ರಾಜ್ಯ

2022ರವರೆಗೆ ಹೊಸ ಫಾರ್ಮಸಿ ಕಾಲೇಜುಗಳಿಗೆ ಅನುಮತಿಯಿಲ್ಲ: ಎಐಸಿಟಿಇ

Sumana Upadhyaya

ಬೆಂಗಳೂರು: ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಶೇಕಡಾ 50ರಷ್ಟು ಸೀಟುಗಳು ಖಾಲಿ ಉಳಿದಿವೆ ಎಂದು ವರ್ಷದ ಹಿಂದೆ ಬಿವಿಆರ್ ಮೋಹನ್ ರೆಡ್ಡಿ ನೇತೃತ್ವದ ಸಮಿತಿ ವರದಿ ನೀಡಿತ್ತು. ಹೀಗಾಗಿ 2022ರವರೆಗೆ ಯಾವುದೇ ಹೊಸ ಕಾಲೇಜುಗಳನ್ನು ಆರಂಭಿಸುವುದು ಬೇಡ ಎಂದು ಕೂಡ ಹೇಳಿತ್ತು.


ಅದಕ್ಕೆ ಹೊರತಾಗಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ(ಎಐಸಿಟಿಇ) ಅಧ್ಯಕ್ಷ ಅನಿಲ್ ಸಹಸ್ರಬುದೆ ಕೂಡ ಹೊಸ ಫಾರ್ಮಸಿ ಕಾಲೇಜುಗಳ ಸ್ಥಾಪನೆಗೆ ಅನುಮತಿಯನ್ನು ನಿಲ್ಲಿಸಲಾಗಿದೆ ಎಂದು ಹೇಳಿದ್ದರು.


ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಎಐಸಿಟಿಇ, ಹೊಸ 900 ಫಾರ್ಮಸಿ ಕಾಲೇಜುಗಳನ್ನು ಕೇವಲ 1 ವರ್ಷದಲ್ಲಿ ಸ್ಥಾಪಿಸಲಾಗಿದೆ ಎಂದು ಹೇಳಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ 2022ರವರೆಗೆ ಯಾವುದೇ ಹೊಸ ಕಾಲೇಜುಗಳನ್ನು ಸ್ಥಾಪಿಸುವುದಿಲ್ಲ. ಸುಪ್ರೀಂ ಕೋರ್ಟ್ ಹೊಸ ಕಾಲೇಜುಗಳ ಸ್ಥಾಪನೆಗೆ ತಾತ್ಕಾಲಿಕ ತಡೆ ನೀಡಿದ್ದು ನಮ್ಮಲ್ಲಿ ಅರ್ಜಿಗಳನ್ನು ಸ್ವೀಕರಿಸುವಂತೆ ಹೇಳಿದ್ದಾರೆ. ಕಾಲೇಜುಗಳಿಗೆ ಅನುಮತಿ ಕೊಡುವುದು, ಬಿಡುವುದು ಸುಪ್ರೀಂ ಕೋರ್ಟ್ ನ ಅಂತಿಮ ತೀರ್ಪಿಗೆ ಬಿಟ್ಟಿದ್ದು ಎಂದು ಸಹಸ್ರಬುದೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.


ಆದರೆ ಸರ್ಕಾರಿ ಕಾಲೇಜುಗಳಿಲ್ಲದ ಮುಖ್ಯ ಜಿಲ್ಲೆಗಳಲ್ಲಿ ಹೊಸ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಿಗೆ ಅನುಮತಿ ನೀಡಲಾಗುತ್ತದೆ. ದೇಶದಲ್ಲಿ 272 ಪ್ರಮುಖ ಜಿಲ್ಲೆಗಳನ್ನು ಗುರುತಿಸಲಾಗಿದೆ ಎಂದು ಸಹಸ್ರಬುದೆ ಹೇಳಿದರು.

SCROLL FOR NEXT