ರಾಜ್ಯ

ಮೈಸೂರು-ಹೈದರಾಬಾದ್‌ ನಡುವೆ ಇಂಡಿಗೋ ಏರ್‌ಲೈನ್ಸ್‌ ವಿಮಾನ ಸೇವೆ ಆರಂಭ

Srinivasamurthy VN

ಮೈಸೂರು: ಇಂಡಿಗೋ ಏರ್‌ಲೈನ್ಸ್‌ ಸೋಮವಾರದಿಂದ ಅರಮನೆ ನಗರಿ ಮೈಸೂರು ಹಾಗೂ ಮುತ್ತಿನ ನಗರಿ ಹೈದರಾಬಾದ್‌ ನಡುವೆ ಹೊಸ ವಿಮಾನ ಸೇವೆ ಆರಂಭಿಸಿದೆ.

ಈ ವಿಮಾನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ರಾತ್ರಿ 10.50ಕ್ಕೆ ಹೊರಟು ಮಧ್ಯರಾತ್ರಿ 12.50ಕ್ಕೆ ಹೈದರಾಬಾದ್‌ಗೆ ತಲುಪಿತು. ನಂತರ ಬೆಳಿಗ್ಗೆ 8.35 ಕ್ಕೆ ಹೈದರಾಬಾದ್‌ನಿಂದ ಹೊರಟು 10.25 ಕ್ಕೆ ಮೈಸೂರು ತಲುಪಲಿದೆ ಎಂದು ವಿಮಾನಯಾನ ಸಚಿವಾಲಯದ ಪ್ರಕಟಣೆ ತಿಳಿಸಿದೆ.
 

SCROLL FOR NEXT