ರಾಜ್ಯ

ವಿದ್ಯುತ್, ಮೊಬೈಲ್ ನೆಟ್ ವರ್ಕ್ ಕೊಡಿ, ಇಲ್ಲಾಂದ್ರೆ ವೋಟು ಹಾಕಲ್ಲ: ಸೋಮವಾರಪೇಟೆ ಗ್ರಾಮಸ್ಥರ ಆಗ್ರಹ 

Sumana Upadhyaya

ಮಡಿಕೇರಿ: ಗ್ರಾಮಕ್ಕೆ ಮೊಬೈಲ್ ನೆಟ್ ವರ್ಕ್ ಸಂಪರ್ಕ ಸಿಗದಿರುವುದರಿಂದ ಮತ್ತು ವಿದ್ಯುತ್ ಸೌಲಭ್ಯ ಇಲ್ಲದಿರುವುದರಿಂದ ರೋಸಿ ಹೋಗಿರುವ ಮಡಿಕೇರಿಯ ಸೋಮವಾರ ಪೇಟೆ ತಾಲ್ಲೂಕಿನ ಕೂತಿ ಗ್ರಾಮದ ಮತದಾರರು ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯನ್ನು ಬಹಿಷ್ಕಾರ ಮಾಡಲು ನಿರ್ಧರಿಸಿದ್ದಾರೆ. ಗ್ರಾಮಸ್ಥರನ್ನು ಮನವೊಲಿಸಲು ಪ್ರಯತ್ನಿಸಿದ ಅಧಿಕಾರಿಗಳ ಪ್ರಯತ್ನ ವಿಫಲವಾಗಿದೆ.

ಸೋಮವಾರ ಪೇಟೆ ತಾಲ್ಲೂಕಿನ ಕೂತಿ ಗ್ರಾಮದಲ್ಲಿ ಸುಮಾರು 180 ಕುಟುಂಬಗಳಿದ್ದು ಟೊಲುರುಶೆಟ್ಟಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುತ್ತದೆ, ಇದು ಸೋಮವಾರ ಪೇಟೆ ಪಟ್ಟಣದಿಂದ 13 ಕಿಲೋ ಮೀಟರ್ ದೂರದಲ್ಲಿದೆ. ಜಿಲ್ಲಾಡಳಿತ ಗ್ರಾಮಕ್ಕೆ ಮೂಲಭೂತ ಸೌಕರ್ಯ ನೀಡಲು ಇದುವರೆಗೆ ಪ್ರಯತ್ನವನ್ನೇ ಮಾಡಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

ನಮ್ಮ ಮೊದಲ ಬೇಡಿಕೆ ಮೊಬೈಲ್ ಸಂಪರ್ಕ ಕಲ್ಪಿಸಬೇಕೆಂದು. ಆನ್ ಲೈನ್ ತರಗತಿಗಳು ಮಕ್ಕಳಿಗೆ ನಡೆಯುತ್ತಿರುತ್ತದೆ. ಆದರೆ ಮಕ್ಕಳು ಎತ್ತರದ ಬೆಟ್ಟದ ಸ್ಥಳಕ್ಕೆ ಹೋಗಿ ಬಸ್ ನಿಲ್ದಾಣದಲ್ಲೆಲ್ಲ ಕುಳಿತು ತರಗತಿಗಳನ್ನು ಕೇಳುವ ಪರಿಸ್ಥಿತಿ ಬಂದಿದೆ ಎಂದು ಗ್ರಾಮದ ಲಕ್ಮ್ಮೀಕಾಂತ ಎಂಬುವವರು ಹೇಳುತ್ತಾರೆ.

ಗ್ರಾಮಕ್ಕೆ 11 ಕೆವಿ ಸಂಪರ್ಕ ಸಿಗುತ್ತದೆ, ಆದರೆ ಮಳೆಗಾಲದಲ್ಲಿ ಅರಣ್ಯ ಮೂಲಕ ಹಾದುಹೋಗುವ ವಿದ್ಯುತ್ ಕಂಬದಿಂದಾಗಿ ಸಂಪರ್ಕ ಮುರಿದುಬಿದ್ದು ಒಂದು ತಿಂಗಳು ವಿದ್ಯುತ್ ಇರಲಿಲ್ಲ. ಮಳೆಗಾಲದಲ್ಲಿ ಈ ಸಮಸ್ಯೆ ಆಗಾಗ ಕಾಡುತ್ತಿರುತ್ತದೆ, ಅಧಿಕಾರಿಗಳು ಬಂದು ಸರಿಮಾಡುವ ಗೋಜಿಗೆ ಹೋಗುವುದಿಲ್ಲ, ನಾವು ಕಾಡಿನೊಳಗೆ ಮೂರು ಕಿಲೋ ಮೀಟರ್ ಹೋಗಿ ಸರಿಮಾಡಬೇಕಾಗುತ್ತದೆ ಎನ್ನುತ್ತಾರೆ ಲಕ್ಷ್ಮಿಕಾಂತ್.

ಈ ಗ್ರಾಮ ಮಡಿಕೇರಿ-ಜಾಲ್ಸೂರು ರಾಜ್ಯ ಹೆದ್ದಾರಿ 95 ರಲ್ಲಿದ್ದರೂ ರಸ್ತೆಗಳು ಸರಿಯಾಗಿಲ್ಲ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಪಡಿತರ ಮತ್ತು ಅಗತ್ಯ ವಸ್ತುಗಳ ಮೊಬೈಲ್ ಸರಬರಾಜನ್ನು ಶಕ್ತಗೊಳಿಸಿದೆ ಆದರೆ ಇದನ್ನು ಏಳು ತಿಂಗಳ ಹಿಂದೆ ಹಿಂತೆಗೆದುಕೊಳ್ಳಲಾಯಿತು, ಹಳ್ಳಿಗರು ಪಡಿತರವನ್ನು ಸಂಗ್ರಹಿಸಲು 6 ಕಿ.ಮೀ ಹೋಗಬೇಕು. ಚುನಾವಣೆಯನ್ನು ಬಹಿಷ್ಕರಿಸಲು ಗ್ರಾಮಸ್ಥರು ನಿರ್ಧರಿಸಿದ ಬೆನ್ನಲ್ಲೇ, ತಾಲ್ಲೂಕು ತಹಶೀಲ್ದಾರ್ ಮತ್ತು ಅಧಿಕಾರಿಗಳು ತಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು. ಆದಾಗ್ಯೂ, ಗ್ರಾಮಸ್ಥರು ತಮ್ಮ ನಿರ್ಧಾರದಲ್ಲಿ ಹಿಂಜರಿದಿಲ್ಲ . 

SCROLL FOR NEXT