ರಾಜ್ಯ

ಉತ್ತರ ಕನ್ನಡ: ಕ್ರಿಸ್ಮಸ್, ನ್ಯೂ ಇಯರ್ ಗಾಗಿ ದಾಂಡೇಲಿ, ಜೋಯಿಡಾ ಹೋಮ್ ಸ್ಟೇಗಳು ಈಗಾಗಲೆ ಭರ್ತಿ!

Shilpa D

ಹುಬ್ಬಳ್ಳಿ: ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ನಿಯಮವನ್ನು ವಾಪಸ್ ತೆಗೆದುಕೊಂಡ ಹಿನ್ನೆಲೆಯಲ್ಲಿ ಕ್ರಿಸ್ಮಸ್ ಮತ್ತು ನ್ಯೂ ಇಯರ್ ಗಾಗಿ ಹಲವು ಹೋಮ್ ಸ್ಟೇ ಮತ್ತು ರೆಸಾರ್ಟ್ ಗಳು ಭರ್ತಿಯಾಗಿವೆ. ಲಾಕ್ ಡೌನ್ ನಂತರ ಇದೇ ಮೊದಲ ಬಾರಿಗೆ ರೆಸಾರ್ಟ್, ಹೋಮ್ ಸ್ಟೇ ಮತ್ತು ಸರ್ಕಾರಿ ಸ್ವಾಮ್ಯದ ವಸತಿ ಗೃಹಗಳು ಬುಕ್ ಆಗಿವೆ.

ಗೋಕರ್ಣದಲ್ಲಿರುವ ಬಹುತೇಕ ರೆಸಾರ್ಟ್ ಮತ್ತು ಹೋಮ್ ಸ್ಟೇಗಳು ಡಿಸೆಂಬರ್ 20 ರಿಂದ ಜನವರಿ 1ರವರೆಗೂ ಬುಕ್ ಆಗಿವೆ. ಇದೇ ರೀತಿ ದಾಂಡೇಲಿ ಮತ್ತು ಜೋಯಿಡಾದಲ್ಲಿನ   ಹೋಮ್ ಸ್ಟೇ ಮತ್ತು ರೆಸಾರ್ಟ್ ಗಳು ಭರ್ತಿಯಾಗಿವೆ, ಜೋಯಿಡಾ ಮತ್ತು ದಾಂಡೇಲಿಯಲ್ಲಿ ಸುಮಾರು 200 ಹೋಮ್ ಸ್ಟೇ ಮತ್ತು ರೆಸಾರ್ಟ್ ಗಳಿವೆ.

ಈ ರೆಸಾರ್ಟ್ ಮತ್ತು ಹೋಮ್ ಸ್ಟೇಗಳಿಗೆ ಕರ್ನಾಟಕದ ವಿವಿಧ ಭಾಗ ಸೇರಿದಂತೆ ಹಲವು ರಾಜ್ಯಗಳ ಪ್ರವಾಸಿಗರು ಆಗಮಿಸಲಿದ್ದಾರೆ. ಮಹಾರಾಷ್ಟ್ರದಿಂದ ಹೆಚ್ಚಿನ ಪ್ರವಾಸಿಗರು ಬರುವ ನಿರೀಕ್ಷೆಯಿದೆ.ಬೆಳಗಾವಿ, ಹುಬ್ಬಳ್ಳಿ, ಮತ್ತು ಧಾರವಾಡದಲ್ಲಿರುವ ಹೋಮ್ ಸ್ಟೇಗಳು ಕ್ರಿಸ್ಮಸ್ ಮತ್ತು ಹೊಸವರ್ಷಕ್ಕಾಗಿ ಬುಕ್ ಆಗಿವೆ.

ನವೆಂಬರ್ ನಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ, ಕೋವಿಡ್ 19 ಶಿಷ್ಟಾಚಾರವನ್ನು ತಾವು ಪಾಲನೆ ಮಾಡುತ್ತಿರುವುದಾಗಿ ಹೋಮ್ ಸ್ಟೇ ಮಾಲೀಕರು ತಿಳಿಸಿದ್ದಾರೆ. ಕೊರೋನಾ ಇನ್ನೂ ಪೂರ್ತಿಯಾಗಿ ನಿವಾರಣೆಯಾಗದ ಕಾರಣ, ಮಹಾರಾಷ್ಟ್ರ ಮತ್ತು ಕರ್ನಾಟಕದ ಹಲವು ಕುಟುಂಬಗಳು ದಾಂಡೇಲಿಯಲ್ಲಿ ಹೋಮ್ ಸ್ಟೇ ಕಡೆ ಆಸಕ್ತಿ ತೋರಿಸಿದ್ದಾರೆ. 

ಇದೊಂದು ಉತ್ತಮ ಬೆಳವಣಿಗೆಯಾಗಿದ್ದು, ಯಾವುದೇ ಒಳಾಂಗಣ ಪಾರ್ಟಿ ಮತ್ತು ಕಾರ್ಯಕ್ರಮಗಳಿಗೆ ನಿರ್ಭಂಧ ಹೇರಲಾಗಿದೆ. ಪಾರ್ಟಿಗಳು ಮತ್ತು ಜನಸಂದಣಿ ನಡೆಯುವ ದೊಡ್ಡ ಸೌಲಭ್ಯಗಳ ಬಗ್ಗೆ ಸ್ಥಳೀಯ ಆಡಳಿತವು ಗಮನ ಹರಿಸುವ ನಿರೀಕ್ಷೆಯಿದೆ ಎಂದು ದಾಂಡೇಲಿಯ ಮತ್ತೊಂದು ಹೋಂಸ್ಟೇ ಆಪರೇಟರ್ ಸಂತೋಷ್ ಕುಮಾರ್ ಹೇಳಿದರು.
 

SCROLL FOR NEXT