ಹೊಸ ಸಚಿವರಿಗೆ ಕಾರುಗಳು ಸಿದ್ದ, 9 ಸಂಖ್ಯೆಯ ಕಾರಿಗಳಿಗೆ ಹೆಚ್ಚಿದ ಬೇಡಿಕೆ 
ರಾಜ್ಯ

ಸಂಪುಟ ವಿಸ್ತರಣೆಗೆ ಕ್ಷಣಗಣನೆ ಆರಂಭ: ಹೊಸ ಸಚಿವರಿಗೆ ಕಾರುಗಳು ಸಿದ್ದ, 9 ಸಂಖ್ಯೆಯ ಕಾರುಗಳಿಗೆ ಹೆಚ್ಚಿದ ಬೇಡಿಕೆ

ನೂತನ ಸಚಿವರಾಗಿ ಪದಗ್ರಹಣ ಮಾಡುವ ಶಾಸಕರಿಗೆ ಕಾರುಗಳು ಸಿದ್ಧವಾಗಿದ್ದು, ಕುಮಾರಕೃಪಾ ಗೆಸ್ಟ್ ಹೌಸ್ ನಲ್ಲಿ ಸಾಲಾಗಿ ನಿಲ್ಲಿಸಲಾಗಿದೆ. ನೋಂದಣಿ ಸಂಖ್ಯೆಗಳನ್ನು ಕೂಡಿದರೆ 9ನೇ ಸಂಖ್ಯೆ ಬರುವಂತಹ ಕಾರುಗಳಿಗೆ ನೂತನ ಸಚಿವರಿಂದ ಹೆಚ್ಚಿನ ಬೇಡಿಕೆ ಇರುವ ಕಾರಣ ಅದೇ ಸಂಖ್ಯೆಯ ಕಾರುಗಳನ್ನು ನೀಡಲಾಗುತ್ತಿದೆ.

ಬೆಂಗಳೂರು: ನೂತನ ಸಚಿವರಾಗಿ ಪದಗ್ರಹಣ ಮಾಡುವ ಶಾಸಕರಿಗೆ ಕಾರುಗಳು ಸಿದ್ಧವಾಗಿದ್ದು, ಕುಮಾರಕೃಪಾ ಗೆಸ್ಟ್ ಹೌಸ್ ನಲ್ಲಿ ಸಾಲಾಗಿ ನಿಲ್ಲಿಸಲಾಗಿದೆ. ನೋಂದಣಿ ಸಂಖ್ಯೆಗಲನ್ನು ಕೂಡಿದರೆ 9ನೇ ಸಂಖ್ಯೆ ಬರುವಂತಹ ಕಾರುಗಳಿಗೆ ನೂತನ ಸಚಿವರಿಂದ ಹೆಚ್ಚಿನ ಬೇಡಿಕೆ ಇರುವ ಕಾರಣ ಅದೇ ಸಂಖ್ಯೆಯ ಕಾರುಗಳನ್ನು ನೀಡಲಾಗುತ್ತಿದೆ. 

ಗುರುವಾರ ಬೆಳಿಗ್ಗೆ ಕಾರುಗಳು ರಾಜಭವನಕ್ಕೆ ಕಳುಹಿಸಿಕೊಡಲಾಗುತ್ತದೆ. ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ನೂತನ ಸಚಿವರಿಗೆ ರಾಜಭವನದಲ್ಲಿಯೇ ಕಾರುಗಳನ್ನು ಹಸ್ತಾಂತರ ಮಾಡಲಾಗುತ್ತದೆ. ಸಚಿವರಿಗೆ ಇನ್ನೋವಾ ಮತ್ತು ಇನ್ನೋವಾ ಕ್ರಿಸ್ಟಾ ಕಾರುಗಳನ್ನು ನೀಡಲಾಗುವುದು. ಯಾವ ಸಚಿವರಿಗೆ ಯಾವ ಕಾರು ಎನ್ನುವ ಪಟ್ಟಿಯನ್ನು ಕೂಡ ಈಗಾಗಲೇ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ಸಿದ್ಧಪಡಿಸಿದೆ ಎಂದು ವರದಿಗಳು ತಿಳಿಸಿವೆ. 

ಈ ನಡುವೆ ಶಾಸಕ ನಾರಾಯಣ ಗೌಡ ಸೇರಿದಂತೆ ಇತರೆ ಶಾಸಕರು ಸಚಿವರಾಗುವುದ ಖಚಿತವಾಗಿರುವ ಹಿನ್ನೆಲೆಯಲ್ಲಿ ಕೆ.ಕೆ.ಗೆಸ್ಟ್ ಹೌಸ್'ಗೆ ತೆರಳಿ ಯಾವ ಸಂಖ್ಯೆಯ ಕಾರು ಬಳಸಬೇಕು ಎಂಬುದರ ಬಗ್ಗೆ ಪರಿಶೀಲನೆ ನಡೆಸಿದರು. ಅದೃಷ್ಟದ ಸಂಖ್ಯೆ ಒಂಬತ್ತಕ್ಕೆ ಹೆಚ್ಚಿನ ಬೇಡಿಕೆ ಇದ್ದು. ಅದೇ ಸಂಖ್ಯೆಯ ಕಾರನ್ನು ಆಯ್ಕೆ ಮಾಡಿಕೊಂಡಿದ್ದಾರೆ. 

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿರುವ ನಾರಾಯಣ ಗೌಡ ಅವರು, ನನ್ನ ಎಲ್ಲಾ ಕಾರುಗಳ ಸಂಖ್ಯೆಯು 9 ರಿಂದ ಕೊನೆಗೊಂಡಿದೆ. ಅಂತಹ ಸಂಖ್ಯೆ ಇದೆಯೇ ಎಂದು ನೋಡಿದೆ. ಶೇ.90 ರಷ್ಟು ಅದೇ ಸಂಖ್ಯೆಯ ಕಾರುಗಳನ್ನು ತರಿಸಲಾಗಿದೆ. ನಾವೇನು ಬಯಸಿದ್ದೇವೋ ಅದೇ ಸಿಗುವ ನಂಬಿಕೆ ಇತ್ತು. ಅದೇ ಸಿಕ್ಕಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸುಪ್ರೀಂ ಕೋರ್ಟ್‌ನಲ್ಲೂ ಕರ್ನಾಟಕಕ್ಕೆ ಹಿನ್ನಡೆ: ಕಾವೇರಿ ವಿಚಾರಣೆ ಒಂದು ವಾರ ಮುಂದೂಡಿಕೆ, CWMA ಆದೇಶ ಪಾಲಿಸಲು ಸೂಚನೆ..!

Rahul Gandhi ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಬ್ರೇಕ್! ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ

ಯುರೋಪ್‌ನಲ್ಲಿ ಯುದ್ಧದ ಭೀತಿ: ಉಕ್ರೇನ್‌ನಲ್ಲಿರುವ ಭಾರತದ ಬಿಲಿಯನೇರ್‌ ಉದ್ಯಮಿಯ ಕಾರ್ಖಾನೆ ಮೇಲೆ ರಷ್ಯಾ ದಾಳಿ!

ಹನೂರು ಶೂಟೌಟ್ ಪ್ರಕರಣ: ಮೃತರ ಕುಟುಂಬಸ್ಥರಿಗೆ 15 ಲಕ್ಷ ರೂ. ಪರಿಹಾರ ವಿತರಣೆ, ಪ್ರತಿಭಟನೆ ವಾಪಸ್

ನಿನ್ನಿಂದಲೇ ಇಡೀ ಇಲಾಖೆ ಮರ್ಯಾದೆ ಹೋಯಿತು: ಪ್ರಜ್ವಲ್ ರೇವಣ್ಣಗೆ ಅಲೋಕ್ ಕುಮಾರ್ 'ಸ್ಪೆಷಲ್ ಕ್ಲಾಸ್'