ರಾಜ್ಯ

ಕೈ ಕಟ್ಟಿ ಕುಳಿತ ಬೆಂಗಳೂರು ಪೊಲೀಸರು, ಲಾಕ್ ಡೌನ್ ಹೊರತಾಗಿಯೂ ಡ್ರಗ್ಸ್ ಪ್ರಕರಣ ಹೆಚ್ಚಳ

Lingaraj Badiger

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅದರಲ್ಲೂ ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಭಾರೀ ಸುದ್ದಿ ಮಾಡುತ್ತಿರುವ ಬೆನ್ನಲ್ಲೇ ಆಘಾತಕಾರಿ ಮಾಹಿತಿಯೊಂದು ಬಹಿರಂಗೊಂಡಿದ್ದು, ಲಾಕ್ ಡೌನ್ ಹೊರತಾಗಿಯೂ ಡ್ರಗ್ಸ್ ಪ್ರಕರಣಗಳು ಸಂಖ್ಯೆ ಹೆಚ್ಚಾಗಿದೆ.

ಕೊವಿಡ್-19 ಲಾಕ್‌ಡೌನ್ ಪ್ರತಿಯೊಂದು ಚಟುವಟಿಕೆಯ ಮೇಲೂ ಪರಿಣಾಮ ಬೀರಿದೆ. ಆದರೆ ಮಾದಕವಸ್ತು ಸೇವನೆ ಮೇಲೆ ಲಾಕ್ ಡೌನ್ ಯಾವುದೇ ಪರಿಣಾಮ ಬೀರಿಲ್ಲ. ಲಾಕ್ ಡೌನ್ ಹೊರತಾಗಿಯೂ ಈ ವರ್ಷ ಡ್ರಗ್ಸ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಪೊಲೀಸರು ಕೈ ಕಟ್ಟಿ ಕುಳಿತಂತಿದೆ.

ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಗೆ ದೊರೆತಿರುವ ನಗರದ ಅಪರಾಧ ದಾಖಲೆಗಳ ಅಂಕಿ ಅಂಶಗಳ ಪ್ರಕಾರ, ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಆಕ್ಟ್, 1985 (ಎನ್‌ಡಿಪಿಎಸ್) ಅಡಿಯಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ ಕಳೆದ ವರ್ಷಕ್ಕಿಂತ ಈ ವರ್ಷ  ಹೆಚ್ಚಾಗಿದೆ.

ಕಳೆದ ವರ್ಷ 768 ಪ್ರಕರಣಗಳು ದಾಖಲಾಗಿವೆ. ಈ ವರ್ಷ ಜುಲೈ 31 ರವರೆಗೆ 600ಕ್ಕೂ ಹೆಚ್ಚು ಪ್ರಕರಣಗಳನ್ನು ಈಗಾಗಲೇ ದಾಖಲಿಸಲಾಗಿದೆ. ಈ ಮೊದಲು, ಕೇವಲ ಡ್ರಗ್ ಸಾಗಿಸುವವರಿಗೆ ದಂಡ ವಿಧಿಸಲಾಗುತ್ತಿತ್ತು ಅಥವಾ ಬಂಧಿಸಲಾಗುತ್ತಿತ್ತು. ಈಗ ಡ್ರಗ್ ಸೇವಿಸುವವರ ವಿರುದ್ಧ ಕೇಸ್ ದಾಖಲಿಸಲಾಗುತ್ತಿದೆ ಹೀಗಾಗಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ (ಕೇಂದ್ರ ಅಪರಾಧ ಶಾಖೆ) ಗೌತಮ್ ಕೆ ಸಿ ಅವರು ಹೇಳಿದ್ದಾರೆ.

ವಿಶೇಷವೆಂದರೆ, ಈ ವರ್ಷ ಎಲ್‌ಎಸ್‌ಡಿ, ಎಂಎಸ್‌ಡಿ ಪೌಡರ್ ಮತ್ತು ಕ್ಯಾಪ್ಸುಲ್‌ಗಳನ್ನು ಹೊಂದಿರುವ ಹೆಚ್ಚಿನ ಪ್ರಕರಣಗಳು ನಡೆದಿವೆ. ವರ್ಷದ ಮೊದಲ ಆರು ತಿಂಗಳಲ್ಲಿ 10 ಪ್ರಕರಣಗಳಲ್ಲಿ ಹತ್ತೊಂಬತ್ತು ಭಾರತೀಯರು ಮತ್ತು ಐದು ವಿದೇಶಿಯರನ್ನು ಬಂಧಿಸಲಾಗಿದೆ. ಕಳೆದ ವರ್ಷ ಒಂಬತ್ತು ಪ್ರಕರಣಗಳನ್ನು ದಾಖಲಿಸಲಾಗಿತ್ತು.

SCROLL FOR NEXT