ರಾಜ್ಯ

ಶಾಲಾ ಶುಲ್ಕದ ಬಗ್ಗೆ ಸ್ಪಷ್ಟತೆಗೆ ಆಗ್ರಹ: ಬೆಂಗಳೂರಿನಲ್ಲಿ ಪೋಷಕರ ಬೃಹತ್ ಪ್ರತಿಭಟನೆ

Raghavendra Adiga

ಬೆಂಗಳೂರು: ಬೆಂಗಳೂರಿನಾದ್ಯಂತ 400 ಕ್ಕೂ ಹೆಚ್ಚು ಪೋಷಕರು ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಭಾನುವಾರ ಮಧ್ಯಾಹ್ನದವರೆಗೆ ಸಿಐಎಸ್‌ಸಿಇ ಮತ್ತು ಎಸ್‌ಎಸ್‌ಎಲ್‌ಸಿ ಶಾಲೆಗಳ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ಶುಲ್ಕದ ವಿಷಯವಾಗಿ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ಈ ವೇಳೆ ಅವರು ಖಾಸಗಿ ಶಾಲೆಗಳ ಶುಲ್ಕ ನೀತಿಗೆ ಕಡಿವಾಣ ಹಾಕದ ಸರ್ಕಾರದ ವಿರುದ್ಧ ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ. 

ಖಾಸಗಿ ಶಾಲೆಗಳು ತಾವು ಖರ್ಚುವೆಚ್ಚಗಳಲ್ಲಿ ಪಾರದರ್ಶಕತೆ ತೋರಿಸಬೇಕು, ಕನಿಷ್ಟ ಎರಡು ವರ್ಷ ಈ ಪಾರದರ್ಶಕತೆ ನೀಡಬೇಕೆಂದು ಅವರು ಒತ್ತಾಯಿಸುತ್ತಿದ್ದಾರೆ. "ಹಲವಾರು ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳಿಗೆ ಪ್ರವೇಶ ನಿರಾಕರಿಸಲಾಗಿದೆ, ಶುಲ್ಕ ಮಾತ್ರ ಪೂರ್ಣ ಪ್ರಮಾಣದಲ್ಲಿ ಪಡೆದುಕೊಳ್ಳಲಾಗುತ್ತಿದೆ" ಓರ್ವ ಪೋಷಕರಾದ ಶಕೀಲ್ 'ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌'ಗೆ ತಿಳಿಸಿದರು.

ಆರ್ಥಿಕವಾಗಿ ಕಷ್ಟದಲ್ಲಿರುವ ಈ ಸಮಯದಲ್ಲಿ ಶುಲ್ಕದ ಸಮಸ್ಯೆ ಬೃಹತ್ ಸಮಸ್ಯೆಯಾಗಿದೆ. ಒಂದು ತಿಂಗಳಲ್ಲಿ ಎರಡನೇ ಬಾರಿಗೆ ಪೋಷಕರು ಇದಕ್ಕೆ ಪರಿಹಾರ ನಿಡುವಂತೆ ಶಿಕ್ಷಣ ಸಚಿವರನ್ನು ಸಂಪರ್ಕಿಸುತ್ತಿದ್ದಾರೆ.

ನವೆಂಬರ್ 17 ರಂದು ಸಿಎಂ, ಶಿಕ್ಷಣ ಸಚಿವರಿಗೆ, ನವೆಂಬರ್ 27 ರಂದು ಸಾರ್ವಜನಿಕ ಬೋಧನಾ ಆಯುಕ್ತರಿಗೆ ಬರೆದ ಪತ್ರಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಪಾಲಕರು ಈ ಹಿಂದೆ ಸರ್ಕಾರ ಗಮನಿಸಬೇಕಾದ ಅಂಶಗಳ ಬಗೆಗೆ ಒಂದು ಪಟ್ಟಿ ಮಾಡಿದ್ದರು. ಆದರೆ ಪರಿಹಾರ ದೊರಕಿಸುವಲ್ಲಿ ಸರ್ಕಾರ ಮುಂದಾಗಿಲ್ಲ.  ಇದೀಗ ಪೋಷಕರಿಗೆ ಈಗ ಬೋಧನಾ ಶುಲ್ಕದ ಬಗ್ಗೆ ಸ್ಪಷ್ಟತೆ ಬೇಕಿದೆ ಎಂದು ಶಕೀಲ್ ಹೇಳಿದರು.

"ಈ ಮೊದಲು ಶಾಲೆಗಳಿಗೆ ಬೋಧನಾ ಶುಲ್ಕವನ್ನು ಮಾತ್ರ ವಿಧಿಸಲು ಕೇಳಲಾಗಿತ್ತು. ಈಗ, ಒಂದು ಅವಧಿಗೆ ಶುಲ್ಕ ವಸೂಲಿ ಮಾಡುವಂತೆ ಸರ್ಕಾರ ಶಾಲೆಗಳನ್ನು ಕೇಳಿದೆ, ಆದರೆ ಇದರ ಅರ್ಥ ಏನು? 10ರಿಂದ 30 ಶೇ. ಶಿಕ್ಷಕರು ಮತ್ತು ಸಿಬ್ಬಂದಿಗಳನ್ನು ವಜಾ ಮಾಡಲಾಗಿದೆ. ಶೇಕಡಾ 50 ರಷ್ಟು ವೇತನ ಕಡಿತವಾಗಿದೆ, "

ಶಾಲೆಗಳು ಆನ್‌ಲೈನ್ ತರಗತಿಗಳನ್ನು ಮಾತ್ರ ನಡೆಸುತ್ತಿರುವುದರಿಂದ ಶುಲ್ಕವನ್ನು ಶೇಕಡಾ 25 ರಷ್ಟು ಕಡಿಮೆ ಮಾಡಬೇಕು. . ಆನ್‌ಲೈನ್ ತರಗತಿಗಳನ್ನು ನಿರ್ಬಂಧಿಸುವ ಖಾಸಗಿ ಕಾರ್ಪೊರೇಟ್ ಶಾಲೆಗಳ ವಿರುದ್ಧ ಪೋಷಕರು ಕಾನೂನು ಕ್ರಮ ಜರುಗಿಸಬೇಕೆಂದು ಶಕೀಲ್ ಒತ್ತಾಯಿಸಿದ್ದಾರೆ. 

SCROLL FOR NEXT