ರಾಜ್ಯ

ಗ್ರಾ.ಪಂ ಚುನಾವಣೆ ಮತ ಎಣಿಕೆ ಪ್ರಗತಿಯಲ್ಲಿ: ಇತ್ತೀಚಿನ ಟ್ರೆಂಡ್, ಮಾಹಿತಿಗಳು ಹೀಗಿವೆ...

Srinivas Rao BV

ಬೆಂಗಳೂರು: ರಾಜ್ಯದ 5,728 ಗ್ರಾಮ ಪಂಚಾಯಿತಿಗಳ 82,616 ಸ್ಥಾನಗಳಿಗೆ ನಡೆದಿದ್ದ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದೆ. 

ಸಂಜೆ ಅಥವಾ ರಾತ್ರಿಯ ವೇಳೆಗೆ ಅಂತಿಮ ಫಲಿತಾಂಶ ಸಿಗುವ ನಿರೀಕ್ಷೆ ಇದೆ.

ಮತ ಎಣಿಕೆ ವೇಳೆ ಕುಸಿದು ಬಿದ್ದು ಹೃದಯಾಘಾತದಿಂದ ಚುನಾವಣಾಧಿಕಾರಿ ಸಾವು

ಮತ ಎಣಿಕೆ ವೇಳೆ ಕೆಲವು ಅವಘಡಗಳೂ ವರದಿಯಾಗಿದ್ದು, ಮತ ಎಣಿಕೆ ಕಾರ್ಯದಲ್ಲಿ ನಿರತರಾಗಿದ್ದ ಮೈಸೂರಿನಲ್ಲಿ ಚುನಾವಣಾಧಿಕಾರಿಯಾಗಿದ್ದ, ಪಿಡಬ್ಲ್ಯುಡಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬೋರೇಗೌಡ ಕುಸಿದು ಬಿದ್ದಿದ್ದು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದಾರೆ. 

ಮತ ಎಣಿಕೆ ಕೇಂದ್ರಕ್ಕೆ ಚಾಕು ತಂದಿದ್ದ ವ್ಯಕ್ತಿ ಪೊಲೀಸ್ ವಶಕ್ಕೆ 
ಮತ ಎಣಿಕೆ ಕೇಂದ್ರಕ್ಕೆ ಚಾಕು ತಂದಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ವರದಿಯಾಗಿದೆ. ಅಭ್ಯರ್ಥಿಯ ಪರ ಏಜೆಂಟ್ ಆಗಿ ಶಹಾಪುರ ನಗರದ ಪದವಿ ಕಾಲೇಜು ಆವರಣದಲ್ಲಿ ನಡೆಯುತ್ತಿದ್ದ ಮತ ಎಣಿಕೆ ಕೇಂದ್ರಕ್ಕೆ ಅಷ್ಫಾಕ್ ಎಂಬಾತಚಾಕು ಹಿಡಿದು ಬಂದಿದ್ದ, ಈತ ಪೊಲೀಸ್ ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾನೆ.

ಬೆಳಗಾವಿಯಲ್ಲಿ ಮತ ಎಣಿಕೆ ಕೇಂದ್ರದ ಬಳಿ ಮಾಟ, ಮಂತ್ರ! 

ಮತದಾನಕ್ಕೂ ಮುನ್ನ ವಾಮಾಚಾರ, ಮಾಟ ಮಂತ್ರಗಳ ಬಗ್ಗೆ ಈ ಹಿಂದೆ ವರದಿ ಪ್ರಕಟವಾಗಿತ್ತು. ಆದರೆ ಈಗ ಮತ ಎಣಿಕೆ ದಿನದಂದು ಮತ ಎಣಿಕೆ ಕೇಂದ್ರದ ಎದುರು ವಾಮಾಚಾರ ನಡೆದಿರುವ ಘಟನೆ ಬೆಳಗಾವಿಯಲ್ಲಿ ವರದಿಯಾಗಿದೆ. 

ಚಿಕ್ಕೋಡಿಯಲ್ಲಿ ಈ ಘಟನೆ ನಡೆದಿದ್ದು, ಸಣ್ಣ ಪೇಪರ್ ತುಂಡು ಹಾಗೂ ವಾಮಾಚಾರಕ್ಕೆ ಬಳಕೆ ಮಾಡುವ ಪದಾರ್ಥಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

SCROLL FOR NEXT