ರಾಜ್ಯ

ಕೋವಿಡ್-19 ಲಸಿಕೆ ಪೂರೈಕೆಗೆ ರಾಜ್ಯದಲ್ಲಿ 4.7 ಲಕ್ಷ ಆರೋಗ್ಯ ಕಾರ್ಯಕರ್ತರು ದಾಖಲು 

Sumana Upadhyaya

ಬೆಂಗಳೂರು: ಕರ್ನಾಟಕದಲ್ಲಿ ಕೋವಿಡ್-19 ಲಸಿಕೆ ವಿತರಣೆಗೆ 4.7 ಲಕ್ಷಕ್ಕೂ ಅಧಿಕ ಆರೋಗ್ಯ ಸೇವೆ ಕಾರ್ಯಕರ್ತರು ದಾಖಲು ಮಾಡಿಕೊಂಡಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಲಸಿಕೆ ವಿಭಾಗದ ಉಪ ನಿರ್ದೇಶಕ ಡಾ ರಜನಿ ನಾಗೇಶ್ ರಾವ್, 2 ಲಕ್ಷದ 31 ಸಾವಿರದ 862 ಸರ್ಕಾರಿ ಮತ್ತು 2 ಲಕ್ಷದ 46 ಸಾವಿರದ 133 ಖಾಸಗಿ ವಲಯದ ಆರೋಗ್ಯ ಕಾರ್ಯಕರ್ತರು ದಾಖಲಾತಿ ಮಾಡಿಕೊಂಡಿದ್ದಾರೆ ಎಂದರು.

ಇನ್ನೂ ಹಲವರು ದಾಖಲಾತಿ ಮಾಡಿಕೊಳ್ಳಬೇಕಷ್ಟೆ.  ಸದ್ಯದಲ್ಲಿಯೇ ಅಂತಿಮ ಪಟ್ಟಿ ಅಪ್ ಡೇಟ್ ಮಾಡಬೇಕಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಅಂಗನವಾಡಿಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳ ಮೂಲಕ ಲಸಿಕೆಗಳನ್ನು ವಿತರಿಸಲಾಗುವುದು ಎಂದು ಡಾ ರಜನಿ ತಿಳಿಸಿದರು.

ಎಲ್ಲಿಂದ ಹೇಗೆ ಎಲ್ಲಿಗೆ ಲಸಿಕೆಗಳನ್ನು ಹೊತ್ತೊಯ್ಯಬೇಕು ಎಂಬುದಕ್ಕೆ ನಮಗೆ ಸ್ಪಷ್ಟ ಸೂಚನೆ ಸಿಗಬೇಕಿದೆ. ಆದರೂ ಸಾಮಾನ್ಯವಾಗಿ ನಿಗದಿತ ಲಸಿಕೆಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಅಂಗನವಾಡಿಗಳ ಮೂಲಕ ನೀಡಲಾಗುವುದು ಎಂದು ವೈದ್ಯರು ತಿಳಿಸಿದರು.

ಆರೋಗ್ಯ ವಲಯ ಕಾರ್ಯಕರ್ತರಿಗೆ ಇದಕ್ಕೆ ವೇತನ ನೀಡಲಾಗುತ್ತದೆಯೇ ಎಂದು ಕೇಳಿದ್ದಕ್ಕೆ ವರ್ಚುವಲ್ ಆಗಿ ತರಬೇತಿ ಇನ್ನೂ ಆರಂಭವಾಗಬೇಕಿದೆ ಎಂದರು.

ಈ ಮಧ್ಯೆ ಸುತ್ತೋಲೆ ಹೊರಡಿಸಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಪ ಕಾರ್ಯದರ್ಶಿ ವಿ ಸುಶೀಲಾ, ಕೋವಿಡ್-19 ವಾರ್ ರೂಂನ್ನು ಲಸಿಕೆ ನಿಯಂತ್ರಣ ಕೇಂದ್ರವನ್ನಾಗಿ ಬಳಸಲಾಗುವುದು ಎಂದರು.

SCROLL FOR NEXT