ರಾಜ್ಯ

ಇನ್ನು ಮುಂದೆ ಸೈಟು, ಆಸ್ತಿಯ ನಕಲಿ ದಾಖಲೆ ಸೃಷ್ಟಿ ಅಸಾಧ್ಯ: ಬಿಡಿಎಯಿಂದ ಆನ್ ಲೈನ್ ನಲ್ಲಿ ಭೂ ದಾಖಲಾತಿ 

ನಕಲಿ ದಾಖಲೆಗಳ ಮೂಲಕ ಆಸ್ತಿಗಳನ್ನು ಮಾರಾಟ ಮಾಡುವ ವಂಚನೆಯಿಂದ ತಪ್ಪಿಸಲು ಎಲ್ಲಾ ಭೂ ದಾಖಲೆಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸದ್ಯದಲ್ಲಿಯೇ ಆನ್ ಲೈನ್ ವ್ಯವಸ್ಥೆಗೊಳಪಡಿಸಲಿದೆ.

ಬೆಂಗಳೂರು: ನಕಲಿ ದಾಖಲೆಗಳ ಮೂಲಕ ಆಸ್ತಿಗಳನ್ನು ಮಾರಾಟ ಮಾಡುವ ವಂಚನೆಯಿಂದ ತಪ್ಪಿಸಲು ಎಲ್ಲಾ ಭೂ ದಾಖಲೆಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸದ್ಯದಲ್ಲಿಯೇ ಆನ್ ಲೈನ್ ವ್ಯವಸ್ಥೆಗೊಳಪಡಿಸಲಿದೆ.


ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ತನ್ನ ಸಾಫ್ಟ್ ವೇರ್ ನಲ್ಲಿ ಇದಕ್ಕೆ ಸಂಬಂಧಿಸಿದ ಕೆಲಸಗಳನ್ನು ಪೂರ್ಣಗೊಳಿಸಿದ್ದು, ಇನ್ನು ಮುಂದೆ ಇ-ಖಾತಾ ಸೇವೆಗಳನ್ನು ನೋಂದಣಿ ಮತ್ತು ದಾಖಲಾತಿ ಇಲಾಖೆಯ ಕಾವೇರಿ ಆನ್ ಲೈನ್ ಸೇವೆ ಜೊತೆ ಸಂಪರ್ಕ ಕಲ್ಪಿಸಲಿದೆ.
ಬಿಡಿಎ ವ್ಯಾಪ್ತಿಯೊಳಗೆ ಬರುವ ಎಲ್ಲಾ ಆಸ್ತಿಗಳು ಮತ್ತು ಬಿಡಿಎಯಿಂದ ಒಪ್ಪಿಗೆ ಪಡೆದಿರುವ ಖಾಸಗಿ ಭೂಮಿಗಳು ಈ ಆನ್ ಲೈನ್ ಸೇವೆಯೊಳಗೆ ಬರುತ್ತವೆ. ಆಸ್ತಿಗಳ ಮಾರಾಟ ಮತ್ತು ಕೊಳ್ಳುವಿಕೆಯಲ್ಲಿ ಪಾರದರ್ಶಕತೆ, ಖರೀದಿದಾರರು ಮೋಸ ಹೋಗುವುದನ್ನು ತಪ್ಪಿಸಲು ಬಿಡಿಎ ಈ ಕ್ರಮ ಕೈಗೊಂಡಿದೆ.


ಇಷ್ಟು ವರ್ಷಗಳಲ್ಲಿ ಬಿಡಿಎ ಸೈಟು ಎಂದು ಅಥವಾ ಬೇರೇನೋ ಸುಳ್ಳುಗಳನ್ನು ಹೇಳಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸೈಟುಗಳನ್ನು ಮಾರಾಟ ಮಾಡಿದವರು ಅದೆಷ್ಟೋ ಮಂದಿ. ಇದರಲ್ಲಿ ಬಿಡಿಎಯ ಹಲವು ನೌಕರರು ಸಹ ಭಾಗಿಯಾದ ಉದಾಹರಣೆಗಳು ಸಾಕಷ್ಟಿವೆ. 


ಆಸ್ತಿಗಳ ಭೌತಿಕ ದಾಖಲಾತಿಯನ್ನು ಇತ್ತೀಚೆಗೆ ನಿಲ್ಲಿಸಲಾಗಿದೆ. ಸಬ್ ರಿಜಿಸ್ಟ್ರಾರ್ ಆಫೀಸುಗಳಲ್ಲಿ ಆನ್ ಲೈನ್ ಪೋರ್ಟಲ್ ಮೂಲಕ ದಾಖಲಾತಿ ಪಡೆಯುವ ಸೌಲಭ್ಯ ನೀಡಿ ಸೈಟು, ಆಸ್ತಿ ಖರೀದಿದಾರರಿಗೆ ನಿಗದಿತ ಸೈಟುಗಳ ಸಂಪೂರ್ಣ ದಾಖಲೆಗಳು ದೊರಕುವಂತೆ ಮಾಡಲಾಗುತ್ತದೆ.ಈ ಆನ್ ಲೈನ್ ವ್ಯವಸ್ಥೆಯನ್ನು ಬಿಡಿಎ ಸದ್ಯದಲ್ಲಿಯೇ ಜಾರಿಗೆ ತರಲಿದೆ.


ಈ ಸಾಫ್ಟ್ ವೇರ್ ನ ಮತ್ತೊಂದು ಪ್ರಯೋಜನ ಖಾಸಗಿ ಬಿಲ್ಡರ್ ಗಳಿಂದ ಆಸ್ತಿ ಖರೀದಿದಾರರನ್ನು ಕಾಪಾಡುವುದು. ಅನೇಕ ಕಡೆ ಖಾಸಗಿ ಬಿಲ್ಡರ್ ಗಳು ಅಕ್ರಮ ಭೂಮಿಗಳನ್ನು, ಸೈಟ್ ಗಳನ್ನು, ಮನೆಗಳನ್ನು ಮಾರಾಟ ಮಾಡುತ್ತಾರೆ. ಖಾಸಗಿ ಬಿಲ್ಡರ್ ಗಳು ಖರೀದಿದಾರರಿಗೆ ನಿರ್ದಿಷ್ಟ ಸೈಟ್ ಅಥವಾ ಭೂಮಿ ತೋರಿಸಿ ಅದನ್ನು ಲೇ ಔಟ್ ಆಗಿ ಅಭಿವೃದ್ಧಿಪಡಿಸಿ ಎಲ್ಲಾ ಮೂಲಭೂತ ಸೌಕರ್ಯ ಒದಗಿಸುತ್ತೇವೆ ಎಂದು ಹೇಳುತ್ತಾರೆ. ಆದರೆ ನಂತರ ಯಾವುದೇ ಸೌಕರ್ಯ ಒದಗಿಸಿಕೊಡುವುದಿಲ್ಲ. ಆದರೆ ಅಭಿವೃದ್ಧಿ ನೀಡುತ್ತೇವೆ ಎಂದು ನಂಬಿಸಿ ಸಾಕಷ್ಟು ಹಣವನ್ನು ಸೈಟು ಖರೀದಿದಾರರಿಂದ ಪಡೆಯುತ್ತಾರೆ. ಖರೀದಿದಾರರು ತಾವು ಮೋಸ ಹೋಗಿದ್ದೇವೆ ಎಂದು ಗೊತ್ತಾಗುವುದು ಬಿಬಿಎಂಪಿಗೆ ತೆರಿಗೆ ಪಾವತಿಸಲು ಹೋದಾಗ ಅಥವಾ ಸೈಟ್ ನಲ್ಲಿ ಮನೆ ಕಟ್ಟಲು ಆರಂಭಿಸಿದಾಗಲೇ.


ಬೆಂಗಳೂರಿನ ಕೆಂಪೇಗೌಡ ಲೇ ಔಟ್, ವಿಶ್ವೇಶ್ವರಯ್ಯ ಲೇ ಔಟ್, ಅಂಜನಾಪುರ ಲೇ ಔಟ್ ಮತ್ತು ಬನಶಂಕರಿ ಲೇ ಔಟ್ ನ ಕೆಲ ಭಾಗಗಳು ಬಿಡಿಎ ಅಧೀನದಲ್ಲಿವೆ. ಇದರ ಜೊತೆಗೆ ಇನ್ನೂ ಅಸಂಖ್ಯಾತ ಲೇ ಔಟ್ ಗಳು ಕೂಡ ಇವೆ. ಈ ಎಲ್ಲಾ ಲೇ ಔಟ್ ಗಳನ್ನು ಒಂದೇ ವ್ಯವಸ್ಥೆಯಡಿ ಒಗ್ಗೂಡಿಸಲಾಗುವುದು ಎಂದು ಬಿಡಿಎ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT