಂಪತಿಯ ಬರ್ಬರ ಹತ್ಯೆ ಚನ್ನರಾಯಪಟ್ಟಣ ತಾಲ್ಲೂಕಿನ ಆಲಗೊಂಡನಹಳ್ಳಿಯಲ್ಲಿ ಘಟನೆ ನಡೆದಿದೆ.
ಮುರುಳೀಧರ್ (71), ಉಮಾದೇವಿ (67) ಕೊಲೆಯಾದ ವೃದ್ದ ದಂಪತಿ. ದಿಂಬಿನಿಂದ ಉಸಿರುಗಟ್ಟಿಸಿ ಇಬ್ಬರನ್ನೂ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.
ವೃದ್ದ ದಂಪತಿಗಳಿಗೆ ಮಕ್ಕಳು ಇರಲಿಲ್ಲ. 80 ಎಕರೆ ಜಮೀನು ಹೊಂದಿದ್ದ ಮುರುಳೀಧರ್ ದಂಪತಿ ತೋಟದ ಮನೆಯಲ್ಲಿ ವಾಸವಿದ್ದರು.
ಮುರುಳೀಧರ್ ತಂದೆ ಕೃಷ್ಣಮೂರ್ತಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಸರ್ಕಾರ ಅವರಿಗೆ 80 ಎಕರೆ ಜಮೀನು ನೀಡಿತ್ತು.
ಮುರುಳೀಧರ್ ಬಿ.ಎಸ್ಸಿ. ಅರ್ಗಿಕಲ್ಚರ್ ವ್ಯಾಸಂಗ ಮಾಡಿದ್ದರು. ಕೃಷಿಯಲ್ಲಿ ಆಸಕ್ತಿ ಹೊಂದಿದ್ದರಿಂದ ಗ್ರಾಮದ ಹೊರಗಿರುವ 80 ಎಕರೆ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡು ವಾಸವಿದ್ದರು.
ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಎಸ್.ಪಿ. ಶ್ರೀನಿವಾಸಗೌಡ ಭೇಟಿ ಪರಿಶೀಲನೆ ನಡೆಸಿದರು.
ವರದಿ: ನಾಗಯ್ಯ