ರಾಜ್ಯ

ಸಿಲಿಕಾನ್ ಸಿಟಿಗೂ ಕಾಲಿಟ್ಟ ಕೊರೋನಾ ಮಹಾಮಾರಿ? ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಗೆ 10 ಶಂಕಿತ ರೋಗಿಗಳು ದಾಖಲು 

ಕೊರೋನಾವೈರಸ್ ಇದೀಗ ಜಗತ್ತಿನ ಜನರಲ್ಲಿ ಮರಣ ಭಯವನ್ನು ಹುಟ್ಟಿಸಿದೆ ವಿಶ್ವ ಆರೋಗ್ಯ ಸಂಸ್ಥೆ ಕೂಡ ಇದಾಗಲೇ ಈ ಮಾರಕ ರೋಗದ ಕಾರಣ ಜಾಗತಿಕ ಎಮರ್ಜೆನ್ಸಿ ಘೋಷಿಸಿದೆ. ಆದರೆ ಇದೀಗ ಕನ್ನಡಿಗರು ಆಘಾತಕ್ಕೊಳಗಾಗಬೇಕಾಗಿರುವ ಇನ್ನೊಂದು ಆತಂಕದ ಸುದ್ದಿ ಹೊರಬಿದ್ದಿದೆ, ಅದೆಂದರೆ ಒಟ್ಟೂ 10 ಕೊರೋನಾ ಶಂಕಿತರು ಬೆಂಗಳೂರಿನ ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಚೆಸ್ಟ್ ಡಿಸೀಸಸ್ ಗೆ

ಬೆಂಗಳೂರು: ಕೊರೋನಾವೈರಸ್ ಇದೀಗ ಜಗತ್ತಿನ ಜನರಲ್ಲಿ ಮರಣ ಭಯವನ್ನು ಹುಟ್ಟಿಸಿದೆ ವಿಶ್ವ ಆರೋಗ್ಯ ಸಂಸ್ಥೆ ಕೂಡ ಇದಾಗಲೇ ಈ ಮಾರಕ ರೋಗದ ಕಾರಣ ಜಾಗತಿಕ ಎಮರ್ಜೆನ್ಸಿ ಘೋಷಿಸಿದೆ. ಆದರೆ ಇದೀಗ ಕನ್ನಡಿಗರು ಆಘಾತಕ್ಕೊಳಗಾಗಬೇಕಾಗಿರುವ ಇನ್ನೊಂದು ಆತಂಕದ ಸುದ್ದಿ ಹೊರಬಿದ್ದಿದೆ, ಅದೆಂದರೆ ಒಟ್ಟೂ 10 ಕೊರೋನಾ ಶಂಕಿತರು ಬೆಂಗಳೂರಿನ ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಚೆಸ್ಟ್ ಡಿಸೀಸಸ್ ಗೆ ಪರೀಕ್ಷೆಗಾಗಿ ದಾಖಲಾಗಿದ್ದಾರೆ. 

"ಒಟ್ಟಾರೆಯಾಗಿ 10 ರೋಗಿಗಳು ಶುಕ್ರವಾರ ಆಸ್ಪತ್ರೆಗೆ ದಾಖಲಾಗಿದ್ದು ಇದೀಗ ನಾವು ಅವರಿಂದ ರಕ್ತದ ಮಾದರಿಗಳನ್ನು ಪಡೆದು ಪರೀಕ್ಷೆಗೆ ಕಳುಹಿಸಿದ್ದೇವೆ. ಅವರು ಇನ್ಫ್ಲುಎಂಜಾ ಜ್ವರದ ಲಕ್ಷಣ ಹೊಂದಿದ್ದರು. ಇದೀಗ ಅವರನ್ನು ತೀವ್ರ ನಿಗಾದಲ್ಲಿರಿಸಿದ್ದೇವೆ. . . ಇನ್ನೊಂದೆಡೆ ವುಹಾನ್‌ನಿಂದ ಹಿಂದಿರುಗಿದ ಮೂವರು ರೋಗಿಗಳನ್ನು ಆಸ್ಪತ್ರೆಯ ಪ್ರತ್ಯೇಕ ವಾರ್ಡ್ ಗಳಲ್ಲಿ ಇರಿಸಲಾಗಿದೆ, ಇದರಲ್ಲಿ ಇಬ್ಬರಿಗೆ "ನೆಗೆಟಿವ್" ವರದಿ ಬಂದಿದೆ"ಎಂದು ಆಸ್ಪತ್ರೆಯ ನಿರ್ದೇಶಕ ಸಿ ನಾಗರಾಜ ಹೇಳಿದರು.

ಇಬ್ಬರನ್ನು ಡಿಸ್ಚಾರ್ಜ್ ಮಾಡಲಾಗಿದೆ, ಮೂರನೇ ರೋಗಿಯ ಪರೀಕ್ಷಾ ವರದಿಗಾಗಿ ಕಾಯಲಾಗುತ್ತಿದೆ.ಶುಕ್ರವಾರ ಮೊದಲು ಕರ್ನಾಟಕದಿಂದ ಕಳುಹಿಸಲಾದ 13 ಮಾದರಿಗಳಲ್ಲಿ 12 ಮಾದರಿಗಳು ನೆಗೆಟಿವ್ ಎಂದು ಪರೀಕ್ಷಿಸಲ್ಪಟ್ಟಿದೆ. "ಕೊರೋನಾವೈರಸ್ ಗಳು ಮಾನವರು ಸೇರಿದಂತೆ ಸಸ್ತನಿಗಳ ಉಸಿರಾಟದ ಮೇಲೆ ಸಾಮಾನ್ಯವಾಗಿ ಪರಿಣಾಮ ಬೀರುವ ವೈರಸ್‌ಗಳಾಗಿವೆ. ಅವು ಸಾಮಾನ್ಯ ಶೀತ, ನ್ಯುಮೋನಿಯಾ ಉಸಿರಾಟದ ಸಿಂಡ್ರೋಮ್ (MERS) ಮತ್ತು ತೀವ್ರವಾದ ಉಸಿರಾಟದ ಸಿಂಡ್ರೋಮ್ (SARS) ಗೆ ಸಂಬಂಧಿಸಿವೆ. ಇದು ಕರುಳಿನ ಮೇಲೆ ಸಹ ಪರಿಣಾಮ ಬೀರಬಹುದು, ". ಜ್ವರ, ಕೆಮ್ಮು, ಶೀತಎದೆ, ಶ್ವಾಸಕೋಶದ ಮೇಲೆ  ಇದು ಪರಿಣಾಮ ಬೀರುತ್ತದೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ 4000 ಕ್ಕೂ ಹೆಚ್ಚು ಪ್ರಯಾಣಿಕರ ತಪಾಸಣೆ

ಕಳೆದ 11 ದಿನಗಳಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾರಕ ಕೊರೋನಾವೈರಸ್ ರೋಗಲಕ್ಷಣಗಳಿಗಾಗಿ ಒಟ್ಟು 4,367  ಪ್ರಯಾಣಿಕರನ್ನು ಉನ್ನತ ಮಟ್ಟದತಪಾಸಣೆಗೆ ಒಳಪಡಿಸಲಾಗಿದೆ. ಆರೋಗ್ಯ ಇಲಾಖೆಯ ಸಾಂಕ್ರಾಮಿಕ ರೋಗಗಳ ಜಂಟಿ ನಿರ್ದೇಶಕ ಡಾ.ಬಿ.ಜಿ.ಪ್ರಕಾಶ್ ಮಾತನಾಡಿ, “ನಾವು ಜನವರಿ 20 ರಂದು ವಿಮಾನ ನಿಲ್ದಾಣದಲ್ಲಿ ಥರ್ಮಲ್ ಸ್ಕ್ರೀನಿಂಗ್ ಪ್ರಾರಂಭಿಸಿದ್ದೇವೆ ಮತ್ತು ಜನವರಿ 31 ರವರೆಗೆ ನಾವು 4,367 ಪ್ರಯಾಣಿಕರನ್ನು ಪರೀಕ್ಷಿಸಿದ್ದೇವೆ, ಇದು ದಿನಕ್ಕೆ ಸರಾಸರಿ 350 ಜನರು ಪರೀಕ್ಷೆಗೆ ಒಳಗಾಗಿದ್ದಾರೆ ಎಂದರು.

ಚೀನಾದಿಂದ ಎರಡು ವಿಮಾನಗಳಲ್ಲಿ ಬರುವ ಪ್ರಯಾಣಿಕರಿಗಾಗಿ ಮತ್ತು ಮೂರನೇ ವಿಮಾನವು ಇತರ ಭಾರತೀಯ ನಗರಗಳಿಗೆ ಸಾಗುವ ಮುನ್ನ ಬೆಂಗಳೂರಿನಲ್ಲಿ ಇಳಿಯುತ್ತದೆ. "ನಾವು ಜ್ವರದ  ರೋಗಲಕ್ಷಣಗಳನ್ನು ಪರಿಶೀಲಿಸುತ್ತೇವೆ ಮತ್ತು ಅವುಗಳನ್ನು ತೋರಿದ ಯಾವುದೇ ಪ್ರಯಾಣಿಕರನ್ನು ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್  ಆಸ್ಪರತ್ರೆಗೆ ಪರೀಕ್ಷೆಗೆ ಕಳುಹಿಸುತ್ತೇವೆ"ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಶೃಂಗೇರಿ ಮತ ಎಣಿಕೆ Video ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ..!

ಸ್ಥಳೀಯ ಸಂಸ್ಥೆಗಳಿಗೂ ಜಿಎಸ್‌ಟಿ ಆದಾಯ ಹಂಚಿಕೆ: GST ಮಂಡಳಿಗೆ ರಾಜ್ಯ ಸರ್ಕಾರ ಪ್ರಸ್ತಾವನೆ

ಸ್ಟಿಂಗ್‌ ಆಪರೇಷನ್‌ ಬಗ್ಗೆ ಬೇರೆಯವರು ಮಾತನಾಡುವ ಆಗಿಲ್ಲ ಎನ್ನಲು ನೀವೇನು ಸರ್ವಾಧಿಕಾರಿಯೇ ಪ್ರಿಯಾಂಕ್‌ ಖರ್ಗೆ..?

1 ವರ್ಷ ಗ್ಯಾರಂಟಿ ಯೋಜನೆಗಳ ನಿಲ್ಲಿಸಿ, ಹಣವನ್ನು ರೈತರಿಗೆ ನೀಡಿ: ರಾಜ್ಯ ಸರ್ಕಾರಕ್ಕೆ ದಿಂಗಾಲೇಶ್ವರ ಶ್ರೀಗಳ ಆಗ್ರಹ

ಬೆಂಗಳೂರು: ನಮ್ಮ ಮೆಟ್ರೋ ರೈಲಿನಲ್ಲಿ 18 ನಿಮಿಷದಲ್ಲಿ ಜೀವಂತ ಹೃದಯ ಸಾಗಾಟ!