ರಾಜ್ಯ

ಎಪಿಎಂಸಿ ಸೆಸ್ ಪ್ರಮಾಣ ಕಡಿತ, ವಿವಿಧ ನಿಯಮಗಳಿಗೆ ಸಚಿವ ಸಂಪುಟ ಅನುಮೋದನೆ

Srinivasamurthy VN

ಬೆಂಗಳೂರು: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ(ಎಪಿಎಂಸಿ) ನೀಡುತ್ತಿದ್ದ ಸೆಸ್ ಪ್ರಮಾಣವನ್ನು ಶೇ.೧ರಿಂದ ಶೇ.೦.೬೦ಕ್ಕೆ ಇಳಿಕೆ ಮಾಡಿ ಸಚಿವ ಸಂಪುಟ ಸಭೆಯು ಮಹತ್ವದ ತೀರ್ಮಾನವನ್ನು ಕೈಗೊಂಡಿದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.ಈ ಬಗ್ಗೆ ಸುದ್ದಿಗಾರರಿಗೆ ವಿವರಣೆ ನೀಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ವರ್ತಕರಿಗೆ ನೀಡುವ ಶೇ.೨ರಷ್ಟು ಲಾಭಾಂಶದಲ್ಲಿ ಶೇ.೧.೫ರಷ್ಟು ಇದ್ದ ಸೆಸ್ ಅ ನ್ನು  ಶೇ.೦.೩೫ರಷ್ಟು ಇಳಿಕೆ ಮಾಡಿ ಈ ಹಿಂದೆ ಆದೇಶಿಸಲಾಗಿತ್ತು. ನಂತರ ಎಪಿಎಂಸಿಗಳಿಗೆ ನಷ್ಟವಾಗಲಿದೆ ಎಂದು ಶೇ.೧ರಷ್ಟಕ್ಕೆ ಹೆಚ್ಚಳ ಮಾಡಲಾಯಿತು. ಆದರೆ, ವರ್ತಕರಿಗೆ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಶೇ.೧ರಿಂದಶೇ.೦. ೬೦ಕ್ಕೆ ಇಳಿಕೆ  ಮಾಡಿ ನಿರ್ಧಾರ ಕೈಗೊಳ್ಳಲಾಗಿದೆ. ಇದೀಗ ವರ್ತಕರಿಗೆ ಶೇ.೧.೪೦ರಷ್ಟು ಲಭಿಸಿದರೆ,ಎಪಿಎಂಸಿಗಳಿಗೆ ನೀಡುವ ಸೆಸ್ ಪ್ರಮಾಣವು ಶೇ.೦.೬೦ರಷ್ಟಾಗಿದೆ ಎಂದು ಹೇಳಿದರು.

ಎಪಿಎಂಸಿಯಲ್ಲಿ ವಹಿವಾಟು ನಡೆಸಿದರೆ ೬೦ ಪೈಸೆ ಮಾರುಕಟ್ಟೆ ಶುಲ್ಕ ಸಿಗಲಿದೆ.ಎಂಪಿಎಂಸಿ ಆವರಣದಲ್ಲಿ ಹೆಚ್ಚಿನ ತೆರಿಗೆ ವಿಧಿಸಲಾಗುತ್ತಿದ್ದನ್ನು ಕಡಿತಗೊಳಿಸಬೇಕು ಎಂಬ ವರ್ತಕರು ಮತ್ತು ಗ್ರಾಹಕರು ಒತ್ತಾಯಿಸಿದ ಹಿನ್ನೆಲೆಯಲ್ಲಿ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಇನ್ನು,ಎಪಿಎಂಸಿ ಆವ ರಣದ  ಹೊರಗಡೆಯೂ ತೆರಿಗೆ ಕಡಿತಗೊಳಿಸುವ ಬಗ್ಗೆ ಸಚಿವ ಸಂಪುಟ ಸಭೆಯ ಚರ್ಚೆಯ ಪಟ್ಟಿಯಲ್ಲಿ ವಿಷಯ ಪ್ರಸ್ತಾಪವಾಗಿತ್ತು.ಆದರೆ,ಕಾರಣಾಂತರಗ ಳಿಂದ ಈ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ.ಕೇಂದ್ರ ಸರ್ಕಾರದಿಂದ ಶೀಘ್ರದಲ್ಲಿಯೇ ಈ ಬಗ್ಗೆ ಮಾರ್ಗಸೂಚಿ ಬರುವ ಸಾಧ್ಯತೆ ಇದ್ದು, ನಂತರ ರಾಜ್ಯ ಸರ್ಕಾ ರ ಕ್ರಮ  ಜರುಗಿಸಲಿದೆ ಎಂದರು.

'ಬ್ಯಾಂಕಿಂಗ್‌ ಮತ್ತು ಇತರ ಹಣಕಾಸು ಸಂಸ್ಥೆಗಳಿಗೆ ನಗದು ಸಾಗಿಸುವಾಗ ಅನುಸರಿಸಬೇಕಾದ ಭದ್ರತಾ ವ್ಯವಸ್ಥೆಯ ಕುರಿತ‌ ನಿಯಮಗಳಿಗೆ ತಿದ್ದುಪಡಿ ತರುವ ಪ್ರಸ್ತಾವಕ್ಕೆ ಸಂಪುಟ‌ ಸಭೆ ಒಪ್ಪಿಗೆ ನೀಡಿದೆ. ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಯ ಪ್ರಕಾರ ತಿದ್ದುಪಡಿ ಮಾಡಲಾಗುತ್ತಿದೆ' ಎಂದರು.

SCROLL FOR NEXT