ರಾಜ್ಯ

ಭೀಕರ ದೃಶ್ಯ: ನಿಂತಿದ್ದ ಟ್ರ್ಯಾಕ್ಟರ್ ಗೆ ಬೈಕ್ ಡಿಕ್ಕಿ; ಬೈಕ್ ಸವಾರ ದುರ್ಮರಣ, ಸಿಸಿಟಿವಿಯಲ್ಲಿ ಸೆರೆ!

Vishwanath S

ಹಾವೇರಿ: ಬೈಕ್ ಸವಾರನೊಬ್ಬ ನಿಂತಿದ್ದ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದಿದ್ದು ಅಪಘಾತದಲ್ಲಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. 

ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದ ಗರಡಿಮನಿ ಕ್ರಾಸ್ ಬಳಿ ಘಟನೆ ನಡೆದಿದೆ. ಇಂದು ಮಧ್ಯಾಹ್ನ ಅಪಘಾತ ಸಂಭವಿಸಿದೆ.  ನಿಂತಿದ್ದ ಟ್ರ್ಯಾಕ್ಟರ್ ಗೆ ಬೈಕ್ ಡಿಕ್ಕಿ ಹೊಡೆದಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. 

ಮೃತ ಬೈಕ್ ಸವಾರನನ್ನು ಕಾರವಾರ ಜಿಲ್ಲೆ ಶಿರಸಿ ತಾಲೂಕಿನ ಅಂಡಗಿ ಗ್ರಾಮದ ನಿವಾಸಿ 22 ವರ್ಷ ಗಣಪತಿ ಲಮಾಣಿ ಎಂದು ಗುರುತಿಸಲಾಗಿದೆ. 

SCROLL FOR NEXT