ಮೃತ ಪೊಲೀಸ್ ಮುಖ್ಯಪೇದೆ ಸಿದ್ದರಾಮಪ್ಪ 
ರಾಜ್ಯ

ಎಎಸ್ಐ ಆಗಿ ಬಡ್ತಿ ಹೊಂದಲಿದ್ದ ಪೊಲೀಸ್ ಮುಖ್ಯಪೇದೆ​ ಅಪಘಾತದಲ್ಲಿ ದುರ್ಮರಣ

ಕಾರು-ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಂದು ಎಎಸ್ಐ ಆಗಿ ಬಡ್ತಿ ಹೊಂದಲಿದ್ದ ಪೊಲೀಸ್ ಮುಖ್ಯಪೇದೆ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ಗ್ರಾಮದ ಬಳಿ ಬುಧವಾರ ರಾತ್ರಿ ಸಂಭವಿಸಿದೆ.

ಚಿಕ್ಕಮಗಳೂರು: ಕಾರು-ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಂದು ಎಎಸ್ಐ ಆಗಿ ಬಡ್ತಿ ಹೊಂದಲಿದ್ದ ಪೊಲೀಸ್ ಮುಖ್ಯಪೇದೆ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ಗ್ರಾಮದ ಬಳಿ ಬುಧವಾರ ರಾತ್ರಿ ಸಂಭವಿಸಿದೆ. 48 ವರ್ಷದ ಸಿದ್ದರಾಮಪ್ಪ ಅಸುನೀಗಿದ್ದಾರೆ.

ಕಡೂರು ತಾಲೂಕಿನ ಸಖರಾಯಪಟ್ಟಣ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿದ್ದರಾಮಪ್ಪ ಅವರು ಚಿಕ್ಕಮಗಳೂರು ನಗರದಲ್ಲಿ ವಾಸವಿದ್ದರು. ಬುಧವಾರ ಕರ್ತವ್ಯ ಮುಗಿಸಿ ಚಿಕ್ಕಮಗಳೂರು ನಗರಕ್ಕೆ ಹಿಂದಿರುಗುತ್ತಿದ್ದಾಗ ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ಬಳಿ ಕಾರು-ಬೈಕ್ ಮುಖಾಮುಖಿಯಾಗಿ ಡಿಕ್ಕಿಯಾಗಿದ್ದು, ಈ ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ.

ಮಾಹಿತಿ ಸಿಕ್ಕಿದೊಡನೆ ಸಖರಾಯಪಟ್ಟಣ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಿಲ್ಲೆಯ ವಿವಿಧ ಠಾಣೆಯಲ್ಲಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿ ಇಂದು ಎಎಸ್‍ಐ ಆಗಬೇಕಿದ್ದ ಸಿಬ್ಬಂದಿಯನ್ನು ಕಳೆದುಕೊಂಡಿದ್ದರಿಂದ ಅವರ ಇಲಾಖೆ ಸಹೋದ್ಯೋಗಿಗಳು, ಸಿಬ್ಬಂದಿ ಕಂಬನಿ ಮಿಡಿದಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಆಪರೇಷನ್ ಸಿಂಧೂರ' ವೇಳೆ ಬಳಸಲಾದ ಕ್ಷಿಪಣಿ ಖರೀದಿ: ಭಾರತ- ಫ್ರಾನ್ಸ್ ಮೆಗಾ ಡೀಲ್!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ಬುಡಕಟ್ಟು ಗುಂಪುಗಳ ನಡುವೆ ಸಂಘರ್ಷ ತೀವ್ರ; ಹಲವು ಮನೆಗಳಿಗೆ ಬೆಂಕಿ, ನಿಷೇಧಾಜ್ಞೆ ಜಾರಿ

ಟಿ-20 ವಿಶ್ವಕಪ್ 2026: ಭಾರತ ವಿರುದ್ಧದ ಪಂದ್ಯ ಬಹಿಷ್ಕರಿಸದಿರಲು ICC ಮುಂದೆ ಮೂರು ಬೇಡಿಕೆ ಇಟ್ಟ ಪಾಕಿಸ್ತಾನ!

'ಬಯಸಿದರೆ ಮೋದಿ ರಾಜಕೀಯ ಜೀವನ ನಾಶಗೊಳಿಸಬಲ್ಲೆ': ಟ್ರಂಪ್ ಹೇಳಿಕೆ ವೀಡಿಯೋ ಮತ್ತೆ ವೈರಲ್, ಚರ್ಚೆ ಶುರು

'ಖಾಲಿ ಟ್ರಂಕ್ ಸರ್ಕಾರ': ಮೆಟ್ರೋ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಂಸದ ತೇಜಸ್ವಿ ಸೂರ್ಯ ಪೊಲೀಸ್ ವಶಕ್ಕೆ

SCROLL FOR NEXT