ರಾಜ್ಯ

ಮಕ್ಕಳ ಯೋಗಕ್ಷೇಮ ಸಮೀಕ್ಷೆಯಲ್ಲಿ ಭಾರತಕ್ಕೆ 131ನೇ ಸ್ಥಾನ 

Sumana Upadhyaya

ಬೆಂಗಳೂರು: ಮಗುವನ್ನು ಆರೋಗ್ಯಕರ ವಾತಾವರಣ ಮತ್ತು ಉತ್ತಮ ಭವಿಷ್ಯದಡಿಯಲ್ಲಿ ದೇಶಗಳು ಬೆಳೆಸುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಘಟನೆಯ ವರದಿ ತಿಳಿಸಿದೆ ಎಂದು ಬ್ರಿಟನ್ ನ ಆರೋಗ್ಯ ಸಂಶೋಧನೆ ಪತ್ರಿಕೆ ಲ್ಯಾನ್ಸೆಟ್ ಮತ್ತು ಯುನಿಸೆಫ್ ತಿಳಿಸಿದೆ.

ಈ ವರದಿಯಲ್ಲಿ ಭಾರತಕ್ಕೆ 77ನೇ ಸ್ಥಾನ ಸಿಕ್ಕಿದೆ. ಒಟ್ಟು 180 ದೇಶಗಳ ಬಗ್ಗೆ ಈ ಅಧ್ಯಯನ ಮಾಡಲಾಗಿದ್ದು ಮಕ್ಕಳನ್ನು ಯಾವ ರೀತಿ ಬೆಳೆಸಲಾಗುತ್ತಿದೆ ಎಂದು ಪರಿಗಣಿಸಲಾಗಿದೆ. 40 ಮಕ್ಕಳು ಮತ್ತು ವಯಸ್ಕರ ಮೇಲೆ ಈ ಅಧ್ಯಯನ ನಡೆಸಲಾಗಿದೆ. 

ವರದಿಯಲ್ಲಿ ಏನು ಹೇಳಲಾಗಿದೆ: 

ದೇಶಗಳು ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಪರಿಸರ ರಕ್ಷಣೆ ಎಂದರೆ ಹವಾಮಾನ ಬದಲಾವಣೆ ಮಾತ್ರವಲ್ಲ. ಮಕ್ಕಳಲ್ಲಿ ಅಪೌಷ್ಟಿಕತೆ, ಹಿಂಸಾತ್ಮಕ ಜಾಹೀರಾತು, ಸಿನೆಮಾ ವೀಕ್ಷಣೆ, ಸೋಂಕು ರೋಗಗಳಿಗೆ ಒಡ್ಡುವುದು, ಜಾಗತಿಕ ತಾಪಮಾನ ಈ ಎಲ್ಲಾ ವಿಷಯಗಳು ಸೇರುತ್ತದೆ. ಇವೆಲ್ಲವೂ ನೋಡಿದರೆ ಇಂದಿನ ಮಕ್ಕಳಿಗೆ ಸರಿಯಾದ ಆರೋಗ್ಯ, ಪರಿಸರ, ಪೋಷಕರಿಂದ ಭವಿಷ್ಯದ ಬಗ್ಗೆ ಸೂಕ್ತ ಕಾಳಜಿ ಸಿಗುತ್ತಿಲ್ಲ ಎನ್ನುತ್ತಾರೆ ವಿಜ್ಞಾನಿ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ರಾಜೆ ಗೌಡ.

ಜಗತ್ತಿನಲ್ಲಿ 2 ಬಿಲಿಯನ್ ಜನರು ವಾಸಿಸುತ್ತಿರುವ ಪ್ರದೇಶಗಳಲ್ಲಿ ಮಾನವೀಯ ಸಂಘರ್ಷ, ನೈಸರ್ಗಿಕ ವಿಕೋಪ, ಹವಾಮಾನ ಬದಲಾವಣೆ, ಅಭಿವೃದ್ಧಿಗೆ ಹಿನ್ನಡೆಯಾಗಿರುವ ಘಟನೆಗಳು ನಡೆಯುತ್ತಿರುತ್ತದೆ ಎಂದು ವರದಿ ಹೇಳುತ್ತದೆ.ಇಂದಿನ ಮಾಧ್ಯಮಗಳು, ಪ್ರಚಾರ, ಜಾಹೀರಾತುಗಳು ಮಕ್ಕಳ ಆರೋಗ್ಯಕ್ಕೆ ಮತ್ತು ಅವರ ಭವಿಷ್ಯಕ್ಕೆ ಕುತ್ತುಂಟುಮಾಡುತ್ತಿವೆ ಎಂದು ವರದಿ ಹೇಳಿದೆ.

ವರದಿಯ ಪ್ರಕಾರ, ಸುಸ್ಥಿರತೆ ಸೂಚ್ಯಂಕದಲ್ಲಿ ಭಾರತವು 77 ನೇ ಸ್ಥಾನದಲ್ಲಿದೆ ಮತ್ತು ತಲಾ ಇಂಗಾಲದ ಹೊರಸೂಸುವಿಕೆಯನ್ನು ಗಣನೆಗೆ ತೆಗೆದುಕೊಂಡರೆ 180 ದೇಶಗಳಲ್ಲಿ ಭಾರತ 131ನೇ ಸ್ಥಾನದಲ್ಲಿದೆ, ಇದು ಮಕ್ಕಳ ಉಳಿವು ಮತ್ತು ಯೋಗಕ್ಷೇಮಕ್ಕೆ ಸಂಬಂಧಿಸಿದಂತೆ ಅಳತೆ ಮಾಡುತ್ತದೆ.

SCROLL FOR NEXT