ರಾಜ್ಯ

ಬಾಗಲಕೋಟೆ: ನಕಲಿ ಬಂಗಾರ ವಂಚನೆ ಪ್ರಕರಣ ಬಯಲಿಗೆ, ಓರ್ವನ ಬಂಧನ

Shilpa D

ಬಾಗಲಕೋಟೆ: ನಕಲಿ ಬಂಗಾರವನ್ನು ಅಸಲಿ ಎಂದು ನಂಬಿಸಿ ವ್ಯಕ್ತಿಯನ್ನು ವಂಚಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಜಿಲ್ಲೆಯ ಮುಧೋಳ ಪೊಲೀಸರು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕು ಚಿಲಕನಕಟ್ಟಿಯ ಕೆ. ಪರಶುರಾಮ(೨೯) ಎಂಬುವರನ್ನು ಬಂಧಿಸಿದ್ದಾರೆ. 

ಬಂಧಿತ ಆರೋಪಿಯಿಂದ ೨.೦೫ ಲಕ್ಷ ನಗದು ಹಾಗೂ ೧೨೫.೭೩೦ ಗ್ರಾಮ ತೂಕದ ನಕಲಿ ಚಿನ್ನದ ನಾಣ್ಯಗಳನ್ನು ವಶಪಡಿಸಿಕೊಂಡಿದ್ದಾರೆ.

ಹಿನ್ನೆಲೆ: ಮುಧೋಳದ ಮಹಾಂತೇಶ ಸುಣಗಾರ ಅವರು ಮುಧೋಳ ತಳಿಇಯ ನಾಯಿಗಳ ಮಾರಾಟ ವ್ಯಾಪಾರ ಮಾಡುತ್ತಿದ್ದು, ಈ ಬಗ್ಗೆ ಅವರು   ಜಾಹಿರಾತು ನೀಡಿದ್ದರು.

ಅದರಲ್ಲಿ ಮೊಬೈಲ್ ಸಂಖ್ಯೆ ನೋಡಿಕೊಂಡು ಪರಶುರಾಮ ಕರೆ ಮಾಡಿ ಮುಧೋಳ ನಾಯಿ ತಳಿ ಕುರಿತು ವಿವರ ಪಡೆದಿದ್ದರು. ಬಳಿಕ ಮಹಾಂತೇಶ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಮೀನಿನಲ್ಲಿ ನಿಧಿ ಸಿಕ್ಕಿದೆ. ೧೭ ಲಕ್ಷ ರೂ. ಮೌಲ್ಯದ ಚಿನ್ನದ ನಾಣ್ಯಗಳಿವೆ. ೨.೫ ಲಕ್ಷ ರೂ. ಕೊಟ್ಟಲ್ಲಿ ನಿಮಗೆ ಕೊಡುವೆ ಎಂದು ನಂಬಿಸಿ ಅಸಲಿ ಚಿನ್ನದ ತುಣುಕು ನೀಡಿದ್ದ. 

ಇದನ್ನೇ ನಂಬಿದ ಮಹಾಂತೇಶ ಹಣ ನೀಡಿ ನಾಣ್ಯಗಳನ್ನು ಖರೀದಿಸಿದ್ದರು. ಬಳಿಕ ಅವುಗಳ ಪರಿಶೀಲನೆ ನಡೆಸಿದ ವೇಳೆ ಅವೆಲ್ಲ ನಕಲಿ ಎಂದು ಗೊತ್ತಾಗಿ ಮುಧೋಳ ಠಾಣೆಗೆ ದೂರು ನೀಡಿದ್ದರು.

ಪ್ರಕರಣವನ್ನು ದಾಖಲಿಸಿಕೊಂಡ ಪೊಲಿಸರು ಎರಡನೇ ದಿನದಲ್ಲಿ ವಂಚಿತ ಪರಶುರಾಮನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಾಗಲಕೋಟೆ ಬಳಿಯ ಗದ್ದನಕೇರಿ ಕ್ರಾಸ್‌ನಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು, ಆತನಿಂದ ೯೦ ಗ್ರಾಮ ತೂಕದ  ೩.೬೦ ಲಕ್ಷ ರೂ. ಮೌಲ್ಯದ ಚಿನ್ನ ವಶ ಪಡಿಸಿಕೊಂಡಿದ್ದಾರೆ.

ಹುನಗುಂದ ತಾಲೂಕು ರಕ್ಕಸಗಿಯ ಶಿವಪ್ಪ ಯಮನಪ್ಪ ವಡ್ಡರ ಎಂಬುವವನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ವೇಳೆ ಸೀಮಿಕೇರಿ, ಗದ್ದನಕೇರಿ, ಶಿರೂರ ಗ್ರಾಮಗಳಲ್ಲಿ ಮನೆಗಳನ್ನು ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

ಕಳ್ಳತನ ಮಾಡಿದ್ದ ಚಿನ್ನಾಭರಣವನ್ನು ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣವನ್ನು ಕಲಾದಗಿ ಠಾಣೆಯಲ್ಲಿ ದಾಖಲಿಸಿಕೊಂಡಿದ್ದಾರೆ.

SCROLL FOR NEXT