ಹೈಕೋರ್ಟ್ 
ರಾಜ್ಯ

ಬೆಂಗಳೂರು ನಗರದ ರಸ್ತೆ ಮತ್ತು ಪಾದಚಾರಿ ಮಾರ್ಗಗಳ ಸ್ಥಿತಿಗತಿ ಕೋರ್ಟ್ ಆಯುಕ್ತರುಗಳಿಂದ ಪರಿಶೀಲನೆ!

ನಗರದಲ್ಲಿ ಈಗ ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳ ಪರಿಸ್ಥಿತಿ ಬಗ್ಗೆ ತಿಳಿಯಲು ಕೋರ್ಟ್ ಆಯುಕ್ತರನ್ನು ಹೈಕೋರ್ಟ್ ನೇಮಕ ಮಾಡಿದೆ. 

ಬೆಂಗಳೂರು: ನಗರದಲ್ಲಿ ಈಗ ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳ ಪರಿಸ್ಥಿತಿ ಬಗ್ಗೆ ತಿಳಿಯಲು ಕೋರ್ಟ್ ಆಯುಕ್ತರನ್ನು ಹೈಕೋರ್ಟ್ ನೇಮಕ ಮಾಡಿದೆ. 

ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಮತ್ತು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ನೇತೃತ್ವದ ವಿಭಾಗೀಯ ಪೀಠ ಆದೇಶವನ್ನು ಹೊರಡಿಸಿದ್ದಾರೆ. ವಿಜಯನ್ ಮೆನನ್ ಹಾಗೂ ಇತರ ಮೂವರು 2015ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ವಿಭಾಗೀಯ ಪೀಠ ಆದೇಶ ಹೊರಡಿಸಿದೆ. 

ರಸ್ತೆಗಳ ದುರಸ್ತಿ ಮತ್ತು ಗುಂಡಿಗಳನ್ನು ಮುಚ್ಚುವಲ್ಲಿ ಬಿಬಿಎಂಪಿ ವಿಫಲವಾಗಿದೆ, ಜನರ ಕಷ್ಟಗಳನ್ನು ಆಲಿಸುತ್ತಿಲ್ಲ ಎಂದು ಆರೋಪಿಸಿ ಅರ್ಜಿ ಸಲ್ಲಿಸಲಾಗಿತ್ತು. ಕಾಲಕಾಲಕ್ಕೆ ವಿವಿಧ ಆದೇಶಗಳನ್ನು ಹೊರಡಿಸುವುದು ಮಾತ್ರವಲ್ಲದೆ ಹಲವು ಮಧ್ಯಂತರ ಆದೇಶಗಳು ಮತ್ತು ಬಿಬಿಎಂಪಿಯ ಕರ್ತವ್ಯಗಳನ್ನು ನೆನಪಿಸುತ್ತಾ ಬರಲಾಗಿದೆ. ಉತ್ತಮ ರಸ್ತೆ ಮತ್ತು ಪಾದಚಾರಿ ಮಾರ್ಗ ಹೊಂದುವುದು ನಾಗರಿಕರ ಮೂಲಭೂತ ಹಕ್ಕಾಗಿರುತ್ತದೆ. ಈಗ ರಸ್ತೆಗಳ ಪರಿಸ್ಥಿತಿ ಬಗ್ಗೆ ತಪಾಸಣೆ ಮಾಡಲು ಏಜೆನ್ಸಿಯನ್ನು ನೇಮಕ ಮಾಡಲು ಬಿಬಿಎಂಪಿಗೆ ಸಾಧ್ಯವಾಗಿಲ್ಲ ಎಂದು ನ್ಯಾಯಪೀಠ ಹೇಳಿದೆ. 

ಭಾರತೀಯ ವಿಜ್ಞಾನ ಸಂಸ್ಥೆ ಐಐಎಸ್ಸಿ 70 ರಸ್ತೆಗಳ ತಪಾಸಣೆಗೆ 5.94 ಕೋಟಿ ರೂಪಾಯಿ ಕೇಳಿದ್ದು, ಅದಕ್ಕಾಗಿ ರಸ್ತೆಗಳ ದುರಸ್ತಿಗೆ ನಗರ ಪಾಲಿಕೆ 70 ಲಕ್ಷ ರೂಪಾಯಿ ಖರ್ಚು ಮಾಡಿದೆ ಎಂದು ಬಿಬಿಎಂಪಿ ಪರ ವಕೀಲ ಕೆ ಎನ್ ಪುಟ್ಟೇಗೌಡ ತಿಳಿಸಿದರು.

ಸ್ವಯಂಸೇವಕರ ಸಮಿತಿ ಮತ್ತು ವಕೀಲರ ಸಮಿತಿಯನ್ನು ರಚಿಸಲು ನಾವು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಕೆಎಸ್‌ಎಲ್‌ಎಸ್‌ಎ) ಕಾರ್ಯದರ್ಶಿ ಮತ್ತು ಬೆಂಗಳೂರು ನಗರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿಯನ್ನು ನಿರ್ದೇಶಿಸುತ್ತೇವೆ ಎಂದು ನ್ಯಾಯಪೀಠ ಹೇಳಿದೆ. ಈ ಎರಡು ತಂಡಗಳು ಬಿಬಿಎಂಪಿ ವ್ಯಾಪ್ತಿಯಲ್ಲಿ ವಿವಿಧ ಸಾರ್ವಜನಿಕ ಪಾದಚಾರಿ ಮಾರ್ಗಗಳನ್ನು ಗುರುತಿಸಬೇಕು ಎಂದು ಹೇಳಿದೆ. ಅವರ ಪ್ರಸ್ತುತ ಸ್ಥಿತಿಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಗೊತ್ತುಪಡಿಸಿದ ಸಾರ್ವಜನಿಕ ಬೀದಿಗಳಿಗೆ ಭೇಟಿ ನೀಡುವಂತೆ ಕೋರಬೇಕು ಎಂದು ನ್ಯಾಯಪೀಠ ಆದೇಶಿಸಿದೆ.

ಪ್ರಾಜೆಕ್ಟ್ ಶಿವಾಜಿನಗರ: ಈ ಪ್ರದೇಶದಲ್ಲಿ ಸರಿಯಾದ ಕಸ ನಿರ್ವಹಣೆ ಮಾಡಲು ಬಿಬಿಎಂಪಿ ನಿನ್ನೆ ಪ್ರಾಜೆಕ್ಟ್ ಶಿವಾಜಿನಗರವನ್ನು ಪ್ರಾರಂಭಿಸಿದೆ.ಕಸವನ್ನು ಬೇರ್ಪಡಿಸುವುದು, ಸರಿಯಾದ ತ್ಯಾಜ್ಯ ವಿಲೇವಾರಿ, ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಿಸುವುದು ಮತ್ತು ಇತರ ನಾಗರಿಕ ವ್ಯವಹಾರಗಳ ಬಗ್ಗೆ ನಿವಾಸಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನು ಈ ಯೋಜನೆಯು ಹೊಂದಿದೆ. ಇದು ನೆರೆಹೊರೆಯ ಜನರಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುವ ಗುರಿಯನ್ನು ಹೊಂದಿದೆ. ಕಾರ್ಯಕ್ರಮದಡಿಯಲ್ಲಿ ಎಲ್ಲಾ ವಾರ್ಡ್‌ಗಳಲ್ಲಿ ತ್ಯಾಜ್ಯದ ನಿರ್ವಹಣೆ, ಸರಿಯಾಗಿ ಮನೆ-ಮನೆಯಿಂದ ಕಸ ಸಂಗ್ರಹ, ಸ್ವಚ್ಛತೆ ಮತ್ತು ಸಮಯಕ್ಕೆ ಸರಿಯಾಗಿ ತ್ಯಾಜ್ಯ ಸಂಗ್ರಹಣೆಗಾಗಿ ಬ್ಲಾಕ್ ಸಮಿತಿಗಳನ್ನು ಪ್ರಾರಂಭಿಸಲಾಗುವುದು ಎಂದು ಶಿವಾಜಿನಗರ ಕ್ಷೇತ್ರದ ಶಾಸಕ ರಿಜ್ವಾನ್ ಆರ್ಷದ್ ತಿಳಿಸಿದರು. 

ಶಿವಾಜಿನಗರ ಕ್ಷೇತ್ರದಲ್ಲಿ ಕಸದ ಸರಿಯಾದ ವಿಲೇವಾರಿ ಯಾವಾಗಲೂ ಸಮಸ್ಯೆಯಾಗಿದೆ. ಸಮಸ್ಯೆಯನ್ನು ಪರಿಹರಿಸಲು, ನಾನು ಕ್ಷೇತ್ರದ ವಿವಿಧ ತಜ್ಞರನ್ನು ಸಂಪರ್ಕಿಸಿ ಮತ್ತು ಇತರ ನಗರಗಳ ಮಾದರಿಗಳನ್ನು ಅಧ್ಯಯನ ಮಾಡಿ ಇದನ್ನು ತರಲಾಗಿದೆ. ಕಸ ಸಂಗ್ರಹ ವ್ಯವಸ್ಥೆಯನ್ನು ಸರಿಹೊಂದಿಸುವಲ್ಲಿ ಯಶಸ್ವಿಯಾಗಿದೆ. ಈಗ ಪ್ರಾಜೆಕ್ಟ್ ಶಿವಾಜಿನಗರದೊಂದಿಗೆ, ಶಿವಾಜಿನಗರ ಕಸ ಮುಕ್ತ ಕ್ಷೇತ್ರವಾಗಬೇಕಿದೆ. ಯೋಜನೆಯ ವೆಚ್ಚವನ್ನು ಲೋಕೋಪಕಾರಿ ವೇದಿಕೆಯಾದ ರಿಜ್ವಾನ್ ಅರ್ಷದ್ ಫೌಂಡೇಶನ್ ಭರಿಸಲಿದೆ. ಅಗ್ಲಿ ಇಂಡಿಯನ್ಸ್ ಎಂಬ ಎನ್‌ಜಿಒ ಇದರ ಕೆಲಸದ ಉಸ್ತುವಾರಿ ವಹಿಸಿಕೊಂಡಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT